ಬೈಕ್​ನಲ್ಲಿ ಹೊರಟಿದ್ದ ದಲಿತ ಯುವಕರನ್ನು ತಡೆದು, ಥಳಿಸಿ, ಮೊಬೈಲ್, ಹಣ ಕಸಿದುಕೊಂಡು, ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು

ಬೈಕ್​ನಲ್ಲಿ ಹೊರಟಿದ್ದ ದಲಿತ ಯುವಕನ್ನು ತಡೆದು,  ಥಳಿಸಿ, ಮೊಬೈಲ್, ಹಣ ಕಸಿದುಕೊಂಡು, ಬಟ್ಟೆ ಬಿಚ್ಚಿಸಿ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಬ್ಬರು ದಲಿತರು ಮಣಿಮೂರ್ತೀಶ್ವರಂ ಪ್ರದೇಶದ ನಿವಾಸಿಗಳು, ಹಲ್ಲೆ ಮಾಡಿದ ನಂತರ ಅವರ ಫೋನ್​ಗಳನ್ನೂ ಕಸಿದುಕೊಳ್ಳಲಾಗಿದೆ. ಇದಲ್ಲದೇ ಅವರ ಬಳಿ ಇದ್ದ 5000ರೂ.ಗಳನ್ನು ಗುಂಪು ದೋಚಿ ಪರಾರಿಯಾಗಿದೆ.

ಬೈಕ್​ನಲ್ಲಿ ಹೊರಟಿದ್ದ ದಲಿತ ಯುವಕರನ್ನು ತಡೆದು, ಥಳಿಸಿ, ಮೊಬೈಲ್, ಹಣ ಕಸಿದುಕೊಂಡು, ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು
ಪ್ರಾತಿನಿಧಿಕ ಚಿತ್ರ

Updated on: Nov 03, 2023 | 2:56 PM

ಬೈಕ್​ನಲ್ಲಿ ಹೊರಟಿದ್ದ ದಲಿತ ಯುವಕನ್ನು ತಡೆದು,  ಥಳಿಸಿ, ಮೊಬೈಲ್, ಹಣ ಕಸಿದುಕೊಂಡು, ಬಟ್ಟೆ ಬಿಚ್ಚಿಸಿ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಬ್ಬರು ದಲಿತರು ಮಣಿಮೂರ್ತೀಶ್ವರಂ ಪ್ರದೇಶದ ನಿವಾಸಿಗಳು, ಹಲ್ಲೆ ಮಾಡಿದ ನಂತರ ಅವರ ಫೋನ್​ಗಳನ್ನೂ ಕಸಿದುಕೊಳ್ಳಲಾಗಿದೆ. ಇದಲ್ಲದೇ ಅವರ ಬಳಿ ಇದ್ದ 5000ರೂ.ಗಳನ್ನು ಗುಂಪು ದೋಚಿ ಪರಾರಿಯಾಗಿದೆ.

ದಲಿತ ಯುವಕರ ಮೇಲೆ ಮೂತ್ರ ವಿಸರ್ಜನೆ
ಈ ಯುವಕರು ಮನೆಗೆ ತೆರಳಲು ಯತ್ನಿಸಿದಾಗ ಅವರ ಬಟ್ಟೆ ಬಿಚ್ಚಿಸಿ ಮೂತ್ರ ವಿಸರ್ಜನೆ ಮಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೇಗೋ ತಮ್ಮ ಮನೆ ತಲುಪಿದರು.
ಗಾಯಗೊಂಡ ಇಬ್ಬರನ್ನೂ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: Dalit Atrocities: ಕೊಪ್ಪಳದಲ್ಲಿ 30 ವರ್ಷದ ದಲಿತ ಯುವತಿ ಮೇಲೆ ಚಪ್ಪಲಿಯಿಂದ ಹಲ್ಲೆ

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 392 (ದರೋಡೆ), 397 (ನೋಯಿಸುವ ಪ್ರಯತ್ನದೊಂದಿಗೆ ದರೋಡೆ) ಮತ್ತು ಸೆಕ್ಷನ್ 3 (1)(r), 3 (1)(s), 3 (A ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಕೂಡ ಬಂಧಿಸಿದ್ದಾರೆ.

ದಲಿತ ಯುವಕರಿಬ್ಬರೂ ತಮ್ಮ ಬಳಿ ಹಣವಿಲ್ಲ ಎಂದು ಹೇಳಿದಾಗ ದಾಳಿಕೋರರು ಬೇರೆಯವರಿಂದ ತಮ್ಮ ಖಾತೆಗೆ ಹಣ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. ಹಣ ವರ್ಗಾವಣೆ ಆಗುತ್ತಿದ್ದಾಗ ಮತ್ತಿಬ್ಬರು ಇವರ ಬಳಿ ಬಂದರು. ಖಾತೆಗೆ ಹಣ ಬಂದ ನಂತರ ಯುವಕನೊಬ್ಬ ಡೆಬಿಟ್ ಕಾರ್ಡ್ ತೆಗೆದುಕೊಂಡು ಹಣ ತೆಗೆಯಲು ಒತ್ತಾಯಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us