ಎರಡು ಲ್ಯಾಪ್ ಟ್ಯಾಪ್ ಕೊಂಡೊಯ್ದಕ್ಕಾಗಿ ತಮಿಳುನಾಡು ವಿತ್ತ ಸಚಿವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ತಡೆ

| Updated By: ರಶ್ಮಿ ಕಲ್ಲಕಟ್ಟ

Updated on: Oct 01, 2021 | 5:51 PM

Palanivel Thiagarajan: ವರದಿಗಳ ಪ್ರಕಾರ, ಪ್ರಯಾಣಿಕರು ಎರಡು ಲ್ಯಾಪ್‌ಟಾಪ್‌ಗಳನ್ನು ಒಯ್ಯುವಂತಿಲ್ಲ ಎಂದು ಅಧಿಕಾರಿಯು ಸಚಿವರಲ್ಲಿ ಹೇಳಿದ್ದು ಆಮೇಲೆ ಅಂತಹ ನಿಯಮವಿಲ್ಲ ಎಂದು ಉತ್ತರಿಸಿದರು. ಆದಾಗ್ಯೂ, ತ್ಯಾಗರಾಜ ಅವರು ಯಾರು ಎಂದು ತಿಳಿದಾಗ, ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ...

ಎರಡು ಲ್ಯಾಪ್ ಟ್ಯಾಪ್ ಕೊಂಡೊಯ್ದಕ್ಕಾಗಿ ತಮಿಳುನಾಡು ವಿತ್ತ ಸಚಿವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ತಡೆ
ಪಳನಿವೇಲ್ ತ್ಯಾಗರಾಜನ್
Follow us on

ಚೆನ್ನೈ: ಗುರುವಾರ ಮುಂಜಾನೆ 5.50 ರ ಸುಮಾರಿಗೆ ಚೆನ್ನೈ ವಿಮಾನ ನಿಲ್ದಾಣವು ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾಯಿತು. ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ (Palanivel Thiagarajan) ಅವರನ್ನು  ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು ಎರಡು ಲ್ಯಾಪ್‌ಟಾಪ್‌ಗಳನ್ನು ಕೊಂಡೊಯ್ಯುತ್ತಿರುವುದಕ್ಕಾಗಿ ತಡೆದರು. ಸಚಿವರು ತೂತುಕುಡಿಗೆ ಪ್ರಯಾಣಿಸುತ್ತಿದ್ದರು ಮತ್ತು ಡೊಮೆಸ್ಟಿಕ ಟರ್ಮಿನಲ್‌ನಲ್ಲಿ ಸ್ಕ್ಯಾನಿಂಗ್‌ಗಾಗಿ ತಮ್ಮ ಬ್ಯಾಗ್ ಇರಿಸಿದ್ದರು.

ವರದಿಗಳ ಪ್ರಕಾರ, ಪ್ರಯಾಣಿಕರು ಎರಡು ಲ್ಯಾಪ್‌ಟಾಪ್‌ಗಳನ್ನು ಒಯ್ಯುವಂತಿಲ್ಲ ಎಂದು ಅಧಿಕಾರಿಯು ಸಚಿವರಲ್ಲಿ ಹೇಳಿದ್ದು ಆಮೇಲೆ ಅಂತಹ ನಿಯಮವಿಲ್ಲ ಎಂದು ಉತ್ತರಿಸಿದರು. ಆದಾಗ್ಯೂ, ತ್ಯಾಗರಾಜ ಅವರು ಯಾರು ಎಂದು ತಿಳಿದಾಗ, ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರಲ್ಲಿ ಕ್ಷಮೆಯಾಚಿಸಿದರು. ತಪ್ಪು ಸಂವಹನದಿಂದಾಗಿ ಗೊಂದಲ ಉಂಟಾಗಿರಬಹುದು ಎಂದು ಹೇಳಲಾಗಿದೆ.

“ಇದು ತಪ್ಪು ಸಂವಹನ ಪ್ರಕರಣ. ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಸಚಿವರ ಬಳಿ ಒಂದು ಲ್ಯಾಪ್‌ಟಾಪ್ ಇದೆ ಎರಡು ಇಲ್ಲ ಎಂದು ಭಾವಿಸಿರಬೇಕು ಮತ್ತು ಅದನ್ನು ಟ್ರೇನಲ್ಲಿ ಇಡುವಂತೆ ಕೇಳಿದರು, ಅದನ್ನು ಸಚಿವರು ತಪ್ಪಾಗಿ ಗ್ರಹಿಸಿದ್ದಾರೆ. ಸಿಐಎಸ್ಎಫ್ ಅಧಿಕಾರಿ ಉತ್ತರ ಭಾರತದವರಾದ್ದರಿಂದ, ಅವರ ತಮಿಳು ಸ್ಪಷ್ಟವಾಗಿಲ್ಲದಿರಬಹುದು. ನಾವು ಫೂಟೇಜ್ ಅನ್ನು ನೋಡಿದ್ದೇವೆ ಮತ್ತು ವರದಿಯಾಗಿರುವಂತೆ ಭದ್ರತಾ ತಪಾಸಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ವಿಮಾನ ನಿಲ್ದಾಣದ ಉನ್ನತ ಅಧಿಕಾರಿಗಳು ತಕ್ಷಣ ಅಲ್ಲಿಗೆ ಹೋಗಿ ಸಚಿವರಲ್ಲಿ ಕ್ಷಮೆ ಕೇಳಿದರು. ಸಿಐಎಸ್‌ಎಫ್ ಅಧಿಕಾರಿ ಕೂಡ ಕ್ಷಮೆಯಾಚಿಸಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Charanjit Singh Channi ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ