AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್: ಮೂವರು ಮಹಿಳೆಯರು, ನೀರಿಲ್ಲದ ಕೆರೆಯಲ್ಲಿ ನಿಗೂಢವಾಗಿ ಅಗೆಯುತ್ತಿದ್ದರು! ಅನುಮಾನಗೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಸಿಕ್ಕಿದ್ದೇನು?

ದುಷ್ಕರ್ಮಿಗಳು ಮಹಿಳೆಯರನ್ನೂ ತಮ್ಮ ಮಾದಕ-ಪಾತಕ ಜಾಲಕ್ಕೆ ಎಳೆಯುತ್ತಿದ್ದಾರೆ. ಅದರಲ್ಲೂ ಹಣದ ಆಮಿಷ ಇದ್ದುಬಿಟ್ಟರೆ... ಏನು ಕೆಲಸ ಬೇಕಾದರೂ ಮಾಡಲು ಸಿದ್ಧ ಎನ್ನುವಂತಾಗಿಬಿಟ್ಟಿದೆ ಈಗಿನ ಪರಿಸ್ಥಿತಿ. ಮಹಿಳೆಯರಲ್ಲವಾ ಎಂದು ಯಾಮಾರಿ, ಪೊಲೀಸರು ಅವರ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಅಲ್ಲಿ ಅಪರಾಧ ಪ್ರಕರಣಗಳು ದಾಖಲಾಗುತ್ತಾ ಇರುತ್ತವೆ ಎಂಬುದು ಖೇದಕರ.

ವೈರಲ್: ಮೂವರು ಮಹಿಳೆಯರು, ನೀರಿಲ್ಲದ ಕೆರೆಯಲ್ಲಿ ನಿಗೂಢವಾಗಿ ಅಗೆಯುತ್ತಿದ್ದರು! ಅನುಮಾನಗೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಸಿಕ್ಕಿದ್ದೇನು?
ವೈರಲ್: ಮೂವರು ಮಹಿಳೆಯರು, ನೀರಿಲ್ಲದ ಕೆರೆಯಲ್ಲಿ ನಿಗೂಢವಾಗಿ ಅಗೆಯುತ್ತಿದ್ದರು! ಅನುಮಾನಗೊಂಡು ಪೊಲೀಸರು ಪರಿಶೀಲನೆ ನಡೆಸಿದಾಗ ಸಿಕ್ಕಿದ್ದೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 15, 2022 | 3:04 PM

ತಮಿಳುನಾಡು: ಗಾಂಜಾ ದೊಡ್ಡಮಟ್ಟದಲ್ಲಿ ಅಪಾಯಕಾರಿಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಕೃಷಿ ಮತ್ತು ಮಾರಾಟ ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಡ್ರಗ್ಸ್ ನ ಹಿಡಿತದಿಂದ ಯುವಕರನ್ನು ಬಚಾವು ಮಾಡಲು ಆಯಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದರಿಂದ ಪೊಲೀಸರೂ ಎಚ್ಚೆತ್ತಿದ್ದು, ವ್ಯಾಪಕ ತಪಾಸಣೆಗಳ ಮೂಲಕ ಪಾತಕಗಳನ್ನು ಪತ್ತೆ ಹಚ್ಚುತ್ತೊಇರುತ್ತಾರೆ.

ಈ ಹಿನ್ನೆಲೆಯಲ್ಲಿ ತಿರುಚ್ಚಿ ಜಿಲ್ಲೆಯಲ್ಲಿ (Trichy District) ಗಾಂಜಾ ನಿರ್ಮೂಲನೆಗೆ ಪೊಲೀಸರು ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಜಿಯಾಪುರಂ ಸರಾಗ್ ಭಾಗದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲೊಂದು ಕಡೆ.. ನೀರಿಲ್ಲದ ಕೆರೆಯಲ್ಲಿ ಮೂವರು ಮಹಿಳೆಯರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೊದಲು ಸೂಕ್ಷ್ಮವಾಗಿ ಪೊಲೀಸರು ಅವರ ಮೇಲೆ ನಿಗಾ ಇಟ್ಟಿದ್ದರು. ಆದರೆ ಮೊದಲೇ ಅದು ನೀರಿಲ್ಲದ ಕೆರೆಯಾಗಿತ್ತು. ಆದರೂ ಮಹೀಲೆಯರು ಅಲ್ಲಿ ಏನನ್ನೂ ಅಗೆದೆಗೆದು ಹೊರ ತೆಗೆಯುತ್ತಿದ್ದರು! ಅದು ಪೊಲೀಸರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಮತ್ತಷ್ಟು ನಿಗಾ ಇಟ್ಟಿದ್ದರು.

ಯಾರಾದರೂ ಬಂದು ಮಹಿಳೆಯರಿಗೆ ಗಾಂಜಾ ನೀಡಬಹುದು ಎಂದು ಮೊದಲು ಪೊಲೀಸರು ಭಾವಿಸಿದ್ದರು. ಆದರೆ ಅಲ್ಲಿ ಮಣ್ಣು ಅಗೆಯುತ್ತಿದ್ದಾಗ ಪೊಲೀಸರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಅಲ್ಲಿನ ನೋಟ ನೋಡಿದಾಗ ಸಿಡಿಲು ಬಡಿದಂತಾಗಿದೆ. ಮಹಿಳೆಯರು ಖಾಲಿ ಕೆರೆಯನ್ನು ಅಗೆಯುತ್ತಾ, ಅಗೆಯುತ್ತಾ ಗಾಂಜಾ ಬೆಳೆಯನ್ನು ಹೊರ ಹಾಕುತ್ತಿದ್ದರು! ಪೊಲೀಸರು ದಾಳಿ ನಡೆಸಿ, ಅಲ್ಲಿ ಇನ್ನಷ್ಟು ಭೂ ಶೋಧನೆ ನಡೆಸಿದಾಗ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಂತರ, ಮೂವರೂ ಮಹಿಳೆಯರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆಂಧ್ರಪ್ರದೇಶದಿಂದ ತಮಿಳುನಾಡಿಗೆ ಹೆಚ್ಚಿನ ಗಾಂಜಾ ಕಳ್ಳಸಾಗಣೆಯಾಗುತ್ತಿದ್ದು, ಈ ಮಹಿಳೆಯರು ತಿರುಚ್ಚಿ ಜಿಲ್ಲೆಯ ಹಲವೆಡೆ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ.

To read more in Telugu click here

ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು