Namma Metro: ನಮ್ಮ ಮೆಟ್ರೋ ಸೇವಾ ಅವಧಿ ವಿಸ್ತರಿಸುವಂತೆ ಸಿಎಂಗೆ ಸುರೇಶ್ ಕುಮಾರ್ ಪತ್ರ

Bengaluru Metro: ಈಗ ಒಂದು ಕಡೆ ಮಾತ್ರ ದ್ವಾರ ಇದ್ದು, ಸಮಸ್ಯೆಯಾಗುತ್ತಿದೆ. ಹೀಗಾಗಿ ಎರಡು ಕಡೆ ಪ್ರವೇಶ ದ್ವಾರ ತೆರೆದು ಸಾರ್ವಜನಿಕರಿಗೆ ಅನುಕೂಲ‌ ಮಾಡಿ ಕೊಡಿ‌ ಎಂದು ಸುರೇಶ್ ಕುಮಾರ್ ಬರೆದ ಪತ್ರದಲ್ಲಿ ವಿನಂತಿ ಮಾಡಿದ್ದಾರೆ.

Namma Metro: ನಮ್ಮ ಮೆಟ್ರೋ ಸೇವಾ ಅವಧಿ ವಿಸ್ತರಿಸುವಂತೆ ಸಿಎಂಗೆ ಸುರೇಶ್ ಕುಮಾರ್ ಪತ್ರ
ನಮ್ಮ ಮೆಟ್ರೋ
Follow us
TV9 Web
| Updated By: guruganesh bhat

Updated on: Sep 17, 2021 | 3:37 PM

ಬೆಂಗಳೂರು: ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್‌ಕುಮಾರ್‌ ಪತ್ರ ಬರೆದಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ 9ರವರೆಗೆ ಮಾತ್ರ ಮೆಟ್ರೋ ಸಂಚಾರವಿದೆ. ರಾತ್ರಿ 9 ಗಂಟೆಯ ಬಳಿಕ ಮೆಟ್ರೋ ಸಂಚಾರ ಇರುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾತ್ರಿ 10 ಗಂಟೆಯವರೆಗೆ ಮೆಟ್ರೋ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶಾಸಕ ಸುರೇಶ್‌ಕುಮಾರ್ ಪತ್ರ ಬರೆದಿದ್ದಾರೆ.

ನೈಟ್ ಕರ್ಫ್ಯೂ 11 ಗಂಟೆಯ ನಂತರ ವಿಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಲಾಕ್​ಡೌನ್ ಮುಂಚೆ ಮೆಟ್ರೋ ನಿಲ್ದಾಣಗಳಲ್ಲಿ ಎರಡು ಕಡೆ ದ್ವಾರಗಳು ಇದ್ದವು. ಈಗ ಒಂದು ಕಡೆ ಮಾತ್ರ ದ್ವಾರ ಇದ್ದು, ಸಮಸ್ಯೆಯಾಗುತ್ತಿದೆ. ಹೀಗಾಗಿ ಎರಡು ಕಡೆ ಪ್ರವೇಶ ದ್ವಾರ ತೆರೆದು ಸಾರ್ವಜನಿಕರಿಗೆ ಅನುಕೂಲ‌ ಮಾಡಿ ಕೊಡಿ‌ ಎಂದು ಸುರೇಶ್ ಕುಮಾರ್ ಬರೆದ ಪತ್ರದಲ್ಲಿ ವಿನಂತಿ ಮಾಡಿದ್ದಾರೆ.

ರಾಮನಗರ, ಮಾಗಡಿ ಕಡೆಗೆ ನಮ್ಮ ಮೆಟ್ರೋ; 4ನೇ ಹಂತದಲ್ಲಿ ಬಿಡದಿಗೂ ಸಿಗಲಿದೆ ಮೆಟ್ರೋ ರೈಲು ಸಂಚಾರ ಭಾಗ್ಯ ರಾಮನಗರ: ನಮ್ಮ ಮೆಟ್ರೋ ಯೋಜನೆ ರಾಮನಗರ ಮತ್ತು ಮಾಗಡಿವರೆಗೂ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ ಬಳಿಕ ರಾಮನಗರ ಜಿಲ್ಲೆಯಲ್ಲಿ ಹೊಸ ಭರವಸೆ ಚಿಗುರೊಡೆದಿದೆ. ಅದರಲ್ಲೂ ನಿತ್ಯ ಬೆಂಗಳೂರಿಗೆ ಹೋಗಿಬರುವ ಉದ್ಯೋಗಿಗಳು, ಕಾರ್ಮಿಕರು ಮಾತ್ರವಲ್ಲದೇ ಕೈಗಾರಿಕೆಗಳಲ್ಲಿಯೂ ಸಾಕಷ್ಟು ನಿರೀಕ್ಷೆ ಮೂಡಿದೆ.

ರಾಜ್ಯ ರಾಜಧಾನಿಯಿಂದ ಸುಮಾರು 50 ಕಿ.ಮೀ ದೂರ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಿಂದ 100 ಕಿ.ಮೀ ದೂರದಲ್ಲಿನ ರಾಮನಗರ ಮತ್ತು ರಾಮನಗರ ಜಿಲ್ಲೆಯ ಮಾಗಡಿಯಿಂದ ಬೆಂಗಳೂರಿಗೆ ಸುಮಾರು 60 ಕಿ.ಮೀ ಪ್ರಯಾಣಿಸಬೇಕು. ಇನ್ನು ರಾಮನಗರ ಜಿಲ್ಲೆಯಿಂದ ಪ್ರತಿನಿತ್ಯ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅದರಲ್ಲೂ ಭಾರತೀಯ ರೈಲ್ವೆ, ಕೆಎಸ್‌ಆರ್‌ಟಿಸಿ, ಬಿಎಮ್​ಟಿಸಿ ಮಾತ್ರವಲ್ಲದೇ ಖಾಸಗಿ ವಾಹನಗಳಲ್ಲಿಯು ಉದ್ಯೋಗಿಗಳು ಪ್ರತಿನಿತ್ಯ ಸಂಚಾರಿಸುತ್ತಾರೆ. ಇದರ ನಡುವೆ ನಮ್ಮ ಮೆಟ್ರೋ ಸಹ ರಾಮನಗರಕ್ಕೆ ಕಾಲಿಟ್ಟರೆ ಜಿಲ್ಲೆಯ ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯು ಇನ್ನೊಂದು ವರ್ಷದೊಳಗೆ ಹತ್ತು ಪಥಗಳ ರಸ್ತೆಗಳಾಗಿ ಮೇಲ್ದೆರ್ಜೆಗೇರಲಿದೆ. ಇದರ ನಡುವೆ 2024 ರೊಳಗೆ ಜಿಲ್ಲೆಗೆ ಮೆಟ್ರೋ ರೈಲು ಬರಲಿದೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಯಿಂದಾಗಿ, ರಾಮನಗರ ಜಿಲ್ಲೆ ಇನ್ನಷ್ಟು ಅಭಿವೃದ್ದಿಗೊಳ್ಳಲಿದೆ ಎಂಬ ಭರವಸೆ ಉಂಟಾಗಿದೆ. ಅಂದಹಾಗೆ ಬಸ್ಸಿನ ಮೂಲಕ ಪ್ರತಿನಿತ್ಯ ಒಂದರಿಂದ ಎರಡು ಗಂಟೆಗಳ ಕಾಲ ಬೆಂಗಳೂರಿಗೆ ಉದ್ಯೋಗಿಗಳು ಪ್ರಯಾಣಿಸಬೇಕು. ಈ ಮಧ್ಯೆ ಕೆಲವೊಮ್ಮೆ ಟ್ರಾಫಿಕ್ ಕಿರಿಕಿರಿಯಿಂದಾಗಿ ಪ್ರಯಾಣದ ಸಮಯ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ಮೆಟ್ರೋ ಪರಿಹಾರ ಮಾರ್ಗವಾಗಿದೆ. ಮೆಟ್ರೋ ಬಳಿಕ ಬೆಂಗಳೂರು ಸಂಚಾರ 30 ನಿಮಿಷಕ್ಕೆ ಇಳಿಯಲಿದೆ. ಇದರಿಂದಾಗಿ ಬೆಂಗಳೂರಿಗೆ ಪರ್ಯಾಯ ನಗರವಾಗಿ ರಾಮನಗರ ಬೆಳೆಯಲಿದೆ.

ಇದನ್ನೂ ಓದಿ: 

ಬೆಂಗಳೂರು ಮೆಟ್ರೊ 2ಎ, 2ಬಿ ಹಂತಗಳಿಗೆ ಕೇಂದ್ರದ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಸಂತಸ

ಬೆಂಗಳೂರಿಗರೇ ಎಚ್ಚರ: ನಮ್ಮ ಮೆಟ್ರೋ ಕಾಮಗಾರಿ ಬಳಿ ಓಡಾಡುವಾಗ ಹುಷಾರು!

(Bengaluru Namma Metro MLA Suresh Kumar wrote letter to CM Basavaraj Bommai to extend Metro service period)