ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಲೋಕಸಭಾ ಸದಸ್ಯ ವಸಂತಕುಮಾರ್ ಕೋವಿಡ್‌ನಿಂದಾಗಿ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್ 10ರಂದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ವಸಂತಕುಮಾರ್ ಶುಕ್ರವಾರ ಕೊರೊನಾಘಾತಕ್ಕೆ ಬಲಿಯಾಗಿದ್ದಾರೆ.
ಇದಕ್ಕಿಂತ ಆಘಾತಕಾರಿ ವಿಷಯ ಅಂದ್ರೆ ಮಾರ್ಜ್ 20ರಂದೇ ಲೋಕಸಭೆಯಲ್ಲಿ ಕೊರೊನಾ ವೈರಸ್‌ನ ಗಂಭೀರತೆ ಬಗ್ಗೆ ದೇಶಕ್ಕೆ ಎಚ್ಚರಿಕೆ ನೀಡಿದ್ದರು. ಕೊರೊನಾ ಸಂಕಷ್ಟವನ್ನು ರಾಷ್ಟ್ರೀಯ ತುರ್ತು ಸ್ಥಿತಿ ಎಂದು ಘೋಷಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದರು.
ದುರಂತ ಅಂದ್ರೆ ನಂತರದ ದಿನಗಳಲ್ಲಿ ವಸಂತಕುಮಾರ್ ಮಾಡಿದ ಸಲಹೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿತು. ಆದ್ರೆ ಈ ಬಗ್ಗೆ ಸ್ವಲ್ಪವೂ ವಸಂತಕುಮಾರ್ ನೀಡಿದ್ದ ಸಲಹೆಗಳ ಕುರಿತು ಉಲ್ಲೇಖ ಮಾಡಿರಲಿಲ್ಲ. ದುರುದೃಷ್ಟವಶಾತ್ ಈಗ ವಸಂತಕುಮಾರ್ ಅವರೇ ಕೊರೊನಾಗೆ ಬಲಿಯಾಗಿದ್ದಾರೆ.
ವಸಂತಕುಮಾರ್ ಹೇಳಿದ ಸಲಹೆಗಳನ್ನು ಮೋದಿ ಸರ್ಕಾರ ಮೊದಲೇ ಗಂಭೀರವಾಗಿ ಪರಿಗಣಿಸಿದ್ದರೆ, ಸಾವಿರಾರು ಸಾವುನೋವು ತಪ್ಪಿಸಬಹುದಿತ್ತು ಅಂತಾ ಕಾಣಿಸುತ್ತೆ, ಅಲ್ಲವೆ?
On 20th March Kanyakumari MP #Vasanthakumar ji in his Lok Sabha speech kept demand of declaring #COVIDー19 as "National Disaster"..
He spoke also for direct benifit transfers to daily wagers & to help small businesses ..
He was interrupted with laugh within few secs..RIP sir? pic.twitter.com/L5ezM2b6l4
— Niraj Bhatia (@bhatia_niraj23) August 28, 2020