ಭಾರೀ ಮಳೆಗೆ ಮತ್ತೆ ತತ್ತರಿಸಿದ ತಮಿಳುನಾಡು: ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ

|

Updated on: Dec 18, 2023 | 7:22 AM

Tamil Nadu Rains: ತಮಿಳುನಾಡಿನ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಶಾಲೆಗಳು, ಕಾಲೇಜುಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಭಾರೀ ಮಳೆಗೆ ಮತ್ತೆ ತತ್ತರಿಸಿದ ತಮಿಳುನಾಡು: ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ
ಸಾಂದರ್ಭಿಕ ಚಿತ್ರ
Follow us on

ಚೆನ್ನೈ, ಡಿಸೆಂಬರ್ 18: ಮಳೆಯ ಅಟ್ಟಹಾಸಕ್ಕೆ ಇಡೀ ತಮಿಳುನಾಡು (Tamil Nadu Rains) ಮತ್ತೆ ತತ್ತರಿಸಿ ಹೋಗಿದೆ. ರಾಜಧಾನಿ ಚೆನ್ನೈ (Chennai) ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಬೀದಿಗೆ ಬೀಳುವಂತಾಗಿದೆ.

ಮಿಚಾಂಗ್​ ಚಂಡಮಾರುತಕ್ಕೆ ಇಡೀ ತಮಿಳುನಾಡು ತತ್ತರಿಸಿ ಹೋಗಿತ್ತು. ಇದೀಗ ಆ ನೋವಿನಿಂದ ಜನರು ಚೇತರಿಸಿಕೊಳ್ಳುತ್ತಿರುವಾಗಲೇ ಮಳೆಯ ಆರ್ಭಟ ಜೋರಾಗಿದೆ. ತಿರುನೆಲ್ವಿ ಪ್ರದೇಶವೇ ಸಂಪೂರ್ಣ ಮುಳುಗಡೆ ಆಗಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆನ್ನೈ, ತಿರುನ್ವೇಲಿ, ತನ್ಕಾಸಿ, ರಾಮನಾಥ್​ಪುರಮ್, ತುತುಕೊಡಿ, ಕನ್ಯಾಕುಮಾರಿ ಸೇರಿ ಹಲವೆಡೆ ವರುಣಾರ್ಭಟ ಮುಂದುವರಿದಿದೆ. ರಸ್ತೆಗಳು ಜಲಾವೃತವಾಗಿದ್ದರೆ, ಮನೆಗಳಿಗೆ ನೀರು ನುಗ್ಗಿದೆ. ಕೆಲವರು ಮನೆಯಿಂದ ಹೊರಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಎನ್​ಡಿಆರ್​ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಿಳಿದಿದ್ದಾರೆ.

ತೂತುಕುಡಿ ಪಟ್ಟಣದಲ್ಲಿ ಜನಜೀವನ ಅವ್ಯವ್ಯಸ್ತವಾಗಿದೆ. ಮಳೆಯಿಂದಾಗಿ ಜನರು ಪರದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳು ಹಾಗೂ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತವಾಗಿದೆ.

ತಮಿಳುನಾಡಿನ ಚೆನ್ನೈನಲ್ಲಿ ರಸ್ತೆಯಲ್ಲಿ 2ರಿಂದ 3ಅಡಿಗಳಷ್ಟು ನೀರು ನಿಂತಿತ್ತು. ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದರು.

ಇದನ್ನೂ ಓದಿ: Modi and Ambulance: ವಾರಾಣಸಿಯಲ್ಲಿ ರೋಡ್​ಶೋ ವೇಳೆ ಮೆರವಣಿಗೆ ವಾಹನ ನಿಲ್ಲಿಸಿ ಆ್ಯಂಬುಲೆನ್ಸ್​ಗೆ ದಾರಿ ಕೊಟ್ಟ ಪ್ರಧಾನಿ ಮೋದಿ

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪ್ರವಾಹ ಪರಿಸ್ಥಿತಿಯೇ ನಿರ್ಮಾಣವಾಗಿದೆ. ನೂರಾರು ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಜನರು ಪರದಾಡಿದ್ದಾರೆ.

ಶಾಲೆ, ಕಾಲೇಜುಗಳಿಗೆ ರಜೆ

ತಮಿಳುನಾಡಿನ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಶಾಲೆಗಳು, ಕಾಲೇಜುಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ವಿರುದುನಗರ ಜಿಲ್ಲೆಯಲ್ಲೂ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇತ್ತೀಚಿನ ಹವಾಮಾನ ವರದಿಯ ಪ್ರಕಾರ, ಡಿಸೆಂಬರ್ 18 ರಂದು ತಮಿಳುನಾಡು, ಕೇರಳ ಮತ್ತು ಮಾಹೆಯ ವಿವಿಧ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ