Watch: ವೇದಿಕೆಗೆ ಕುರ್ಚಿ ತರಲು ವಿಳಂಬ ಮಾಡಿದಕ್ಕೆ ಡಿಎಂಕೆ ಕಾರ್ಯಕರ್ತರ ಮೇಲೆ ಕಲ್ಲೆಸೆದ ತಮಿಳುನಾಡು ಸಚಿವ

ಕುಳಿತು ಕೊಳ್ಳಲು ಕುರ್ಚಿ ತರುವುದಕ್ಕೆ ವಿಳಂಬ ಮಾಡಿದ್ದಕ್ಕೆ ರೊಚ್ಚಿಗೆದ್ದ ಸಚಿವರು ತಮ್ಮ ಕಾರ್ಯಕರ್ತರ ಮೇಲೆಯೇ ಕಲ್ಲು ಬಿಸಾಡಿದ್ದಾರೆ. ತಮಿಳುನಾಡಿದ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವರಾಗಿದ್ದಾರೆ ಎಸ್.ಎಂ.ನಾಸರ್.

Watch: ವೇದಿಕೆಗೆ ಕುರ್ಚಿ ತರಲು ವಿಳಂಬ ಮಾಡಿದಕ್ಕೆ ಡಿಎಂಕೆ ಕಾರ್ಯಕರ್ತರ ಮೇಲೆ ಕಲ್ಲೆಸೆದ ತಮಿಳುನಾಡು ಸಚಿವ
ಎಸ್.ಎಂ ನಾಸರ್
Updated By: ರಶ್ಮಿ ಕಲ್ಲಕಟ್ಟ

Updated on: Jan 24, 2023 | 4:17 PM

ತಿರುವಳ್ಳೂರು: ತಮಿಳುನಾಡು (Tamil Nadu) ಸಚಿವ ಎಸ್.ಎಂ.ನಾಸರ್ (SM Nasar) ತಿರುವಳ್ಳೂರಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK) ಕಾರ್ಯಕರ್ತರ ಮೇಲೆ ಕಲ್ಲು ಎಸೆದಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕುಳಿತು ಕೊಳ್ಳಲು ಕುರ್ಚಿ ತರುವುದಕ್ಕೆ ವಿಳಂಬ ಮಾಡಿದ್ದಕ್ಕೆ ರೊಚ್ಚಿಗೆದ್ದ ಸಚಿವರು ತಮ್ಮ ಕಾರ್ಯಕರ್ತರ ಮೇಲೆಯೇ ಕಲ್ಲು ಬಿಸಾಡಿದ್ದಾರೆ. ತಮಿಳುನಾಡಿದ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವರಾಗಿದ್ದಾರೆ ಎಸ್.ಎಂ.ನಾಸರ್. ಕಳೆದ ವರ್ಷ ನಾಸರ್ ಅವರು ಕೇಂದ್ರ ಸರ್ಕಾರವು ಹಾಲಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿದೆ ಎಂದು ಸುಳ್ಳು ಮಾಹಿತಿ ನೀಡಿ ಸುದ್ದಿಯಾಗಿದ್ದರು.

ತಿರುವಳ್ಳೂರಿನಲ್ಲಿ ಬುಧವಾರ ನಡೆಯಲಿರುವ ಭಾಷಾ ಹೋರಾಟದ ಹೋರಾಟಗಾರರ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಲಿದ್ದರು. ಇದಕ್ಕಾಗಿ ತಿರುವಳ್ಳೂರು ಐಸಿಎಂಆರ್ ಬಳಿ ವೇದಿಕೆ ನಿರ್ಮಿಸಲು 15 ಎಕರೆ ಭೂಮಿ ಸಿದ್ಧವಾಗುತ್ತಿದೆ.

ನವೆಂಬರ್ 4, 2022 ರಂದು ಸರ್ಕಾರಿ ಸ್ವಾಮ್ಯದ ಆವಿನ್‌ನಲ್ಲಿ ಹಾಲಿನ ಬೆಲೆ ಹೆಚ್ಚಳದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಹಾಲಿನ ಜಿಎಸ್ಟಿ ಬಗ್ಗೆ ಹೇಳಿದ್ದರು. ಕೇಂದ್ರ ಸರ್ಕಾರವು ಹಾಲಿಗೂ ಜಿಎಸ್‌ಟಿ ವಿಧಿಸಿದೆ. ಅದೊಂದು ಅಭೂತಪೂರ್ವ ಘಟನೆ. ಹಾಲಿಗೆ ಜಿಎಸ್‌ಟಿ ವಿಧಿಸಿದ ಪರಿಣಾಮ ಹಾಲಿನ ಮಾರಾಟ ದರ ಏರಿಕೆಯಾಗಿದೆ ಎಂದಿದ್ದರು ನಾಸರ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Tue, 24 January 23