ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಅಪಘಾತಗಳ (Accident) ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಫ್ಲೈ ಓವರ್ ಆಕ್ಸಿಡೆಂಟ್ ಝೋನ್ಗಳಾಗಿವೆ. ಕಳೆದ ಎರಡು ದಿನಗಳ ಹಿಂದೆ ನಡೆದ ಭೀಕರ ಅಪಘಾತ ಇನ್ನೂ ಕಣ್ಣ ಮುಂದಿದೆ. ಇದರ ನಡುವೆಯೂ ಯುವಕ-ಯುವತಿಯರು ಸಿಲಿಕಾನ್ ಸಿಟಿ ಫ್ಲೈ ಓವರ್ ಮೇಲೆ ಮೋಜು ಮಸ್ತಿ ಮಾಡುತ್ತ ಅಪಾಯವನ್ನು ಬರ ಮಾಡಿಕೊಳ್ಳುತ್ತಿದ್ದಾರೆ.
ಮೊನ್ನೆಯಷ್ಟೇ ಇದೇ ಫ್ಲೈ ಓವರ್ ಮೇಲಾದ ಆ್ಯಕ್ಸಿಡೆಂಟ್ನಲ್ಲಿ ಇಬ್ಬರು ಮೃತಪಟ್ಟಿದ್ರು. ಆ್ಯಕ್ಸಿಡೆಂಟ್ ಆದ್ರೂ ಎಚ್ಚೆತ್ತುಕೊಳ್ಳದ ಯುವಕ-ಯುವತಿಯರು ಅದೇ ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡಿ ಹುಚ್ಚರಂತೆ ಮೋಜು ಮಸ್ತಿ ಮಾಡಿದ್ದಾರೆ. ಯುವಕ-ಯುವತಿಯರ ತಂಡವೊಂದು ಲೇಬೈ ಬಳಿ ಕುಣಿದು ಕುಪ್ಪಳಿಸಿದೆ. KA 01MG 1929 ನಂಬರ್ನ ಕಾರಿನಲ್ಲಿ ಬಂದು ನಾಲ್ಕು ಜನ ಯುವಕ-ಯುವತಿಯರು ತಡೆಗೋಡೆಯ ಬಳಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಕ್ಯಾಮೆರಾ ನೋಡಿದ್ರೂ ಪೋಸ್ ಕೊಟ್ಟು ಡ್ಯಾನ್ಸ್ ಮಾಡಿದ್ದಾರೆ.
ಲೈಕ್, ಕಮೆಂಟ್ಗಾಗಿ ಅಪಾಯ ಸ್ಥಳದಲ್ಲಿ ನಿಂತು ಡ್ಯಾನ್ಸ್ ಫೇಸ್ಬುಕ್ ರೀಲ್ಸ್ ಮಾಡಲು ಈ ಯುವಕರು ಈ ರೀತಿ ಅಪಘಾತವಾದ ಸ್ಥಳದಲ್ಲಿ ನಿಂತು ಡ್ಯಾನ್ಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಲೈಕ್ ಕಮೆಂಟ್ಗಾಗಿ ಅಪಾಯ ಸ್ಥಳದಲ್ಲಿ ನಿಂತು ಡ್ಯಾನ್ಸ್ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ.
ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸಾವು ಇನ್ನು ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ಬಳಿಯ ಏರ್ಪೋರ್ಟ್ ರಸ್ತೆಯ ಫ್ಲೈಓವರ್ ಮೇಲೆ ನಡೆದಿದೆ. ಅಂಡಮಾನ್ ಮೂಲದ ಕೌಶಿಕ್ ಮಿಶ್ರಾ(20) ಹಾಗೂ ಹರಿಯಾಣ ಮೂಲದ ನವೀನ್(20) ಎಂಬ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏರ್ಪೋರ್ಟ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂದಿ ಬೆಟ್ಟಕ್ಕೆ ಹೊಗೋಕ್ಕೆ ಅಂತ ಬೆಳ್ಳಂ ಬೆಳಗ್ಗೆ ರಾಯಲ್ ಎನ್ಫಿಲ್ಡ್ನಲ್ಲಿ ಬಂದಿದ್ದ ಇಬ್ಬರು ಸ್ನೇಹಿತರು ನಂದಿಬೆಟ್ಟದ ರಸ್ತೆ ಬದಲಿಗೆ ಏರ್ಪೋಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಏರ್ಪೋಟ್ ರಸ್ತೆಯಲ್ಲಿ ವೇಗವಾಗಿ ತೆರಳುವ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Shocking News: ಯುವತಿ ಆರ್ಡರ್ ಮಾಡಿದ ಬರ್ಗರ್ನಲ್ಲಿ ಸಿಕ್ತು ಮನುಷ್ಯನ ಬೆರಳು; ಬೆಚ್ಚಿಬೀಳಿಸಿದ ಘಟನೆಯ ತನಿಖೆ ಶುರು