ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ-ಚೀನಾ ಪಡೆ ಮುಖಾಮುಖಿ; ಚೀನಾ ಯೋಧರ ಬಂಧನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Oct 08, 2021 | 11:49 AM

Tawang standoff:ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ನಡೆದ ಮುಖಾಮುಖಿಯಲ್ಲಿ ಯಾವುದೇ ಚೀನಾ ಸೈನಿಕರನ್ನು ಬಂಧಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ-ಚೀನಾ ಪಡೆ ಮುಖಾಮುಖಿ; ಚೀನಾ ಯೋಧರ ಬಂಧನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ ವಾರ ಅರುಣಾಚಲ ಪ್ರದೇಶದ (Arunachal Pradesh) ಸೂಕ್ಷ್ಮ ತವಾಂಗ್ (Tawang) ವಲಯದ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತದ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದಾರೆ ಎಂದು ಈ ಬೆಳವಣಿಗೆ ಬಗ್ಗೆ ಪರಿಚಯವಿರುವ ಅಧಿಕಾರಿಗಳು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಲಡಾಖ್ ಸೆಕ್ಟರ್‌ನಲ್ಲಿ ಉದ್ವಿಗ್ನತೆಯನ್ನು ತಣ್ಣಗಾಗಿಸಲು ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಲು ಎರಡೂ ಕಡೆಯವರು ಯೋಜಿಸುತ್ತಿರುವ ಸಮಯದಲ್ಲಿಯೇ ಈ ಸಂಘರ್ಷ  ನಡೆದಿದೆ. ಯಾಂಗ್ತ್ಸೆ ಸಮೀಪದ  ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ. ಆಮೇಲೆಸೈನಿಕರು ತಮ್ಮ ತಮ್ಮ ಕಡೆಗಳಿಗೆ ಹಿಮ್ಮೆಟ್ಟುವಂತೆ ಒಬ್ಬರಿಗೊಬ್ಬರು ಕೇಳಿಕೊಂಡರು ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಸ್ಥಳೀಯ ಕಮಾಂಡರ್‌ಗಳ ಮಟ್ಟದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ಕೆಲವು ಗಂಟೆಗಳ ಮೊದಲು ಮುಖಾಮುಖಿ ನಡೆಯಿತು” ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

“ಎರಡೂ ಕಡೆಯವರು ತಮ್ಮ ಗಡಿಭಾಗಗಳವರೆಗೆ ಗಸ್ತು ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಎರಡೂ ಕಡೆಗಳ ಗಸ್ತು ಭೌತಿಕವಾಗಿ ಭೇಟಿಯಾದಾಗಲೆಲ್ಲಾ, ಸ್ಥಾಪಿತವಾದ ಪ್ರೋಟೋಕಾಲ್‌ಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತದೆ. ಇದು ನಿತ್ಯದ ವ್ಯವಹಾರವಾಗಿದೆ, “ಎಂದು ಅವರು ಹೇಳಿದರು.

ಆಗಸ್ಟ್ 30 ರಂದು ಉತ್ತರಾಖಂಡದ ಕೇಂದ್ರ ವಲಯದಲ್ಲಿ ಸುಮಾರು 100 ಸೈನಿಕರನ್ನು ಒಳಗೊಂಡ ಚೀನಾದ ಗಸ್ತು ಎಲ್‌ಎಸಿ ದಾಟಿ ಮತ್ತು ಇನ್ನೊಂದು ಬದಿಗೆ ಹಿಂತಿರುಗುವ ಮೊದಲು ಪಾದಚಾರಿ ಸೇತುವೆಯನ್ನು ಹಾನಿಗೊಳಿಸಿದ ವಾರಗಳ ನಂತರ ಇತ್ತೀಚಿನ ಘಟನೆ ಸಂಭವಿಸಿದೆ. ಒಳನುಸುಳುವಿಕೆ ನಡೆದ ಪ್ರದೇಶದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸರನ್ನು ನಿಯೋಜಿಸಲಾಗಿದೆ.

ಪಿಎಲ್‌ಎ ಸಂಪೂರ್ಣ ಗಡಿಯನ್ನು ಸಕ್ರಿಯವಾಗಿಡಲು ಯೋಜಿಸಿದೆ, ಇದರಿಂದ ಅವರು ತಮ್ಮ ಹಕ್ಕುಗಳನ್ನು ಬಲಪಡಿಸಬಹುದು. ನಂತರ ಈ ಪ್ರದೇಶಗಳಿಗೆ ಹಕ್ಕು ಚಲಾಯಿಸಲು ಇದು ದೃಢ ಹಾದಿಯಾಗಿರಬಹುದು “ಎಂದು ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಎಸ್ ಜಸ್ವಾಲ್ (ನಿವೃತ್ತ) ಹೇಳಿದರು.

ಕಳೆದ ವಾರ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಅವರು ಮಾತುಕತೆಗಳು ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯೊಂದಿಗೆ ಮುಂದಿನ ಸುತ್ತಿನ ಮಿಲಿಟರಿ ಅಕ್ಟೋಬರ್ ಎರಡನೇ ವಾರದಲ್ಲಿ ನಡೆಯಬಹುದು ಎಂದು ಹೇಳಿದರು.

ಎಲ್‌ಎಸಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪಿಎಲ್‌ಎಯೊಂದಿಗಿನ ದೊಡ್ಡ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ಅವರು ಹೇಳಿದರು.

ಸುಮಾರು 17 ತಿಂಗಳಿನ ನಂತರ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಎರಡೂ ಕಡೆಯವರು ಮಾತುಕತೆ ನಡೆಸುತ್ತಿದ್ದಾರೆ. ಹಾಟ್ ಸ್ಪ್ರಿಂಗ್ಸ್ ಅಥವಾ ಪೆಟ್ರೋಲಿಂಗ್ ಪಾಯಿಂಟ್ -15 ನಲ್ಲಿನ ಸಮಸ್ಯೆಗಳು ಎಲ್‌ಎಸಿಯಲ್ಲಿನ ಘರ್ಷಣೆಯ ಪ್ರಮುಖ ಸ್ಥಳವಾಗಿದೆ. ಈ ಹಿಂದೆ  ವರದಿ ಮಾಡಿದಂತೆ 13 ನೇ ಸುತ್ತಿನ ಮಾತುಕತೆಯ ಸಮಯದಲ್ಲಿ ಈ ಬಗ್ಗೆ ಚರ್ಚೆಯಾಗಬಹುದು.

12 ನೇ ಸುತ್ತಿನ ಮಿಲಿಟರಿ ಮಾತುಕತೆಯ ನಂತರ ಪ್ರಗತಿಯೊಂದಿಗೆ ಗೋಗ್ರಾ ಅಥವಾ ಪೆಟ್ರೋಲಿಂಗ್ ಪಾಯಿಂಟ್ -17ಯಲ್ಲಿ ನಿಯೋಜಿಸಿದ್ದ ಪಡೆಗಳನ್ನು ಚೀನಾ ವಾಪಸ್ ಕರೆದುಕೊಂಡಿತು.

ಚೀನಾದ ಯೋಧರನ್ನು ಬಂಧಿಸಲಾಗಿಲ್ಲ: ಕೇಂದ್ರ ಸರ್ಕಾರ

ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ನಡೆದ ಮುಖಾಮುಖಿಯಲ್ಲಿ ಯಾವುದೇ ಚೀನಾ ಸೈನಿಕರನ್ನು ಬಂಧಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಗಳ ಪ್ರಕಾರ, ವಾಸ್ತವ ನಿಯಂತ್ರಣ ರೇಖೆಯ (LAC) ಗ್ರಹಿಕೆಯಲ್ಲಿನ ವ್ಯತ್ಯಾಸಗಳಿಂದಾಗಿ ಈ ಮುಖಾಮುಖಿ ನಡೆಯಿತು.

“ಭಾರತ-ಚೀನಾ ಗಡಿಯನ್ನು ಔಪಚಾರಿಕವಾಗಿ ಗುರುತಿಸಲಾಗಿಲ್ಲ ಮತ್ತು ಆದ್ದರಿಂದ ದೇಶಗಳ ನಡುವೆ ವಾಸ್ತವ ನಿಯಂತ್ರಣ ರೇಖೆಯ ಗ್ರಹಿಕೆಯಲ್ಲಿ ವ್ಯತ್ಯಾಸವಿದೆ. ಎರಡು ದೇಶಗಳ ನಡುವಿನ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳ ಅನುಸರಣೆಯಿಂದ ವಿಭಿನ್ನ ಗ್ರಹಿಕೆಗಳ ಈ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಸಾಧ್ಯವಾಗಿದೆ,” ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: RBI Monetary Policy: ಕೊರೊನಾ ಕಾಟದ ಸಮ್ಮುಖದಲ್ಲಿ ರೆಪೊ ದರ ಸೇರಿದಂತೆ ನೀತಿ ನಿರೂಪಣೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್!