ಚೆನ್ನೈ: ಇಂದು (ಸೆಪ್ಟೆಂಬರ್ 17) ದ್ರಾವಿಡಿಯನ್ ಚಳವಳಿ ನಾಯಕನಾದ ಪೆರಿಯಾರ್ ಇ.ವಿ.ರಾಮಸ್ವಾಮಿ ಅವರ ಹುಟ್ಟುಹಬ್ಬದ ನಿಮಿತ್ತ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಿರ್ಧರಿಸಿದ್ದಾರೆ. ಆದರೆ ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಪೆರಿಯಾರ್ ಅವರ ಜನ್ಮದಿನವನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲು ಒಪ್ಪಿಗೆ ಇದೆ, ಆದರೆ ಡಿಎಂಕೆ ಸರ್ಕಾರ ಉಳಿದ ಸಮಾಜ ಸುಧಾಕರನ್ನು ನಿರ್ಲಕ್ಷಿಸುವುದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
1879ರ ಸೆಪ್ಟೆಂಬರ್ 17ರಂದು ಜನಿಸಿದ್ದ ಪೆರಿಯಾರ್ ಇ.ವಿ.ರಾಮಸ್ವಾಮಿಯವರನ್ನು ದ್ರಾವಿಡ ಚಳವಳಿಯ ಜನಕ ಎಂದೇ ಕರೆಯಲಾಗುತ್ತದೆ. ಜಾತಿ, ಲಿಂಗತಾರತಮ್ಯವನ್ನು ಬಲವಾಗಿ ವಿರೋಧಿಸಿದ್ದ ಇವರು, ಅಂಥ ಅಸಮಾನತೆ ವಿರುದ್ಧ ಹಲವು ಚಳವಳಿಗಳನ್ನು ಹಮ್ಮಿಕೊಂಡಿದ್ದವರು. ಹಾಗಾಗಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ವರ್ಷದಿಂದ, ಇನ್ನುಮುಂದೆ ಸೆಪ್ಟೆಂಬರ್ 17ನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸುವುದಾಗಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಅಷ್ಟೇ ಅಲ್ಲ, ಪೆರಿಯಾರ್ ಸಿದ್ಧಾಂತವು ಸಾಮಾಜಿಕ ನ್ಯಾಯ, ಆತ್ಮಗೌರವ, ಸಮಾನತೆ, ಭ್ರಾತೃತ್ ಮತ್ತು ವೈಚಾರಿಕತೆಯ ಪ್ರತಿಬಿಂಬವಾಗಿದೆ ಎಂದು ಹೇಳಿದ್ದರು.
ಸ್ಟಾಲಿನ್ ನಿರ್ಧಾರದ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್, ಸಾಮಾಜಿಕ ನ್ಯಾಯ ಎಂಬುದು ಬಿಜೆಪಿಯ ತತ್ವಗಳ ಪರಿಕಲ್ಪನೆಯಾಗಿದೆ. ಹಾಗಾಗಿ ನಮ್ಮ ಪಕ್ಷ ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದರು. ಆದರೆ ಬಿಜೆಪಿ ತಮಿಳುನಾಡು ಮುಖ್ಯಸ್ಥ ಅಣ್ಣಾಮಲೈ ಎಂ.ಕೆ.ಸ್ಟಾಲಿನ್ ನಿರ್ಧಾರವನ್ನು ವಿರೋಧಿಸಿದ್ದಾರೆ. ಡಿಎಂಕೆ ಸರ್ಕಾರ ಉಳಿದ ಸಮಾಜ ಸುಧಾಕರನ್ನು ಕಡೆಗಣಿಸುತ್ತಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾಕವಿ ಭಾರತಿಯಾರ್ರಂಥವರಿಗೂ ಸರ್ಕಾರ ಮನ್ನಣೆ ನೀಡಬೇಕು ಎಂದಿದ್ದಾರೆ.
ಇದನ್ನೂ ಓದಿ: Shocking News: ಯುವತಿ ಆರ್ಡರ್ ಮಾಡಿದ ಬರ್ಗರ್ನಲ್ಲಿ ಸಿಕ್ತು ಮನುಷ್ಯನ ಬೆರಳು; ಬೆಚ್ಚಿಬೀಳಿಸಿದ ಘಟನೆಯ ತನಿಖೆ ಶುರು
ಆಕ್ಸಿಡೆಂಟ್ ಝೋನ್ ಆದರೂ ಸಿಲಿಕಾನ್ ಸಿಟಿ ಫ್ಲೈ ಓವರ್ ಮೇಲೆ ಮುಂದುವರಿದಿದೆ ಯುವಕ-ಯುವತಿಯರ ಹುಚ್ಚಾಟ