ಜಾತಿ ಆಧಾರಿತ ಜನಗಣತಿ ನ್ಯಾಯಸಮ್ಮತ ಬೇಡಿಕೆ: ಎನ್‌ಸಿಬಿಸಿ ಮುಖ್ಯಸ್ಥ

ಇದು ಉತ್ತಮ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಬೇಡಿಕೆಯೊಂದಿಗೆ ಹಲವಾರು ಸಂಘಟನೆಗಳು ತಮ್ಮನ್ನು ಭೇಟಿ ಮಾಡಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸಾಹ್ನಿ ಹೇಳಿದ್ದಾರೆ.

ಜಾತಿ ಆಧಾರಿತ ಜನಗಣತಿ ನ್ಯಾಯಸಮ್ಮತ ಬೇಡಿಕೆ: ಎನ್‌ಸಿಬಿಸಿ ಮುಖ್ಯಸ್ಥ
ಡಾ ಭಗವಾನ್ ಲಾಲ್ ಸಾಹ್ನಿ

ಪಟನಾ: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಅಧ್ಯಕ್ಷ ಡಾ ಭಗವಾನ್ ಲಾಲ್ ಸಾಹ್ನಿ(Dr Bhagwan Lal Sahni) ಶುಕ್ರವಾರ ಜಾತಿ ಆಧಾರಿತ ಜನಗಣತಿ (Caste-based census) ನ್ಯಾಯಸಮ್ಮತ ಬೇಡಿಕೆಯಾಗಿದೆ. ಇದು ಉತ್ತಮ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಬೇಡಿಕೆಯೊಂದಿಗೆ ಹಲವಾರು ಸಂಘಟನೆಗಳು ತಮ್ಮನ್ನು ಭೇಟಿ ಮಾಡಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸಾಹ್ನಿ ಹೇಳಿದ್ದಾರೆ. ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಪಾಟ್ನಾದಲ್ಲಿ ಸುದ್ದಿಗಾರ ಜತೆ ಮಾತನಾಡಿದ ಸಾಹ್ನಿ ಹೇಳಿದರು. “ಜಾತಿ ಜನಗಣತಿಯು ನೀತಿ ನಿರೂಪಕರಿಗೆ ಹಿಂದುಳಿದ ಜಾತಿಗಳಿಗೆ ಉದ್ದೇಶಿತ ಕಲ್ಯಾಣ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಇದನ್ನು ಮಾಡಿದರೆ, ಯಾವ ಜಾತಿಗೆ ಎಷ್ಟು ಜನರು ಸೇರಿದ್ದಾರೆ ಮತ್ತು ಅವರಿಗೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ”ಎಂದು ಸಾಹ್ನಿ ಹೇಳಿದರು. ಜಾತಿ ಆಧಾರಿತ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ಇತರೆ ಹಿಂದುಳಿದ ವರ್ಗದ (OBC) ಜನರ ವಿವರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಲವಾರು ರಾಜಕೀಯ ಪಕ್ಷಗಳು ದೇಶದ ಜನಸಂಖ್ಯೆಯ ಜಾತಿವಾರು ಎಣಿಕೆಗೆ ಒತ್ತಾಯಿಸಲು ಪ್ರಾರಂಭಿಸಿವೆ ಎಂದು ಸಾಹ್ನಿ ಹೇಳಿದರು.

ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ರಾಜಕೀಯ ಪಕ್ಷಗಳು ಇಂತಹ ಜನಗಣತಿಗೆ ಬೇಡಿಕೆಯನ್ನು ಎತ್ತಿದ್ದವು. ದೇಶದಲ್ಲಿ ಜಾತಿ ಆಧಾರಿತ ಜನಗಣತಿಯನ್ನು 1931 ರಲ್ಲಿ ನಡೆಸಲಾಗಿತ್ತು.

ಇದನ್ನೂ ಓದಿ: ಕೊವಿಡ್​​ನಿಂದ ಸಾವಿಗೀಡಾದವರ ಕುಟುಂಬಗಳಿಗೆ ₹ 50,000 ಪರಿಹಾರ ಧನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

Click on your DTH Provider to Add TV9 Kannada