Andhra Pradesh Rain: ಭಯಂಕರ ಮಳೆಯಿಂದ ಆಂಧ್ರದಲ್ಲಿ ಪ್ರಾಣಕಳೆದುಕೊಂಡವರು 44 ಮಂದಿ; ಅಲ್ಲಲ್ಲಿ ಇನ್ನೂ ಸಿಗುತ್ತಿವೆ ಶವಗಳು

ಪ್ರವಾಹ ಪೀಡಿತ ಪ್ರದೇಶದಲ್ಲಿದ್ದ ಸುಮಾರು 95,949ಕುಟುಂಬಗಳಿಗೆ ಅಗತ್ಯವಸ್ತುಗಳನ್ನು ಪೂರೈಸಲಾಗಿದೆ. ಹಾಗೇ, ಆಶ್ರಯ ಶಿಬಿರಗಳಿಂದ ತಮ್ಮ ಮನೆಗಳಿಗೆ ಹೋಗುವಾಗ ಪ್ರತಿಯೊಂದು ಕುಟುಂಬಕ್ಕೂ ತಲಾ 2000 ರೂ.ಕೊಡಲಾಗಿದೆ ಎಂದು ಜಗನ್​ ರೆಡ್ಡಿ ತಿಳಿಸಿದ್ದಾರೆ.

Andhra Pradesh Rain: ಭಯಂಕರ ಮಳೆಯಿಂದ ಆಂಧ್ರದಲ್ಲಿ ಪ್ರಾಣಕಳೆದುಕೊಂಡವರು 44 ಮಂದಿ; ಅಲ್ಲಲ್ಲಿ ಇನ್ನೂ ಸಿಗುತ್ತಿವೆ ಶವಗಳು
ಆಂಧ್ರ ಮಳೆಯ ಚಿತ್ರಣ
Follow us
TV9 Web
| Updated By: Lakshmi Hegde

Updated on: Nov 27, 2021 | 8:02 AM

ಈ ಬಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಒಂದು. ಭರ್ಜರಿ ಮಳೆಯಿಂದಾಗಿ ಅಲ್ಲಿ ಅಪಾರ ಹಾನಿಯಾಗಿದೆ. ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. 16 ಮಂದಿ ನಾಪತ್ತೆಯಾಗಿದ್ದಾರೆ. ಈ ಮಧ್ಯೆ ನಿನ್ನೆ ಹೇಳಿಕೆ ಬಿಡುಗಡೆ ಮಾಡಿರುವ ಆಂಧ್ರ ಸಿಎಂ ವೈ.ಎಸ್.ಜಗನ್​ ರೆಡ್ಡಿ, ಆಂಧ್ರದ ನಾಲ್ಕು ಜಿಲ್ಲೆಗಳಲ್ಲಿ ಮಳೆಯಿಂದಾದ ಹಾನಿಯ ಬಗ್ಗೆ ಮತ್ತು ಮಳೆ-ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾದವರಿಗೆ ಆಂಧ್ರ ಸರ್ಕಾರ ನೀಡಲಿರುವ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. 

ರಾಯಲ್​ಸೀಮಾ, ಕಡಪಾ ಮತ್ತು ಅನಂತಪುರ ಮತ್ತು ನೆಲ್ಲೋರ್​​ ಜಿಲ್ಲೆಗಳಲ್ಲಿ ಊಹಿಸಲೂ ಸಾಧ್ಯವಾಗದಷ್ಟು ಮಳೆಯಾಗಿದೆ. ನವೆಂಬರ್​ 16-17ರಿಂದ ಶುರುವಾದ ಮಳೆ ನಿರಂತರವಾಗಿ ಇವತ್ತಿನವರೆಗೂ ಬೀಳುತ್ತಲೇ ಇದೆ. ಆಂಧ್ರದಲ್ಲಿ ಹಿಂದೆಂದೂ ಕಂಡಿರದಷ್ಟು ಮಳೆಯಾಗಿದೆ. ರಾಯಲ್​ಸೀಮಾ ಮುಳುಗಿತ್ತು. ತಿರುಪತಿಯ ತಿರುಮಲದಲ್ಲಂತೂ ಪ್ರವಾಹದ ರಭಸಕ್ಕೆ ವಾಹನಗಳೆಲ್ಲ ಕೊಚ್ಚಿಕೊಂಡುಹೋದವು ಎಂದು ಜಗನ್​ ಹೇಳಿದ್ದಾರೆ.

ನವೆಂಬರ್​ 19ರಂದು ಅಣ್ಣಮ್ಮಯ್ಯ ಜಲಾಶಯದ ಒಳಹರಿವು 3.2 ಕ್ಯೂಸೆಕ್ಸ್​​ಆಗಿತ್ತು. ಆಗ ಹೊರಹರಿವು ಕೇವಲ 2.17 ಕ್ಯೂಸೆಕ್ಸ್​ ಇತ್ತು. ಹೀಗಾಗಿ ಇದು ಹಲವು ಸ್ವರೂಪದ ಹಾನಿಗಳನ್ನುಂಟುಮಾಡಿತು. ಹಾಗೇ, ಪಿಂಚಾ ಡ್ಯಾಂನ ಒಳಹರಿವು 1.38ಕ್ಯೂಸೆಕ್ಸ್​​ಗೂ ಮೀರಿದ ಪರಿಣಾಮ ಅದರಿಂದಲೂ ಸಮಸ್ಯೆಯುಂಟಾಯಿತು.  ಅದರಲ್ಲೂ ಕಳೆದ 50 ವರ್ಷದಲ್ಲಿ ಅಣ್ಣಮ್ಮಯ್ಯ ಜಲಾಶಯ ಇಷ್ಟು ದೊಡ್ಡ ಪ್ರಮಾಣದಲ್ಲಿ ಒಳಹರಿವು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಹಾಗೇ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಗನ್​ ರೆಡ್ಡಿ, ಮಳೆಯಿಂದ ವಿದ್ಯುತ್​ ಸಂಪರ್ಕ ಕಳೆದುಕೊಂಡಿದ್ದ ನಾಲ್ಕು ಜಿಲ್ಲೆಗಳಿಗೆ ಪುನಃ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಹಾಗೇ 104 ನಂಬರ್​​ನ್ನು ಸಹಾಯವಾಣಿಯಾಗಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿದ್ದ ಸುಮಾರು 95,949ಕುಟುಂಬಗಳಿಗೆ ಅಗತ್ಯವಸ್ತುಗಳನ್ನು ಪೂರೈಸಲಾಗಿದೆ. ಹಾಗೇ, ಆಶ್ರಯ ಶಿಬಿರಗಳಿಂದ ತಮ್ಮ ಮನೆಗಳಿಗೆ ಹೋಗುವಾಗ ಪ್ರತಿಯೊಂದು ಕುಟುಂಬಕ್ಕೂ ತಲಾ 2000 ರೂ.ಕೊಡಲಾಗಿದೆ. ಹಾಗೇ, ಅಗತ್ಯವಿರುವ ಆಹಾರ, ನೀರು ಕೊಡಲಾಗಿದೆ. ಪ್ರವಾಹಕ್ಕೀಡಾಗಿದ್ದ ಮನೆಗನ್ನು ಅಗ್ನಿಶಾಮಕ ದಳದ ಸಿಬ್ಬಂದಿಯೇ ಸ್ವಚ್ಛಗೊಳಿಸಿಕೊಟ್ಟಿದ್ದಾರೆ. ಇನ್ನೂ ಕೆಲವೆಡೆ ಮೃತದೇಹಗಳು ಸಿಗುತ್ತಿವೆ. ಅವುಗಳನ್ನು ಹುಡುಕಿ, ಆದಷ್ಟು ಬೇಗ ಅವರ ಕುಟುಂಬಕ್ಕೆ ಕೊಡುವ ಕೆಲಸವೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶುಂಠಿ ನೀರು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ