ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಗಾಂಧಿ ಮತ್ತು ನೆಹರು ಹೆಸರು ಸೂಚಿಸಿದ ಎಂ.ಕೆ ಸ್ಟಾಲಿನ್

ಎಂ.ಕೆ ಸ್ಟಾಲಿನ್​ ಅವರು ಮುನ್ಸಿಪಲ್​ ಆಡಳಿತ ಸಚಿವರಾಗಿ ಹಾಗೂ ನಗರ ಮತ್ತು ನೀರು ಸರಬರಾಜಿನ ಉಸ್ತುವಾರಿ ಸಚಿವರಾಗಿ ಕೆ.ಎನ್​ ನೆಹರೂ ಅವರ ಹೆಸರನ್ನು ಸೂಚಿಸಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಮತ್ತೋರ್ವ ಮಂತ್ರಿ ಆರ್​. ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಗಾಂಧಿ ಮತ್ತು ನೆಹರು ಹೆಸರು ಸೂಚಿಸಿದ ಎಂ.ಕೆ ಸ್ಟಾಲಿನ್
ಎಂ.ಕೆ.ಸ್ಟಾಲಿನ್​
Updated By: Digi Tech Desk

Updated on: May 07, 2021 | 2:32 PM

ದೆಹಲಿ: ಎಂ.ಕೆ ಸ್ಟಾಲಿನ್​ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮೇ 7ರಂದು (ಶುಕ್ರವಾರ) ಪ್ರಮಾಣವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಂತೆಯೇ, ಸಚಿವ ಸಂಪುಟದಲ್ಲಿ ಗಾಂಧಿ ಅವರ ಜೊತೆಗೆ ನೆಹರೂ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸ್ಟಾಲಿನ್​ ಘೋಷಿಸಿದ ನೂತನ ಕ್ಯಾಬಿನೇಟ್​ನ 34 ಸದಸ್ಯರಲ್ಲಿ ಇದೀಗ ಗಾಂಧಿ ಮತ್ತು ನೆಹರೂ ಅವರ ಹೆಸರೂ ಕೇಳಿ ಬಂದಿದೆ.

ಮುನ್ಸಿಪಲ್​ ಆಡಳಿತ ಸಚಿವರಾಗಿ ಹಾಗೂ ನಗರ ಮತ್ತು ನೀರು ಸರಬರಾಜಿನ ಉಸ್ತುವಾರಿ ಸಚಿವರಾಗಿ ಕೆ.ಎನ್​ ನೆಹರೂ ಅವರ ಹೆಸರನ್ನು ಸ್ಟಾಲಿನ್​ ಸೂಚಿಸಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಮತ್ತೋರ್ವ ಮಂತ್ರಿ ಆರ್​. ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಆರ್. ಗಾಂಧಿ ಮತ್ತು ನೆಹರೂ ಅವರ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳಿದ್ದು, ಪ್ರಮಾಣವಚನ ಸ್ವೀಕಾರ ಮಾಡುವ ಮೊದಲು ನ್ಯಾಯಾಲಯ ಈ ಕುರಿತಂತೆ ಆರೋಪಗಳನ್ನು ರದ್ದುಗೊಳಿಸಿದೆ. ಆರ್​. ಗಾಂಧಿ ಅವರು ರಾಣಿಪೇಟೆ ಕ್ಷೇತ್ರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ನಾಲ್ಕು ಬಾರಿ ಶಾಸಕರಾಗಿರುತ್ತಾರೆ. ಪಕ್ಷದ ಹಿರಿಯ ನಾಯಕ ಕೆ.ಎನ್​ ನೆಹರೂ ಅವರು ತಿರುಚಿ ಪಶ್ಚಿಮ ಕ್ಚೇತ್ರದ ಶಾಸಕರಾಗಿದ್ದರು.

ಇದನ್ನೂ ಓದಿ: MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಪ್ರಮಾಣ ವಚನ ಸ್ವೀಕಾರ

Published On - 2:17 pm, Fri, 7 May 21