Charanjit Singh Channi ರೈತರ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ಮೋದಿಯವರಲ್ಲಿ ಒತ್ತಾಯಿಸಿದ್ದೇನೆ: ಚರಣ್​​ಜಿತ್ ಸಿಂಗ್ ಚನ್ನಿ

ಈ ಭೇಟಿ ಯಲ್ಲಿ ಅವರು ಕೃಷಿ ಕಾನೂನುಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಪಂಜಾಬ್‌ನಲ್ಲಿ ಭತ್ತ ಸಂಗ್ರಹಣೆಯನ್ನು ಅಕ್ಟೋಬರ್ 1 ರಿಂದ ಮುಂದೂಡುವ ಕೇಂದ್ರದ ಪತ್ರವನ್ನು ಹಿಂಪಡೆಯುವಂತೆ ಚನ್ನಿ ಪ್ರಧಾನಿ ಮೋದಿಯನ್ನು ಒತ್ತಾಯಿಸಲಿದ್ದಾರೆ ಎಂದು ವರದಿಗಳು ಹೇಳಿವೆ

Charanjit Singh Channi ರೈತರ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ಮೋದಿಯವರಲ್ಲಿ ಒತ್ತಾಯಿಸಿದ್ದೇನೆ: ಚರಣ್​​ಜಿತ್ ಸಿಂಗ್ ಚನ್ನಿ
ಚರಣ್​ಜಿತ್ ಸಿಂಗ್ ಚನ್ನಿ

ದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ (Charanjit Singh Channi) ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು (Narenda Modi) ಭೇಟಿ ಮಾಡಲು 7, ಲೋಕ ಕಲ್ಯಾಣ ಮಾರ್ಗ್ ತಲುಪಿದ್ದಾರೆ. ಈ ಭೇಟಿ ಯಲ್ಲಿ ಅವರು ಕೃಷಿ ಕಾನೂನುಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಪಂಜಾಬ್‌ನಲ್ಲಿ ಭತ್ತ ಸಂಗ್ರಹಣೆಯನ್ನು ಅಕ್ಟೋಬರ್ 1 ರಿಂದ ಮುಂದೂಡುವ ಕೇಂದ್ರದ ಪತ್ರವನ್ನು ಹಿಂಪಡೆಯುವಂತೆ ಚನ್ನಿ ಪ್ರಧಾನಿ ಮೋದಿಯನ್ನು ಒತ್ತಾಯಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ಇತ್ತೀಚಿನ ಭಾರೀ ಮಳೆಯಿಂದಾಗಿ ಬೆಳೆ ಪಕ್ವತೆ ವಿಳಂಬವಾಗುತ್ತಿರುವುದರಿಂದ ಕೇಂದ್ರವು ಗುರುವಾರ ಪಂಜಾಬ್ ಮತ್ತು ಹರಿಯಾಣದಲ್ಲಿ ಖಾರಿಫ್ ಭತ್ತದ ಸಂಗ್ರಹವನ್ನು ಅಕ್ಟೋಬರ್ 11 ಕ್ಕೆ ಮುಂದೂಡಿದೆ. 


ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ನಂತರ ಪಂಜಾಬ್ ಒಂದು ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಬಂದಿದೆ. ಕೃಷಿ ಕಾನೂನುಗಳು ಪಂಜಾಬ್‌ನಲ್ಲಿ ವಿವಾದದ ವಿಷಯವಾಗಿದ್ದು, ಮುಂದಿನ ವರ್ಷ ಪಂಜಾಬ್​​ನಲ್ಲಿ ಚುನಾವಣೆ ನಡೆಯಲಿದೆ.


ಮಂಗಳವಾರ ಚನ್ನಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು ಮತ್ತು ಕೇಂದ್ರವು ಕಾರ್ಯನಿರ್ವಹಿಸದಿದ್ದರೆ, ರಾಜ್ಯವು ವಿಧಾನಸಭೆಯ ಅಧಿವೇಶನವನ್ನು ಕರೆದು ಕಾನೂನುಗಳನ್ನು ತಿರಸ್ಕರಿಸುತ್ತದೆ ಎಂದು ಎಚ್ಚರಿಸಿದ್ದಾರೆ.


“ರೈತರ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಮಂತ್ರಿಯನ್ನು ಒತ್ತಾಯಿಸಲಾಗಿದೆ” – ಪಂಜಾಬ್ ಸಿಎಂ  
ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರೈತರ ಪ್ರತಿಭಟನೆಯ ಸಮಸ್ಯೆಯನ್ನು ಬಗೆಹರಿಸುವಂತೆ ಮತ್ತು ಪ್ರತಿಭಟನಾ ನಿರತ ರೈತರೊಂದಿಗೆ ಸಂವಾದವನ್ನು ಪುನರಾರಂಭಿಸುವಂತೆ ಒತ್ತಾಯಿಸಿರುವೆ. “ಮೂರು ಕಾನೂನುಗಳನ್ನು ಹಿಂಪಡೆಯಬೇಕು ಎಂದು ನಾನು ಒತ್ತಾಯಿಸಿದ್ದೇನೆ ಎಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ನಂತರ ಚನ್ನಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಜಲ್ ಜೀವನ್ ಮಿಷನ್: ಗ್ರಾಮ ಪಂಚಾಯತ್, ಪಾನಿ ಸಮಿತಿಗಳ ಜತೆ ಪ್ರಧಾನಿ ಮೋದಿ ಸಂವಾದ ನಾಳೆ

Read Full Article

Click on your DTH Provider to Add TV9 Kannada