ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ 73ನೇ ಹುಟ್ಟುಹಬ್ಬವಾದ ಇಂದು ಎಐಎಡಿಎಂಕೆ (AIADMK) ನಾಯಕರು ಜಯಲಲಿತಾ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ, ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಮೊದಲಾದವರು ಜಯಲಲಿತಾ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದ್ದಾರೆ. ಚೆನ್ನೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ.
ಜಯಲಲಿತಾ ಅವರ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ನಂತರ ಜಯಲಲಿತಾ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ವಿ.ಕೆ ಶಶಿಕಲಾ ನಾವೆಲ್ಲರೂ ಸಂಘಟಿತವಾಗಿದ್ದುಕೊಂಡು ಮತ್ತೆ ಅಧಿಕಾರಕ್ಕೆ ಬರೋಣ ಎಂದಿದ್ದಾರೆ. ಟಿಟಿವಿ ದಿನಕರನ್ ಕೂಡಾ ವಿ.ಕೆ. ಶಶಿಕಲಾ ಜತೆಗಿದ್ದರು.
#HBDAmma73 #HBDAmma pic.twitter.com/6DeHzpGrYR
— AIADMK (@AIADMKOfficial) February 24, 2021
ತಮಿಳುನಾಡಿನಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಎಐಎಡಿಎಂಕೆ ಪಕ್ಷವು ಜಯಲಲಿತಾ ಅವರ ಆಡಳಿತದ ದಿನಗಳನ್ನು ಮರಳಿಸಲು ಪ್ರಯತ್ನಿಸುತ್ತಿದೆ.
ಜಯಲಲಿತಾರನ್ನು ಸ್ಮರಿಸಿದ ಮೋದಿ
ಜಯಲಲಿತಾ ಅವರ ಜನ್ಮದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಜಯಲಲಿತಾ ಜೀ ಅವರ ಜನ್ಮದಿನದಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ತನ್ನ ಜನ ಪರವಾದ ನೀತಿಗಳು ಮತ್ತು ದೀನ ದಲಿತರನ್ನು ಸಬಲೀಕರಣಗೊಳಿಸುವ ಅವರ ಪ್ರಯತ್ನಗಳು ವ್ಯಾಪಕ ಮೆಚ್ಚುಗೆ ಪಡೆದಿವೆ. ಅವರು ನಮ್ಮ ನಾರೀಶಕ್ತಿಯನ್ನು ಸಶಕ್ತಗೊಳಿಸಲು ಉತ್ತಮ ಪ್ರಯತ್ನಗಳನ್ನು ಮಾಡಿದ್ದರು. ನಾನು ಅವರೊಂದಿಗೆ ನಡೆಸಿದ ಸಂವಹನಗಳನ್ನು ಪ್ರೀತಿಯಿಂದ ನೆನೆಯುತ್ತೇನೆ ಎಂದಿದ್ದಾರೆ ಮೋದಿ.
Remembering Jayalalithaa Ji on her birth anniversary. She is widely admired for her pro-people policies and efforts to empower the downtrodden. She also made noteworthy efforts to empower our Nari Shakti. I will always cherish my several interactions with her. pic.twitter.com/nyV3xz1Lb8
— Narendra Modi (@narendramodi) February 24, 2021
ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಜಯಲಲಿತಾ ಅವರನ್ನು ನೆನಪಿಸಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿ ಚುನಾವಣೆ ಎದುರಿಸಲಿದೆ.
2016 ಡಿಸೆಂಬರ್ 5 ರಂದು ಜಯಲಲಿತಾ ನಿಧನರಾಗಿದ್ದರು. 5 ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಮ್ಮ, ಪುರಚ್ಚಿ ತಲೈವಿ (ಕ್ರಾಂತಿಕಾರಿನಾಯಕಿ) ಎಂದೇ ಖ್ಯಾತರಾಗಿದ್ದವರು. ಅನಾರೋಗ್ಯಕ್ಕೀಡಾಗುವವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಲಲಿತಾ ಕಾರ್ಯ ನಿರ್ವಹಿಸಿದ್ದರು. ಜಯಲಲಿತಾ ಮರಣದ ನಂತರ ಎಐಎಡಿಎಂಕೆಯಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮುಖ್ಯಮಂತ್ರಿ ಎಡಪ್ಪಾಡಿ. ಕೆ ಪಳನಿಸ್ವಾಮಿ ಅವರ ನೇತೃತ್ವದಲ್ಲಿ ಪ್ರಸ್ತುತ ಪಕ್ಷ ಆಡಳಿತ ನಡೆಸುತ್ತಿದೆ. ಏಪ್ರಿಲ್ ತಿಂಗಳಲ್ಲಿ ಇಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ವಿಪಕ್ಷ ಡಿಎಂಕೆ ಜಿದ್ದಾಜಿದ್ದಿನ ಪೈಪೋಟಿ ನೀಡಲು ಸಿದ್ಧವಾಗಿದೆ.
ನಮ್ಮ ಅಮ್ಮ ಜಯಲಲಿತಾ ಅವರ ಆಗ್ರಹದಂತೆ ನಮ್ಮ ಸರ್ಕಾರ ಎಐಎಡಿಎಂಕೆ ಇನ್ನೂ ನೂರು ವರ್ಷ ಇರಬೇಕಿದೆ. ಹಾಗೆ ಇರಬೇಕಾದರೆ ಎಐಎಡಿಎಂಕೆ ಮತ್ತು ಎಎಂಎಂಕೆ (AMMK) ಜತೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಾನು ಶೀಘ್ರದಲ್ಲೇ ನಾಯಕರನ್ನು ಮತ್ತು ಜನರನ್ನು ಭೇಟಿ ಮಾಡುತ್ತೇನೆ ಎಂದು ವಿ.ಕೆ.ಶಶಿಕಲಾ ಹೇಳಿದ್ದಾರೆ.
Chennai: Expelled AIADMK leader VK Sasikala pays tribute to former Tamil Nadu CM J Jayalalithaa on her birth anniversary.
AMMK leader TTV Dhinakaran also present pic.twitter.com/I2SaLmxWBD— ANI (@ANI) February 24, 2021
As our Amma (J Jayalalithaa) wished, our government (AIADMK) should be there even after 100 years. For that to happen, we should contest elections together (AIADMK and AMMK). I wish for the same. I will meet the cadres and people soon: Expelled AIADMK leader VK Sasikala pic.twitter.com/9wWuIspIrv
— ANI (@ANI) February 24, 2021
ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಸೇರಲು ದಿನಕರನ್ ಪ್ರಯತ್ನಿಸುತ್ತಲೇ ಇದ್ದಾರೆ. ಚಿನ್ನಮ್ಮ (ವಿ.ಕೆ.ಶಶಿಕಲಾ) ಅವರಿಗೆ ಅದ್ದೂರಿಯಾಗಿ ಸ್ವಾಗತ ನೀಡಿದ ಜನತೆಗೆ ಧನ್ಯವಾದಗಳು ಎಂದು ದಿನಕರನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೆ ಮುಂದಿನ ಚುನಾವಣೆಯಲ್ಲಿ ಡಿಎಂಕೆಯನ್ನು ಪರಾಭವಗೊಳಿಸಲು ನಾವೆಲ್ಲರೂ ಒಂದಾಗಬೇಕು ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.
ಇದನ್ನೂ ಓದಿ: Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಆಡೋದು ಗೆಲ್ಲುವ ಆಟವೋ? ಒಡೆಯುವ ಆಟವೋ?
Published On - 12:58 pm, Wed, 24 February 21