ಇನ್ನು ಮುಂದೆ ಕರ್ನಾಟಕದಲ್ಲಿ ಅನ್‌ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಅಪರಾಧ: ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ
ಸಾರ್ವಜನಿಕ ಸ್ಥಳಗಳಲ್ಲಿ ಬಾಜಿ ಕಟ್ಟಿ ಜೂಜು ಆಡಿದವರಿಗೂ ಶಿಕ್ಷೆ ಕಡ್ಡಾಯ, ಹಾಗೂ ಜೂಜಾಟಕ್ಕೆ ಸ್ಥಳ ಕೊಟ್ಟವರಿಗೆ 1 ವರ್ಷ ಜೈಲು ಶಿಕ್ಷೆ ನೀಡಲಾಗುತ್ತೆ.
ಬೆಂಗಳೂರು: ರಾಜ್ಯದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಹತ್ತಿಕ್ಕಲು ಬೆಟ್ಟಿಂಗ್ ಕಟ್ಟಿ ನಡೆಸವ ಎಲ್ಲ ಬಗೆಯ ಆನ್ಲೈನ್ ಜೂಜು ನಿಷೇಧಿಸುವ ಮಹತ್ವದ ತೀರ್ಪು ಮಂಡನೆಯಾಗಿದೆ. ಕರ್ನಾಟಕ ಪೊಲೀಸ್ ತಿದ್ದುಪಡಿ ಮಾಡಲಾಗಿದ್ದು ಅನ್‌ಲೈನ್ ಬೆಟ್ಟಿಂಗ್ ಕುರಿತ ವಿಧೇಯಕ ಮಂಡನೆ ಮಾಡಲಾಗಿದೆ. ಈ ವಿಧೇಯಕ ಲಾಟರಿ, ಕುದುರೆ ರೇಸ್ ಬಾಜಿಗೆ ಅನ್ವಯವಾಗಲ್ಲ. ಉಳಿದಂತೆ ಮೊಬೈಲ್, ಕಂಪ್ಯೂಟರ್ ಆನ್‌ಲೈನ್ ಮೂಲಕ ನಡೆಯುವ ಬೆಟ್ಟಿಂಗ್‌ಗೆ ಅನ್ವಯವಾಗುತ್ತೆ. ಆನ್‌ಲೈನ್ ಜೂಜು, ಬೆಟ್ಟಿಂಗ್ ಆಡುವವರಿಗೆ ₹1 ಲಕ್ಷ ದಂಡ, ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಸಹಾಯಮಾಡಿದವರಿಗೆ 6 ತಿಂಗಳು ಜೈಲು, 10 ಸಾವಿರ ದಂಡ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾಕ ಮಂಡಿಸಿದ್ದಾರೆ. ವಿಧೇಯಕದಲ್ಲಿ ಆನ್‌ಲೈನ್ ಜೂಜು ನಿಷೇಧ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
1 ವರ್ಷದಿಂದ 3 ವರ್ಷಕ್ಕೆ ಶಿಕ್ಷೆ ಪ್ರಮಾಣ ಏರಿಕೆ ಮಾಡಲಾಗಿದೆ. ಸಿಕ್ಕಿಬಿದ್ದರೆ ಮೂರು ತಿಂಗಳಿಗಿಂತ ಕಡಿಮೆಯಿಲ್ಲದ ಶಿಕ್ಷೆ ನೀಡಲಾಗುತ್ತೆ. 500 ರೂಪಾಯಿಗಿಂತ ಹೆಚ್ಚಿನ ಪ್ರಮಾಣದ ದಂಡ ವಿಧಿಸಲಾಗುತ್ತೆ. 2ನೇ ಬಾರಿ ಸಿಕ್ಕಿಬಿದ್ದರೆ ದಂಡ, ಶಿಕ್ಷೆ ಪ್ರಮಾಣ ಹೆಚ್ಚಳ ಮಾಡಲಾಗುತ್ತೆ. 3ನೇ ಬಾರಿ ಸಿಕ್ಕಿಬಿದ್ದರೆ ಸಾವಿರಕ್ಕಿಂತ ಹೆಚ್ಚು ದಂಡ ವಿಧಿಸಲಾಗುತ್ತೆ. ಸಾರ್ವಜನಿಕ ಸ್ಥಳಗಳಲ್ಲಿ ಬಾಜಿ ಕಟ್ಟಿ ಜೂಜು ಆಡಿದವರಿಗೂ ಶಿಕ್ಷೆ ಕಡ್ಡಾಯ, ಹಾಗೂ ಜೂಜಾಟಕ್ಕೆ ಸ್ಥಳ ಕೊಟ್ಟವರಿಗೆ 1 ವರ್ಷ ಜೈಲು ಶಿಕ್ಷೆ ನೀಡಲಾಗುತ್ತೆ.
ಇದನ್ನೂ ಓದಿ: ಆಕ್ಸಿಡೆಂಟ್ ಝೋನ್ ಆದರೂ ಸಿಲಿಕಾನ್ ಸಿಟಿ ಫ್ಲೈ ಓವರ್ ಮೇಲೆ ಮುಂದುವರಿದಿದೆ ಯುವಕ-ಯುವತಿಯರ ಹುಚ್ಚಾಟ
Published On - 12:50 pm, Fri, 17 September 21