ನೀಟ್ ಪರೀಕ್ಷೆ ಪ್ರವೇಶ ನಿರಾಕರಣೆ: ಮನನೊಂದು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

| Updated By: ನಯನಾ ರಾಜೀವ್

Updated on: Apr 07, 2023 | 2:40 PM

ನೀಟ್(NEET) ಪರೀಕ್ಷೆ ಪ್ರವೇಶಕ್ಕೆ ಕೋಚಿಂಗ್ ಕೇಂದ್ರವು ನಿರಾಕರಿಸಿದ ಕಾರಣ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ನೀಟ್ ಪರೀಕ್ಷೆ ಪ್ರವೇಶ ನಿರಾಕರಣೆ: ಮನನೊಂದು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ರೈಲು(ಸಾಂದರ್ಭಿಕ ಚಿತ್ರ)
Follow us on

ನೀಟ್(NEET) ಪರೀಕ್ಷೆ ಪ್ರವೇಶಕ್ಕೆ ಕೋಚಿಂಗ್ ಕೇಂದ್ರವು ನಿರಾಕರಿಸಿದ ಕಾರಣ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಂಡಲೂರು ರೈಲು ನಿಲ್ದಾಣದಲ್ಲಿ ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಬತರಣಪುರಂನ ಉತಿರಭಾರತಿ ಎಂಬುವವರ ಪುತ್ರಿ ನಿಶಾ, ನೇವೇಲಿಯ ಬೈಜುಸ್‌ನಲ್ಲಿ ಕೋಚಿಂಗ್ ತರಗತಿಗೆ ಹೋಗುವುದಾಗಿ ಪೋಷಕರಿಗೆ ತಿಳಿಸಿದ್ದಾಳು ಎಂದು ಪೊಲೀಸರು ತಿಳಿಸಿದ್ದಾರೆ.

ನಿಶಾ ತನ್ನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶೇಷ ತರಗತಿಗೆ ಹಾಜರಾಗಬೇಕೆಂದು ತನ್ನ ತಂದೆಗೆ ಹೇಳಿದ್ದಳು, ಆದರೆ ಅವಳು ವಂಡಲೂರು ರೈಲು ನಿಲ್ದಾಣಕ್ಕೆ ಹೋಗಿ ಸಂಜೆ 5.10 ರ ಸುಮಾರಿಗೆ ವೇಗವಾಗಿ ಬರುತ್ತಿದ್ದ ರೈಲಿನ ಎದುರು ಹಾರಿದ್ದಾಳೆ. ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಯತ್ನಿಸಿದರಾದರೂ ನಿಶಾ ಚಕ್ರದಡಿಗೆ ಸಿಲುಕಿ ಪ್ರಾಣಬಿಟ್ಟಿದ್ದಾಳೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತಂಡವು ಸ್ಥಳಕ್ಕೆ ಧಾವಿಸಿ ನಿಶಾ ಅವರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆ. ನಿಶಾ ಅವರ ತಂದೆ ಮಾತನಾಡಿ, ತಮ್ಮ ಮಗಳು ಬೈಜುಸ್ ಕೋಚಿಂಗ್ ಸೆಂಟರ್ ಪರೀಕ್ಷೆಗಳಲ್ಲಿ ಅವರ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿರುವುದರಿಂದ ಅಸಮಾಧಾನಗೊಂಡಿದ್ದಳು ಎಂದು ಹೇಳಿದರು.

ನನ್ನ ಮಗಳಿಗೆ 399 ಸಿಕ್ಕಿತು, ಆದರೆ ನೇವೇಲಿಯ ಇಂದಿರಾ ನಗರದಲ್ಲಿರುವ ಬೈಜುಸ್ ಕೋಚಿಂಗ್ ಸೆಂಟರ್ 400 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕರೆದೊಯ್ದು ಅವರಿಗೆ ಪ್ರತ್ಯೇಕವಾಗಿ ತರಬೇತಿ ನೀಡಿತು, ಇದು ಅವಳ ಖಿನ್ನತೆಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ, ಜತೆ ಕೋಚಿಂಗ್ ಸೆಂಟರ್ ವಿರುದ್ಧ ಎಂದು ಉತಿರ್ಭಾರತಿ ಕೋಚಿಂಗ್ ಸೆಂಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

NEET, ಮೊದಲು ಆಲ್ ಇಂಡಿಯಾ ಪ್ರಿ-ಮೆಡಿಕಲ್ ಟೆಸ್ಟ್ (AIPMT), ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ MBBS ಮತ್ತು BDS ಕಾರ್ಯಕ್ರಮಗಳಿಗೆ ಅರ್ಹತಾ ಪರೀಕ್ಷೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ