Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿ ತಲೆಗೆ 18 ಸೂಜಿಗಳನ್ನು ಚುಚ್ಚಿದ ಮಂತ್ರವಾದಿ

ಮಹಿಳೆಗಾಗಿರುವ ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತೇನೆಂದು ಹೇಳಿ ಮಂತ್ರವಾದಿಯೊಬ್ಬ ಆಕೆಯ ತಲೆಗೆ 18 ಸೂಜಿಗಳನ್ನು ಚುಚ್ಚಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಹಿಳೆಯ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿ ತಲೆಗೆ 18 ಸೂಜಿಗಳನ್ನು ಚುಚ್ಚಿದ ಮಂತ್ರವಾದಿ
ಬ್ಲ್ಯಾಕ್​ ಮ್ಯಾಜಿಕ್
Follow us
ನಯನಾ ರಾಜೀವ್
|

Updated on: Jul 19, 2024 | 2:08 PM

ಮಂತ್ರವಾದಿಯೊಬ್ಬ ಮಹಿಳೆಯ ಸಮಸ್ಯೆಯನ್ನು ಬಗೆಹರಿಸುವುದಾಗಿ ನಂಬಿಸಿ ಆಕೆಯ ತಲೆಗೆ 18 ಸೂಜಿಗಳನ್ನು ಚುಚ್ಚಿದ ಘಟನೆ ಒಡಿಶಾದ ಬಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬಂದ ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯು ತನಗಿರುವ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ತನ್ನ ಪೋಷಕರ ಜತೆಗೆ ಮಂತ್ರವಾದಿಯನ್ನು ಭೇಟಿಯಾಗಿದ್ದಳು.

ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೂ, ಆಕೆಯ ಸ್ಥಿತಿ ಸುಧಾರಿಸಲು ಸಾಧ್ಯವಾಗಲಿಲ್ಲ, ಆಕೆಯ ಕುಟುಂಬವು ಮಂತ್ರವಾದಿ ಸಹಾಯವನ್ನು ಪಡೆಯಲು ಮುಂದಾಗಿತ್ತು.

ಆರೋಪಿಯನ್ನು ಸಂತೋಷ್​ ರಾಣಾ ಎಂದು ಗುರುತಿಸಲಾಗಿದ್ದು ಮಹಿಳೆಯನ್ನು ಕೋಣೆಯೊಳಗೆ ಕರೆದೊಯ್ದಿದ್ದ, ಒಂದು ಗಂಟೆಯ ನಂತರ ಅವಳನ್ನು ಹೊರಗೆ ಕರೆತಂದಿದ್ದ.

ಮತ್ತಷ್ಟು ಓದಿ: ಅತ್ತೆ-ಅಳಿಯನ‌ ಮಧ್ಯೆ ಅನೈತಿಕ ಸಂಬಂಧದ ಕಟ್ಟು ಕಥೆ ಕಟ್ಟಿದ ಮಂತ್ರವಾದಿ: ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ

ನಂತರ, ಮಹಿಳೆಯ ನಿರಂತರ ಅಸ್ವಸ್ಥತೆಯನ್ನು ಗಮನಿಸಿದ ನಂತರ ಆಕೆಯ ಪೋಷಕರು ಆಕೆಯ ತಲೆಯೊಳಗೆ ಸೂಜಿಗಳಿರುವುದನ್ನು ಕಂಡರು. ತನ್ನ ಮಗಳ ತಲೆಯೊಳಗೆ ಎಂಟು ಸೂಜಿಗಳನ್ನು ತೆಗೆದಿರುವುದಾಗಿ ಮಹಿಳೆಯ ತಂದೆ ಹೇಳಿದ್ದಾರೆ.

ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸಿಟಿ ಸ್ಕ್ಯಾನ್ ನಡೆಸಲಾಯಿತು, ಮಹಿಳೆಯ ತಲೆಗೆ ಇನ್ನೂ 10 ಸೂಜಿಗಳು ಚುಚ್ಚಿರುವುದು ಕಂಡುಬಂದಿದೆ.

ಪೂಜೆ ವೇಳೆ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು ಮತ್ತು ಆದ್ದರಿಂದ ಚುಚ್ಚುವಿಕೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ಈ ಸಂಬಂಧ ಪೊಲೀಸರು ದೂರು ಸ್ವೀಕರಿಸಿದ್ದು, ನಂತರ ಮಂತ್ರವಾದಿಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ