Tamil Nadu Rain: ತಮಿಳುನಾಡಿನಲ್ಲಿ ನಿಲ್ಲದ ವರುಣನ ಅಬ್ಬರ; 8 ಜನ ಸಾವು, 23 ಜಿಲ್ಲೆಗಳಲ್ಲಿ ಹೈ ಅಲರ್ಟ್

| Updated By: ಸುಷ್ಮಾ ಚಕ್ರೆ

Updated on: Nov 27, 2021 | 6:56 PM

Chennai Weather Today: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ.

Tamil Nadu Rain: ತಮಿಳುನಾಡಿನಲ್ಲಿ ನಿಲ್ಲದ ವರುಣನ ಅಬ್ಬರ; 8 ಜನ ಸಾವು, 23 ಜಿಲ್ಲೆಗಳಲ್ಲಿ ಹೈ ಅಲರ್ಟ್
ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 8 ಜನ ಬಲಿಯಾಗಿದ್ದಾರೆ. ಇಂದು ಕೂಡ 23 ಜಿಲ್ಲೆಗಳ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ತಮಿಳುನಾಡಿನಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ ಮೂರು ಜನರು ಸಾವನ್ನಪ್ಪಿದ್ದಾರೆ. ಎನ್​ಡಿಆರ್​ಎಫ್​ನ  (NDRF) ಎರಡು ತಂಡಗಳನ್ನು ಚಿಂಗಲ್‌ಪೇಟೆಯಲ್ಲಿ ಮತ್ತು ಒಂದು ತಂಡವನ್ನು ಕಾಂಚೀಪುರಂನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ತಮಿಳುನಾಡು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಮಿಳುನಾಡಿನ 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಮಳೆಯಿಂದ ಹಲವಾರು ಪ್ರದೇಶಗಳಲ್ಲಿ ತೀವ್ರ ಜಲಾವೃತ ಮತ್ತು ಪ್ರವಾಹ ಉಂಟಾಗಿದೆ.

ಅಧಿಕೃತ ಆದೇಶದ ಪ್ರಕಾರ, ಚೆನ್ನೈ, ಚೆಂಗಲ್ಪಟ್ಟು, ತಿರುವಳ್ಳೂರು, ಕಲ್ಲಕುರಿಚಿ, ಟುಟಿಕೋರಿನ್, ನೆಲ್ಲೈ, ರಾಮನಾಥಪುರಂ, ಪುದುಕೊಟ್ಟೈ, ತಂಜೂರು, ತಿರುವರೂರ್, ನಾಗೈ, ಕಡಲೂರು, ಅರಿಯಲೂರು, ಪೆರಂಬಲೂರು, ತಿರುಚ್ಚಿ, ವಿಲ್ಲುಪುರಂ, ಸೇಲಂ, ತಿರುವಣ್ಣಾಮಲೈ, ವೆಲ್ಲೂರು, ರಾಣಿಪೆಟ್ಟೈಪುರಂ, ವೆಲ್ಲೂರು ಜಿಲ್ಲೆಗಳಿಗೆ ಇಂದು ರಜೆ ಘೋಷಿಸಲಾಗಿತ್ತು.

ಚೆನ್ನೈನಲ್ಲಿ 220 ಸ್ಥಳಗಳಲ್ಲಿ ಜಲಾವೃತ ವರದಿಯಾಗಿದ್ದು, ಈ ಪೈಕಿ 34 ಸ್ಥಳಗಳಲ್ಲಿ ನೀರನ್ನು ತೆರವುಗೊಳಿಸಲಾಗಿದೆ ಎಂದು ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಹೇಳಿದ್ದಾರೆ. ನಗರದ 127 ಸ್ಥಳಗಳಲ್ಲಿ ಪ್ರವಾಹದ ನೀರನ್ನು ಪಂಪ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಚೆನ್ನೈ, ತಿರುವಳ್ಳುವರ್, ಕಾಂಚೀಪುರಂ, ಚೆಂಗಲ್ಪಟ್ಟು, ತಿರುನಲ್ವೇಲಿ, ತೂತುಕುಡಿ, ರಾಮನಾಥಪುರಂ, ಕರಿಕಲ್, ನಾಗಪಟ್ಟಣಂ, ಪುದುಕೊಟ್ಟೈ, ಮೈಲಾಡುತುರೈ ಮತ್ತು ಪುದುಚೇರಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಕೊಮೊರಿನ್ ಪ್ರದೇಶ, ದಕ್ಷಿಣ ಕರಾವಳಿ ತಮಿಳುನಾಡು ಮತ್ತು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ 40-50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ಸೇಲಂ, ಧರ್ಮಪುರಿ, ತಿರುವಣ್ಣಾಮಲೈ, ಕಲ್ಲಕುರಿಚಿ, ಪೆರಂಬಲೂರು, ಕಡಲೂರು, ವೆಲ್ಲೂರು, ರಾಣಿಪೇಟ್ ಮತ್ತು ತಿರುಪತ್ತೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಭಾರೀ ಮಳೆಯ ಎಚ್ಚರಿಕೆಯ ನಂತರ ಅಧಿಕಾರಿಗಳು ಜಲಾವೃತ, ತೀವ್ರ ಬೆಳೆ ಹಾನಿ, ಮರಗಳ ಬುಡ ಸಮೇತ ಕಿತ್ತುಹಾಕುವುದು, ಜಾನುವಾರುಗಳಿಗೆ ಹಾನಿ ಮತ್ತು ನದಿಗಳು ಮತ್ತು ಕೆರೆಗಳಲ್ಲಿ ನೀರಿನ ಮಟ್ಟ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಚೆನ್ನೈ ಮತ್ತು ನೆರೆಯ ತಿರುವಳ್ಳುವರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳು ಈ ಮಾನ್ಸೂನ್ ಋತುವಿನಲ್ಲಿ ಸರಾಸರಿ ಮಳೆಗಿಂತ 56ರಿಂದ 67ರಷ್ಟು ಹೆಚ್ಚು ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ರಾಯಲಸೀಮಾ ಪ್ರದೇಶ ಮತ್ತು ಪೂರ್ವ ಗೋದಾವರಿ ಜಿಲ್ಲೆಯ ಯಾನಂ ಸೇರಿದಂತೆ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಪ್ರತ್ಯೇಕವಾದ ಅತಿ ಹೆಚ್ಚು ಮಳೆ ಬೀಳಲಿದೆ ಎಂದು IMD ಮುನ್ಸೂಚನೆ ನೀಡಿದೆ.

ಚೆನ್ನೈ ನಗರದ ಕೆಲವು ಭಾಗಗಳಲ್ಲಿ ನೀರು ನಿಂತಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಝುಲ್ಲಾ ರಸ್ತೆ, ಉಸ್ಮಾನ್ ರಸ್ತೆಯ ಭಾಗ, ಗಿರಿಯಪ್ಪ ರಸ್ತೆ, ಪೆರುಂಬಕ್ಕಂ ಭಾಗಗಳು, ಅಜೀಜ್ ನಗರ ಮತ್ತು ಕೆಕೆ ನಗರದಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Andhra Pradesh Rain: ಭಯಂಕರ ಮಳೆಯಿಂದ ಆಂಧ್ರದಲ್ಲಿ ಪ್ರಾಣಕಳೆದುಕೊಂಡವರು 44 ಮಂದಿ; ಅಲ್ಲಲ್ಲಿ ಇನ್ನೂ ಸಿಗುತ್ತಿವೆ ಶವಗಳು

Published On - 6:53 pm, Sat, 27 November 21