ಚೆನ್ನೈ: ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿದ್ದ ತಮಿಳುನಾಡು ಸರ್ಕಾರ ಇದೀಗ ತನ್ನ ಆದೇಶ ವಾಪಸ್ ಪಡೆದಿದೆ. ಕೇಂದ್ರ ಗೃಹ ಕಾರ್ಯದರ್ಶಿ ಪತ್ರದ ಬಳಿಕ ತಮಿಳುನಾಡು ಸರ್ಕಾರ ತನ್ನ ಆದೇಶ ವಾಪಸ್ ಪಡೆದಿದೆ.
ಇದೀಗ, ರಾಜ್ಯದ ಟಾಕೀಸ್ಗಳಲ್ಲಿ ದೇಶದ ಬೇರೆಡೆಯಂತೆ ಶೇ. 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗುವುದು. ಕಳೆದ ಮಂಗಳವಾರದಂದು ತಮಿಳುನಾಡು ಸರ್ಕಾರ ಶೇ.100 ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹಲವು ತಮಿಳು ನಟರ ಮನವಿ ಮೇರೆಗೆ ಸರ್ಕಾರ ಸಂಕ್ರಾಂತಿಗೆ ಮುನ್ನ ಆದೇಶ ಹೊರಡಿಸಿತ್ತು. ಆದರೆ, ಇದಕ್ಕೆ ಕೇಂದ್ರದಿಂದ ಆಕ್ಷೇಪಣೆ ವ್ಯಕ್ತವಾಗಿತ್ತು.
ಚಿತ್ರಮಂದಿರದಲ್ಲಿ ಅಂತರ ಅನಗತ್ಯ: ಹೌಸ್ಫುಲ್ಗೆ ತಮಿಳುನಾಡು ಸರ್ಕಾರ ಅವಕಾಶ
Published On - 7:52 pm, Fri, 8 January 21