ಈ ಮೊದಲು ಜೈಲಿನಲ್ಲಿದ್ದವರು ಯಾರೂ ಗೃಹ ಸಚಿವರಾಗಿಲ್ಲ; ಬಂಧಿಖಾನೆ ಮಂಡಳಿ ವಿಧೇಯಕ ಚರ್ಚೆ ವೇಳೆ ಆರಗ ಜ್ಞಾನೇಂದ್ರ

Araga Jnanendra: ಬಂಧಿಖಾನೆ ಮಂಡಳಿ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಈ ವೇಳೆ, ಬಂಧಿಖಾನೆ ಮಂಡಳಿ ವಿಧೇಯಕದ ಮೇಲೆ ಚರ್ಚೆ ನಡೆದಿದೆ.

ಈ ಮೊದಲು ಜೈಲಿನಲ್ಲಿದ್ದವರು ಯಾರೂ ಗೃಹ ಸಚಿವರಾಗಿಲ್ಲ; ಬಂಧಿಖಾನೆ ಮಂಡಳಿ ವಿಧೇಯಕ ಚರ್ಚೆ ವೇಳೆ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us
TV9 Web
| Updated By: ganapathi bhat

Updated on:Sep 17, 2021 | 5:46 PM

ಬೆಂಗಳೂರು: ಈ ಹಿಂದೆ ಜೈಲಿನಲ್ಲಿದ್ದವರು ಯಾರೂ ಗೃಹ ಸಚಿವ‌ರಾಗಿಲ್ಲ. ನಾನು‌ 21 ದಿನಗಳ ಕಾಲ ಜೈಲಿನಲ್ಲಿದ್ದು ಬಂದಿದ್ದೇನೆ. ಹಾಗಂತ ನಾನು ಕ್ರಿಮಿನಲ್ ಕೆಲಸ ಮಾಡಿ ಜೈಲಿಗೆ ಹೋಗಿಲ್ಲ. ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದೆ. ಹೀಗಾಗಿ ಬೇರೆ ಅರ್ಥ ಮಾಡಿಕೊಳ್ಳುವುದು ಬೇಡ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಬಂಧಿಖಾನೆ ಮಂಡಳಿ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಈ ವೇಳೆ, ಬಂಧಿಖಾನೆ ಮಂಡಳಿ ವಿಧೇಯಕದ ಮೇಲೆ ಚರ್ಚೆ ನಡೆದಿದೆ.

ಬಂಧಿಖಾನೆ ಮಂಡಳಿ ವಿಧೇಯಕ ಮೇಲೆ ಬಹಳಷ್ಟು ಚರ್ಚೆ ನಡೆದಿದೆ. ಈ ಸಂದರ್ಭ ಜೆಡಿಎಸ್ ಶಾಸಕ ಅನ್ನದಾನಿ ಮಾತನಾಡಿದ್ದಾರೆ. ಕಾರಾಗೃಹಗಳಲ್ಲಿ ಮೊಬೈಲ್ ಸೇರಿದಂತೆ ಎಲ್ಲವೂ ಸಿಗುತ್ತದೆ. ಟಿವಿ, ಪೇಪರ್, ಮದ್ಯ, ಸಿಗರೇಟ್, ಇಸ್ಪೀಟ್, ಡ್ರಗ್ಸ್ ಸೇರಿ ಎಲ್ಲವೂ ಕಾರಾಗೃಹಗಳಲ್ಲಿಯೇ ಸಿಗುತ್ತದೆ. ಕೆಲವರು ಸೇಫಾಗಿರಲು ಜೈಲಿಗೆ ಹೋಗುವ ಪರಿಸ್ಥಿತಿ ಇದೆ. ಜೈಲಿನಲ್ಲೇ ಕುಳಿತು ಹೊರಗೆ ಆಪರೇಟ್ ಮಾಡುತ್ತಾರೆ. ಮೊನ್ನೆ ಒಬ್ಬ ನನಗೆ ಜೈಲಿನಿಂದಲೇ ಕಾಲ್ ಮಾಡಿದ್ದ. ಸಣ್ಣ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದವನು ಕರೆ ಮಾಡಿದ್ದ. ಸ್ವಲ್ಪ ಹಣ ಕಳಿಸು ಅಣ್ಣ ಎಂದು ನನಗೆ ಕರೆ ಮಾಡಿದ್ದ ಎಂದು ಹೇಳಿದ್ದಾರೆ.

ಜೈಲಿನಲ್ಲಿದ್ದ ಅವನಿಗೆ ಮೊಬೈಲ್ ಹೇಗೆ ಸಿಗುತ್ತೆ? ಜೈಲಿನಲ್ಲಿ ಎಲ್ಲಾ ವ್ಯವಸ್ಥೆ ಹಾಯಾಗಿ ಸಿಗೋದಾದರೆ ಪೊಲೀಸರ ಜತೆ ಮಾತಾಡಿಕೊಂಡು ಜೈಲಿಗೆ ಹೋಗ್ತಾರೆ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ಘಟನೆಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ.

ಬಂಧಿಖಾನೆ ಮಂಡಳಿ ವಿಧೇಯಕ ಮೇಲೆ ಚರ್ಚೆ ವೇಳೆ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನಲ್ಲಿ ಪ್ರತ್ಯೇಕವಾಗಿ ಅಪರಾಧಿಗಳನ್ನು ಇಡಿ. ರೌಡಿಗಳನ್ನು, ಕೊಲೆ ಮಾಡಿದವರನ್ನು ಪ್ರತ್ಯೇಕವಾಗಿ ಇಡಿ. ಇಲ್ಲದಿದ್ದರೆ ಇವರು ಬೇರೆಯವರನ್ನ ಆಳು ಮಾಡಿಕೊಳ್ತಾರೆ. ಅಲ್ಲಿಗೆ ಹೋದವರು ಕುಡಿಯೋದು ಕಲಿಯುತ್ತಾರೆ. ಜೈಲಿಗೆ ಹೋದವರು ಪರಿಶುದ್ಧರಾಗಿ ಹೊರಬರಬೇಕು. ಆದರೆ ಮತ್ತಷ್ಟು ದುಷ್ಟರಾಗಿ ಹೊರಬರುತ್ತಿದ್ದಾರೆ. ಕ್ರಿಮಿನಲ್​ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ. ಇಲ್ಲದಿದ್ರೆ ಮುಗ್ಧ ಅಪರಾಧಿಗಳು ಮತ್ತಷ್ಟು ಕೆಟ್ಟುಹೋಗ್ತಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಇನ್ನು ಮುಂದೆ ಕರ್ನಾಟಕದಲ್ಲಿ ಅನ್​​ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಅಪರಾಧ: ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ

ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ; ಕಲಾಪದಲ್ಲಿ ಕಲಹ ಕೋಲಾಹಲ

Published On - 3:18 pm, Fri, 17 September 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ