ಕಲಬುರಗಿ ಪಾಲಿಕೆ ಚುನಾವಣೆ ವಿಚಾರ: ನಾವು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ- ಹೆಚ್​ಡಿ ದೇವೇಗೌಡ

HD Deve Gowda: ತಿಂಗಳಾಂತ್ಯದಲ್ಲಿ ಜೆಡಿಎಸ್ ಮುಖಂಡರ ಸಭೆ ಮಾಡಬೇಕು. ಒಂದೊಳ್ಳೆಯ ಕಾರ್ಯಕ್ರಮ ಮಾಡಲು ಚರ್ಚೆ ಮಾಡಿದ್ದೇನೆ. ಸೆಪ್ಟೆಂಬರ್ 30 ರಂದು ಜೆಡಿಎಸ್ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ದೇವೇಗೌಡ ತಿಳಿಸಿದ್ದಾರೆ.

ಕಲಬುರಗಿ ಪಾಲಿಕೆ ಚುನಾವಣೆ ವಿಚಾರ: ನಾವು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ- ಹೆಚ್​ಡಿ ದೇವೇಗೌಡ
ಹೆಚ್​ಡಿ ದೇವೇಗೌಡ


ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರವಾಗಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಬಗ್ಗೆ ಜೆಡಿಎಸ್ ಯಾವುದೇ ತೀರ್ಮಾನ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ತೆಗೆದುಕೊಂಡ ನಿರ್ಧಾರ ಉಳಿದವರು ಸ್ವಾಗತಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸ್ಪಂದಿಸಿಲ್ಲ. ಇನ್ನು ಪಾಲಿಕೆ ವಿಚಾರದಲ್ಲಿ ಖರ್ಗೆ ತೀರ್ಮಾನ ಮಾಡ್ತಾರಾ? ಸಚಿವ ಅಶೋಕ್ ಬಂದು ಮಾತಾಡಿ ಹೋಗಿರುವುದಷ್ಟೇ. ಈಗ ಕಲಬುರಗಿ ವಿಚಾರವಾಗಿ ಬಿಜೆಪಿಯೂ ಮಾತಾಡುತ್ತಿಲ್ಲ. ಹೀಗಾಗಿ ನಾವು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಚಾರವಾಗಿ ಬಿಜೆಪಿಯವರೂ ಈಗ ಮಾತನಾಡುತ್ತಿಲ್ಲ. ಸಚಿವ ಆರ್​. ಅಶೋಕ್​ ಒಬ್ಬರೇ ಬಂದು ಮಾತನಾಡಿದ್ದಾರೆ. ಚುನಾವಣೆಯಲ್ಲಿ ಜನ ಜೆಡಿಎಸ್​ಗೆ ಹೊಸ ಸೂಚನೆ ನೀಡಿದ್ದಾರೆ. ಮೈತ್ರಿ ಬಗ್ಗೆ ನಾವು ಯಾವುದೇ ತೀರ್ಮಾನವನ್ನೂ ಮಾಡಿಲ್ಲ. ಯಾರ ಬಗ್ಗೆಯೂ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಅವರು ಹೇಳಿದ್ದಾರೆ.

ತಿಂಗಳಾಂತ್ಯದಲ್ಲಿ ಜೆಡಿಎಸ್ ಮುಖಂಡರ ಸಭೆ ಮಾಡಬೇಕು. ಒಂದೊಳ್ಳೆಯ ಕಾರ್ಯಕ್ರಮ ಮಾಡಲು ಚರ್ಚೆ ಮಾಡಿದ್ದೇನೆ. ಸೆಪ್ಟೆಂಬರ್ 30 ರಂದು ಜೆಡಿಎಸ್ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ದೇವೇಗೌಡ ತಿಳಿಸಿದ್ದಾರೆ.

ಎಲ್ಲೆಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಚರ್ಚೆ ಮಾಡಲ್ಲ. ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ 4 ಗಂಟೆ ಚರ್ಚೆ ಮಾಡಿದ್ರು. ಆದರೆ ಅವರಂತೆ ನಾವು ತೋರ್ಪಡಿಕೆಗೆ ಮಾತನಾಡುವುದಿಲ್ಲ. ವಾಜಪೇಯಿ ಸರ್ಕಾರದಲ್ಲಿ ಸೀಮೆಎಣ್ಣೆ ಬೆಲೆ ಹೆಚ್ಚಾಗಿತ್ತು. ಆಗ ಸೀಮೆಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದೆವು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್​ನವರು ಈ ಪಕ್ಷ ನಾಶ ಮಾಡುವ ಮಾತಾಡ್ತಾ ಇದ್ದಾರೆ. ನಮ್ಮ ಹಾಗೂ ಮುಸ್ಲಿಮರನ್ನು ದೂರ ಇಡಲು ಪ್ರಯತ್ನ‌ ಮಾಡ್ತಾ ಇದ್ದಾರೆ. 2023ಕ್ಕೆ ಇದೇ ಮುಸ್ಲಿಮರು ನಮ್ಮ ಪಕ್ಷ ಅಧಿಕಾರಕ್ಕೆ ತರ್ತಾರೆ. ಅಹಿಂದ ಬಗ್ಗೆ ಜನ ಪುರಸ್ಕಾರ ಅಥವಾ ತಿರಸ್ಕಾರ ಮಾಡ್ತಾರೆ ಎಂದು ಕಾದು ನೋಡುವ. ನಾನು ಈವರೆಗೆ ಎಷ್ಟು ಜನ ಮುಸ್ಲಿಂ ಮುಖಂಡರನ್ನು ಬೆಳೆಸಿದ್ದೇನೆ. ನಾನು ಬರುವ ಮುಂಚೆ ಎಷ್ಟು ಜನ ಮುಸ್ಲಿಂ ನಾಯಕರು ಇದ್ದರು ಎಂದು ದೇವೇಗೌಡ ಪ್ರಶ್ನಿಸಿದ್ದಾರೆ. ನಜೀರ್ ಸಾಬ್ ಮೊದಲೇ ಬೆಳೆದಿರುವ ನಾಯಕರಾಗಿದ್ದರು. ಜಾಫರ್ ಷರೀಫ್, ಸಿಎಂ ಇಬ್ರಾಹಿಂ, ಮೆರಾಜುದ್ದೀನ್ ಪಟೇಲ್, ಸೇರಿ ಅನೇಕ‌ ನಾಯಕರು ನನ್ನ ಜೊತೆ ಬೆಳೆದರು. ನಾನು ದೇವರನ್ನು ನಂಬುತ್ತೇನೆ. ದೇವರು ಅಲ್ಲಾ ಒಂದೇ ನನಗೆ ಎಂದು ಅವರು ತಿಳಿಸಿದ್ದಾರೆ.

ದೇವಾಲಯ ತೆರವು ಬಗ್ಗೆ ದೇವೇಗೌಡ ಪ್ರತಿಕ್ರಿಯೆ
ಹರದನಹಳ್ಳಿ ಮಹದೇವಮ್ಮ ದೇವಾಲಯ ತೆರವು ಹಿನ್ನೆಲೆಯಲ್ಲಿ, ಅಧಿಕಾರಿಗಳು ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲೂ ಕೆಲ ಪ್ರತಿಮೆಗಳ ತೆರವಿಗೆ ಆದೇಶ ಇದೆ. ಅನಧಿಕೃತ ದೇಗುಲ ತೆರವು ಮಾಡಲು ಆದೇಶ ನೀಡಿರಬಹುದು. ಕೋರ್ಟ್ ಆದೇಶವನ್ನು ನಾವು ತಿರಸ್ಕರಿಸುವುದಕ್ಕೆ ಆಗಲ್ಲ. ಆದರೆ ಕ್ರಮಕ್ಕೂ ಮುನ್ನ ಅನುಮತಿ ಪಡೆದುಕೊಳ್ಳಬೇಕು ಎಂದು ದೇವೇಗೌಡ ತಿಳಿಸಿದ್ದಾರೆ.

ಸದ್ಯ ಹಿಂದೂ ರಾಷ್ಟ್ರ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಅಫ್ಘನ್, ಪಾಕ್‌ನಲ್ಲಿ ಏನ್ ನಡೀತಿದೆ ಎಂದು ನೋಡ್ತಿದ್ದೇವೆ. ನಮ್ಮ ದೇಶದಲ್ಲಿ ಮುಸ್ಲಿಮರು ಹೇಗೆ ಜೀವನ ನಡೆಸುತ್ತಿದ್ದಾರೆ. ಅವರು ನೆಮ್ಮದಿಯಿಂದ ಜೀವಿಸಲು ಅವಕಾಶ ಕಲ್ಪಿಸಬೇಕು. ರಾಷ್ಟ್ರೀಯ ಪಕ್ಷಗಳು ಅವರಿಗೆ ಅವಕಾಶ ಕಲ್ಪಿಸಬೇಕಾಗಿದೆ. ಈ ವಿಚಾರದ ಬಗ್ಗೆ ಅಧಿವೇಶನದಲ್ಲಿಯೂ ಮಾತನಾಡಿದ್ದೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಬಾರದು ಎಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ನಮ್ಮ ಅಭ್ಯರ್ಥಿಯೇ ಮೇಯರ್: ಯುಟಿ ಖಾದರ್, ಜಗದೀಶ್ ಶೆಟ್ಟರ್ ವಿಶ್ವಾಸ!

ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್​ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್

Read Full Article

Click on your DTH Provider to Add TV9 Kannada