ಹಿಂದೂ ಧರ್ಮದ ಅವಹೇಳನ ‘ತಾಂಡವ’.. ಅಮೆಜಾನ್​ನಿಂದ ವಿವರಣೆ ಕೇಳಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ವೆಬ್ ಸಿರೀಸ್​ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ ಎಂದು ಬಿಜೆಪಿ ಸಂಸದ ಮನೋಜ್ ಕೊಟಾಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂ ಧರ್ಮದ ಅವಹೇಳನ ‘ತಾಂಡವ’.. ಅಮೆಜಾನ್​ನಿಂದ ವಿವರಣೆ ಕೇಳಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ತಾಂಡವ್ ವೆಬ್ ಸಿರೀಸ್​ನ ಒಂದು ದೃಶ್ಯ
Follow us
guruganesh bhat
|

Updated on:Jan 18, 2021 | 11:20 AM

ದೆಹಲಿ: ವಿವಾದಿತ ತಾಂಡವ್ ವೆಬ್ ಸಿರೀಸ್​ ವಿರುದ್ಧ ಬಿಜೆಪಿ ನಾಯಕರ ದೂರು ದಾಖಲಾಗುತ್ತಿದ್ದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಮೆಜಾನ್ ಪ್ರೈಮ್ ವಿಡಿಯೋ ವತಿಯಿಂದ ವಿವರಣೆ ಕೇಳಿದೆ. ಇಂದು ಬೆಳಗ್ಗೆ 11:30ಕ್ಕೆ ಮಹಾರಾಷ್ಟ್ರ ಬಿಜೆಪಿ ನಾಯಕ ರಾಮ್ ಕದಮ್ ಅವರು ತಾಂಡವ್ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಜತೆಗೆ, ಬಿಜೆಪಿ ಸಂಸದ ಮನೋಜ್ ಕೊಟಾಕ್ ಅವರು ತಾಂಡವ್ ವೆಬ್ ಸರಣಿಯನ್ನು ನಿಷೇಧಿಸುವಂತೆ ಒತ್ತಾಯಿಸಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್​ಗೆ ಪತ್ರ ಬರೆದಿದ್ದಾರೆ.

ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ವೆಬ್ ಸಿರೀಸ್​ನಲ್ಲಿ ಸೆಕ್ಸ್, ಹಿಂಸೆ, ಮಾದಕ ವಸ್ತು, ದ್ವೇಷ ಮತ್ತು ಕೀಳುತನವನ್ನು ಬಿಂಬಿಸಲಾಗಿದೆ ಎಂದು ಬಿಜೆಪಿ ಸಂಸದ ಮನೋಜ್ ಕೊಟಾಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೇಶದ ಹಲವು ನಾಗರಿಕರು ಈ ವೆಬ್ ಸಿರೀಸ್​ ಬಗ್ಗೆ ನನ್ನಲ್ಲಿ ನಕಾರಾತ್ಮಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ಕುರಿತು ಬೇಕೆಂದೇ ಕೀಳಾಗಿ ಈ ವೆಬ್ ಸಿರೀಸ್​ನಲ್ಲಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತಾಂಡವ್ ವೆಬ್ ಸಿರೀಸ್​ ಪೋಸ್ಟರ್

ತಾಂಡವ್ ವೆಬ್ ಸಿರೀಸ್​ ಪೋಸ್ಟರ್

ಸೈಫ್​ ಅಲಿಖಾನ್​ ಅಭಿನಯದ ತಾಂಡವ್​ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು; ಕ್ಷಮೆಗೆ ಒತ್ತಾಯ

Published On - 10:37 am, Mon, 18 January 21