ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 2012ರಿಂದ 2021ರವರೆಗೆ ಹಲವು ರಾಜಕಾರಣಿಗಳ ವಿರುದ್ಧ ದಾಖಲಿಸಲ್ಪಟ್ಟಿದ್ದ 130 ಮಾನಹಾನಿ ಪ್ರಕರಣಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.¬ ಎಐಎಡಿಎಂಕೆ ಆಡಳಿತದಲ್ಲಿ ಈ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಡಿಎಂಕೆ ನೇತೃತ್ವದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೈಗೊಂಡ ಈ ನಿರ್ಧಾರ ಕಾಂಗ್ರೆಸ್ನ ಹಲವು ನಾಯಕರನ್ನೂ ಸೇರಿಸಿ ಡಿಎಂಕೆ ಪಕ್ಷದ ನಾಯಕರಿಗೆ ಲಾಭ ಸಹಾಯ ಮಾಡಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಜತೆಗೆ ಡಿಎಂಡಿಕೆಯ ವಿಜಯಕಾಂತ್ ಸಹ ಈ ಆದೇಶದ ಫಲಾನುಭವಿಯಾಗಲಿದ್ದಾರೆ.
ಡಿಎಂಡಿಕೆ ಪಕ್ಷದ ಮುಖ್ಯಸ್ಥ ವಿಜಯಕಾಂತ್, ಮತ್ತು ಅವರ ಪತ್ನಿ ಪ್ರೇಮಲತಾ, ಕಾಂಗ್ರೆಸ್ ಮುಖ್ಯಸ್ಥ ಎಲಂಗೊವನ್, ಡಿಎಂಕೆ ಸಂಸದೆ ಕನಿಮೋಳಿ ಮತ್ತು ದಯಾನಿಧಿ ಮಾರನ್ ಅವರು ಸಹ ಈ ಆದೇಶದ ಫಲಾನುಭವಿಗಳಾಗಿದ್ದಾರೆ. ಜತೆಗೆ ಈ ಮುನ್ನ ರಾಜ್ಯದ ಪತ್ರಕರ್ತರು ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಗಳನ್ನೂ ಸಹ ಎಂ.ಕೆ.ಸ್ಟಾಲಿನ್ ಸರ್ಕಾರ ರದ್ದುಗೊಳಿಸಿದೆ. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಡಿಎಂಕೆ ನೀಡಿದ್ದ ಪ್ರಣಾಳಿಕೆಯಲ್ಲೂ ಡಿಎಂಕೆ ಪಕ್ಷ ಪತ್ರಕರ್ತರ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಗಳನ್ನು ರದ್ದುಗೊಳಿಸುವುದಾಗಿ ಆಶ್ವಾಸನೆ ನೀಡಿದ್ದರು.
ತಮಿಳುನಾಡಿನಲ್ಲೂ ಹೆಚ್ಚುತ್ತಿದೆ ಕೊವಿಡ್ ಕೊವಿಡ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೊವಿಡ್ ಲಾಕ್ಡೌನ್ನ್ನು ಆಗಸ್ಟ್ 9ರವರೆಗೆ ವಿಸ್ತರಿಸಿದೆ. ಈಮುಂಚೆ ವಿಧಿಸಿದ್ದ ಕೊವಿಡ್ ಲಾಕ್ಡೌನ್ ನಿಯಮಗಳೇ ಅನ್ವಯವಾಗಲಿದ್ದು, ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೊವಿಡ್ ಮೂರನೇ ಅಲೆ ಬಂದೆರಗುವ ಸಂಭವ ಇರುವುದರಿಂದ ಕೊವಿಡ್ ತಡೆ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಿದ್ದಾರೆ.
ತಮಿಳುನಾಡು ರಾಜ್ಯದಲ್ಲಿ 1,947 ಜನರಿಗೆ ಕೊರೊನಾ ದೃಢಪಟ್ಟಿದ್ದು, ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 25,57,611ಕ್ಕೆ ಏರಿಕೆಯಾಗಿದೆ. 25,57,611 ಸೋಂಕಿತರ ಪೈಕಿ 25,02,627 ಜನರು ಗುಣಮುಖರಾಗಿದ್ದಾರೆ. ತಮಿಳುನಾಡಿನಲ್ಲಿ ಇಂದು 2,193 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಕೊರೊನಾ ಸೋಂಕಿಗೆ 27 ಜನರ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ ಈವರೆಗೆ ಕೊರೊನಾಗೆ 34,050 ಜನರು ನಿಧನರಾಗಿದ್ದಾರೆ. ಸದ್ಯ 20,934 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಇದನ್ನೂ ಓದಿ:
International Flights: ಭಾರತದಲ್ಲಿ ಆ. 31ರವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ
(Tamil Nadu CM MK Stalin cancels 130 defamation cases )