MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ
ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಂಪುಟದ 33 ಸದಸ್ಯರೊಂದಿಗೆ ಇಂದು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಂಪುಟದ 33 ಸದಸ್ಯರೊಂದಿಗೆ ಇಂದು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೊರೊನಾ ನಿರ್ಬಂಧಗಳ ನಡುವೆ ಚೆನ್ನೈನ ರಾಜ್ ಭವನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಸಮ್ಮುಖದಲ್ಲಿ ಸರಳ ಸಮಾರಂಭದಲ್ಲಿ ಇಂದು ಬೆಳಿಗ್ಗೆ ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಕೆ ಸ್ಟಾಲಿನ್ ಗೃಹಸಚಿವರಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸ್ಟಾಲಿನ್ ಅವರು ಆಡಳಿತ ಮತ್ತು ಪೊಲೀಸ್ ಸೇವೆಗಳಿಗೆ ಸಂಬಂಧಿಸಿದಂತೆ ಹಲವಾರು ಖಾತೆಗಳನ್ನು ಹೊಂದಿದ್ದಾರೆ.
ಸ್ಟಾಲಿನ್ ತನ್ನ 69ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಅವರ ತಂದೆ ಎಂ.ಕರುಣಾನಿಧಿ ಅವರು ಐದು ಬಾರಿ ಈ ಹುದ್ದೆಯನ್ನು ಅಲಂಕರಿಸಿದ್ದರು. ಎಂ.ಕೆ ಸ್ಟಾಲಿನ್ ಅವರು ಈ ಹಿಂದೆ ಏಳು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಚೆನ್ನೈ ಮೇಯರ್ ಆಗಿ ಕೆಲಸ ನಿರ್ವಹಿಸಿದ್ದರು. ರಾಜಕೀಯದಲ್ಲಿ 10 ವರ್ಷದ ಆಡಳಿತದ ನಂತರ ಇದೀಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜ್ಯವು ಕೊರೊನಾ ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಸ್ಟಾಲಿನ್ ಅವರ ಆಡಳಿತ ದೊಡ್ಡ ಸವಾಲಾಗಿದೆ. ಸ್ವಾಲಿನ್ ಅವರ ಸಹೋದರರಾದ ಎಂ.ಎಸ್ ಕನಿಮೋಜಿ ಈ ಕುರಿತಂತೆ ಮಾತನಾಡಿ, ಕೊವಿಡ್ ನಿಯಂತ್ರಣದ ಬಗ್ಗೆ ಸ್ಟಾಲಿನ್ ಅವರು ಸ್ಪಷ್ಟವಾದ ಯೋಜನೆ ಹೊಂದಿದ್ದಾರೆ. ಇದೇ ಅವರ ಮೊದಲ ಆದ್ಯತೆಯೂ ಅಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹೊಸ ಜಲಸಂಪನ್ಮೂಲ ಸಚಿವರಾಗಿ ಹಿರಿಯ ಡಿಎಂಕೆ ನಾಯಕ ಮುರುಗನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುರುಗನ್ ಅವರು ಮಾಜಿ ಸಚಿವರು ಮತ್ತು ವೆಲ್ಲೂರು ಜಿಲ್ಲೆಯ ಕಟ್ಪಡಿ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದವರು. ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ ಈ ಕಾತೆ ನಿರ್ಣಾಯಕವಾಗಿದೆ. ಯುನೈಟೆಡ್ ಸ್ಟೇಟ್ನಲ್ಲಿ ಕೆಲಸ ಮಾಡಿದ ಮಾಜಿ ಹೂಡಿಕೆ ಬ್ಯಾಂಕರ್ (ಫಾರ್ಮರ್ ಇನ್ವೆಸ್ಟ್ಮೆಂಟ್ ಬ್ಯಾಂಕರ್) ಪಳನಿವೆಲ್ ತ್ಯಾಗರಾಜನ್ ಅವರಿಗೆ ಹಣಕಾಸು ಹುದ್ದೆಯನ್ನು ನೀಡಲಾಗಿದೆ.
ಆರೋಗ್ಯ ಇಲಾಖೆ ಇದೀಗ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಒಳಗೊಂಡಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸಿದೆ. ಚೆನ್ನೈನ ಮಾಜಿ ಮೇಯರ್ ಆಗಿರುವ ಸಚಿವ ಎಂ.ಎ ಸುಬ್ರಮಣಿಯನ್ ನೇತೃತ್ವವಹಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಡ್ ಕೊರತೆ ಉಂಟಾಗುತ್ತಿದೆ. ಹಾಗಾಗಿ ಕಡಿಮೆ ಬೆಲೆಗೆ ಬೆಡ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸ್ಟಾಲಿನ್ ಅವರು ಮನವಿ ಮಾಡಿಕೊಂಡಿದ್ದಾರೆ. ಮೀನುಗಾರಿಕೆ ಮತ್ತು ಮೀನುಗಾರಿಕಾ ಕಲ್ಯಾಣ ಎಂದು ಮರುನಾಮಕರಣ ಮಾಡಿದ ಸಚಿವ ಸ್ಥಾನವನ್ನು ಅನಿತಾ ಆರ್ ರಾಧಾಕೃಷ್ಣನ್ ನೇತೃತ್ವವಹಿಸಲಿದ್ದು, ಸ್ಟಾಲಿನ್ ಅವರ ಸಂಪುಟದಲ್ಲಿ ಮಹಿಳಾ ಸಚಿವರೂ ಇರಲಿದ್ದಾರೆ.
Published On - 12:45 pm, Fri, 7 May 21