Man Chews Snake: ಕೊರೊನಾಗೆ ಔಷಧ ಎಂದು ಸತ್ತ ಹಾವನ್ನೇ ಜಗಿದ ಭೂಪ!

| Updated By: ganapathi bhat

Updated on: Aug 14, 2021 | 1:12 PM

ಅರಣ್ಯ ಅಧಿಕಾರಿ (ಡಿಎಫ್​ಒ) ಎಸ್. ಆನಂದ್ ವಡಿವೇಲುವನ್ನು ಬಂಧಿಸಿ, 7,000 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋ ವೈರಲ್ ಆದ ಬಳಿಕ ಆತನನ್ನು ಬಂಧಿಸಲಾಗಿದೆ.

Man Chews Snake: ಕೊರೊನಾಗೆ ಔಷಧ ಎಂದು ಸತ್ತ ಹಾವನ್ನೇ ಜಗಿದ ಭೂಪ!
ಹಾವು (ಪ್ರಾತಿನಿಧಿಕ ಚಿತ್ರ)
Follow us on

ಮಧುರೈ: ಇಲ್ಲಿನ 50 ವರ್ಷ ವಯಸ್ಸಿನ ವಡಿವೇಲು ಎಂಬ ಕೃಷಿಕನೊಬ್ಬ ಸತ್ತ ಹಾವನ್ನು ಜಗಿದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅರಣ್ಯ ಅಧಿಕಾರಿಗಳು ಬಂಧಿಸಿ, 7,000 ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ. ವಡಿವೇಲು ಎಂಬಾತ ಸತ್ತ ಹಾವನ್ನು ಜಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೋದಲ್ಲಿ ಆತ ಕೊರೊನಾ ಸೋಂಕಿಗೆ ಹಾವುಗಳು ಉತ್ತಮ ಔಷಧ ಎಂಬ ಬಗ್ಗೆಯೂ ಹೇಳಿಕೊಂಡಿದ್ದಾನೆ. ಇದೀಗ ಅರಣ್ಯ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ಪೆರುಮಾಪಟ್ಟಿ ಎಂಬಲ್ಲಿನ ನಿವಾಸಿ ವಡಿವೇಲು, ಸತ್ತುಹೋಗಿರುವ ಕಟ್ಟು ಹಾವನ್ನು ಜಗಿಯುತ್ತಿದ್ದುದು ವಿಡಿಯೋದಲ್ಲಿ ವೈರಲ್ ಆಗಿದೆ. ಈ ಹಾವು ವಿಷಜಂತುವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಕೊರೊನಾ ವೈರಸ್​ನಿಂದ ರಕ್ಷಿಸಲು ಹಾವು ಉತ್ತಮ ಆಯ್ಕೆ ಎಂದು ವಿಡಿಯೋದಲ್ಲಿ ಆತ ಹೇಳಿಕೊಂಡಿದ್ದಾನೆ. ಕೊರೊನಾದಿಂದ ರಕ್ಷಿಸಿಕೊಳ್ಳಲು ಆತ ಹಾವು ಜಗಿದಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಅರಣ್ಯ ಅಧಿಕಾರಿ (ಡಿಎಫ್​ಒ) ಎಸ್. ಆನಂದ್ ವಡಿವೇಲುವನ್ನು ಬಂಧಿಸಿ, 7,000 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋ ವೈರಲ್ ಆದ ಬಳಿಕ ಆತನನ್ನು ಬಂಧಿಸಲಾಗಿದೆ.

ಕೆಲವರು ಆತನಿಗೆ ಹಾವನ್ನು ಜಗಿಯುವಂತೆ ಹೇಳಿದ್ದಾರೆ. ಒತ್ತಾಯಿಸಿದ್ದಾರೆ. ವಡಿವೇಲು ಆ ವೇಳೆ ಕುಡಿದ ಮತ್ತಿನಲ್ಲಿದ್ದ ಎಂದು ಡಿಎಫ್​ಒ ಮಾಹಿತಿ ನೀಡಿದ್ದಾರೆ. ವಡಿವೇಲು ಅದಾಗಲೇ ಸತ್ತಿರುವ ಹಾವನ್ನು ಜಗಿದಿದ್ದಾನೆ. ಅದೃಷ್ಟವಷಾತ್ ವಿಷಕಾರಿ ಭಾಗವನ್ನು ಆತ ಜಗಿದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೊರೊನಾ ತಡೆಯಲು ಈ ಮಾರ್ಗ ಅನುಸರಿಸಿ
ಕೊರೊನಾ ಸೋಂಕು ತಡೆಗಟ್ಟಲು ಈ ರೀತಿಯ ಮಾರ್ಗಗಳನ್ನು ಅನುಸರಿಸುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಅಸಂಬದ್ಧ ವಿಧಾನಗಳಿಂದ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ಈ ಬಗ್ಗೆ ನಾವು ಜಾಗೃತರಾಗಿರಬೇಕು. ಕೊವಿಡ್-19 ಹರಡದಂತೆ ತಡೆಯಲು ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು, ಸ್ವಚ್ಛತಾ ಮಾರ್ಗಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಜೊತೆಗೆ, ಅರ್ಹರು ಲಸಿಕೆ ಪಡೆದುಕೊಳ್ಳುವುದು ಅವಶ್ಯವಾಗಿದೆ.

ಇದನ್ನೂ ಓದಿ: ಕೊರೊನಾ ಹಾವಳಿ ಮಧ್ಯೆ ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ; 138 ಲೀಟರ್ ಗೋವಾ ಮದ್ಯ ವಶ: ಆರೋಪಿಗಳು ಪರಾರಿ

ನಮಗೆ ಕೊರೊನಾ​ ಕಲಿಸಿದ ಪಾಠ ಜೀವನಪರ್ಯಂತ ಮರೆಯುವಂತಿಲ್ಲ; ನಟ ಶರಣ್​

Published On - 6:03 pm, Fri, 28 May 21