ರಾತ್ರಿ ಡೆಡ್ಲಿ ಅಟ್ಯಾಕ್: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು

ರಾಯಚೂರು ಲಿಂಗಸಗೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಮಾನಪ್ಪ ವಜ್ಜಲ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ.

ರಾತ್ರಿ  ಡೆಡ್ಲಿ ಅಟ್ಯಾಕ್: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು
ರಾತ್ರಿ ಡೆಡ್ಲಿ ಅಟ್ಯಾಕ್: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು

ಬೆಂಗಳೂರು: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಮಾನಪ್ಪ ವಜ್ಜಲ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ. ಆಂಜನೇಯ ವಜ್ಜಲ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ವಿಕ್ರಮ್ ರೈ ಎಂಬುವವರು ನೀಡಿರುವ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಪಂಚ್ ಮಾಡುವ ಆಯುಧದಿಂದ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾನೆ. ಆಂಜನೇಯ ಗ್ಯಾಂಗ್​ ಮೂರು ಕಾರುಗಳಿಂದ ಪಂಚ್ ಆಯುಧ ಹೊರತೆಗೆದು ಭೀಕರ ಹಲ್ಲೆ ಮಾಡಿದ್ದಾರೆ. 10 ರಿಂದ 15 ಹುಡುಗರನ್ನ ಕರೆಸಿ ಹಲ್ಲೆ ಮಡಿದ್ದಾರೆ ಎಂದು ಎಫ್​ಐಆರ್ ನಲ್ಲಿ ಆರೋಪಿಸಲಾಗಿದೆ.

ಸೆಪ್ಟೆಂಬರ್ 12 ನೇ ತಾರೀಖು ರಾತ್ರಿ 10 ಗಂಟೆಗೆ ಸ್ನೇಹಿತ ರೋಲ್ಟ್ ಮೆರೇನ್ ರನ್ನ ಡ್ರಾಪ್ ಮಾಡಲು ವಸಂತನಗರದ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ಮೆಂಟ್ ಬಳಿ ವಿಕ್ರಮ್ ರೈ ಬಂದಿದ್ದರಂತೆ. ಈ ಹಿಂದೆಯೂ ಪಾರ್ಕಿಂಗ್ ವಿಚಾರವಾಗಿ ಎರಡು ಬಾರಿ ಗಲಾಟೆ ಮಾಡಿದ್ರಂತೆ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ. ಈಗಲೂ ಆಂಜನೇಯ ಮತ್ತು ಮೌನೀಶ್ ಸೇರಿ 10-15 ಹುಡುಗರಿಂದ ಹಲ್ಲೆ ಮಾಡಲಾಗಿದೆಯಂತೆ. ಬೆಂಜ್, ಸೆಲ್ಟೋಸ್ ಮತ್ತು ಫಾರ್ಚ್ಯೂನರ್ ಕಾರಿನಿಂದ ಪಂಚ್ ಮಾಡುವ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ನೀನು ಪೊಲೀಸ್ ಠಾಣೆಗೆ ಹೋದರೂ ನಾವು ಡೋಂಟ್​ ಕೇರ್​:
ವಿಕ್ರಮ್ ರೈ ಗೆ ತಲೆ, ಕಣ್ಣು ಮತ್ತು ದೇಹದ ಇತರೆ ಭಾಗಗಳ ಮೇಲೆ ಹಲ್ಲೆಯಾಗಿದೆ. ಕಣ್ಣಿನ ಮೇಲ್ಭಾಗಕ್ಕೆ ರಕ್ತದ ಗಾಯವಾಗುವಂತೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಾ… ನೀನು ಎಲ್ಲಿಗೆ ಹೋದರೂ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ರಂತೆ. ನೀನು ಪೊಲೀಸ್ ಠಾಣೆಗೆ ಹೋದರೂ ನಮಗೇನೂ ಮಾಡಲು ಸಾಧ್ಯವಿಲ್ಲ ಅಂತಾ ಧಮಕಿ ಹಾಕಿದ್ದಾರಂತೆ.

ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ವಿಕ್ರಂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರಂತೆ ಗಾಯಾಳು ವಿಕ್ರಮ್ ರೈ. ಘಟನೆಯ ಇಡೀ ವೃತ್ತಾಂತವನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 124, 324, 504, 506, 149 ಅಡಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:
ಸಂಜಯನಗರ ಬಸ್‌ ಸ್ಟಾಪ್‌ ಬಳಿ ಗುಂಡು ಹಾರಿಸಿಕೊಂಡು ಮೃತಪಟ್ಟ ಪ್ರತಿಭಾನ್ವಿತ ವಿದ್ಯಾರ್ಥಿ; ಪೋಷಕರು ಕಂಗಾಲು

(attack fir against former mla manappa vajjal son anjaneya manappa vajjal in high grounds police station)

Read Full Article

Click on your DTH Provider to Add TV9 Kannada