ಪ್ಯಾಂಟಿನ ಜೇಬಿನಲ್ಲಿ ದೇಶಿ ನಿರ್ಮಿತ ಪಿಸ್ತೂಲ್​ ಇಟ್ಟುಕೊಂಡು ರಸ್ತೆಯಲ್ಲಿ ಓಡಾಡಿದ ಶಿಕ್ಷಕಿ ಅರೆಸ್ಟ್​ !

| Updated By: Lakshmi Hegde

Updated on: Apr 13, 2022 | 1:39 PM

ಶಿಕ್ಷಕಿ ತಾನು ಧರಿಸಿದ ನೀಲಿ ಬಣ್ಣದ ಜೀನ್ಸ್​ ಪ್ಯಾಂಟ್​ನ ಜೇಬಲ್ಲಿ ಪಿಸ್ತೂಲ್​ ಇಟ್ಟುಕೊಂಡು ಓಡಾಡುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗಿವೆ.

ಪ್ಯಾಂಟಿನ ಜೇಬಿನಲ್ಲಿ ದೇಶಿ ನಿರ್ಮಿತ ಪಿಸ್ತೂಲ್​ ಇಟ್ಟುಕೊಂಡು ರಸ್ತೆಯಲ್ಲಿ ಓಡಾಡಿದ ಶಿಕ್ಷಕಿ ಅರೆಸ್ಟ್​ !
ಪಿಸ್ತೂಲ್​ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್​
Follow us on

ಪಿಸ್ತೂಲ್​ ಇಟ್ಟುಕೊಂಡಿದ್ದ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ. ಇವರ ಹೆಸರು ಕರೀಷ್ಮಾ ಸಿಂಗ್ ಯಾದವ್​ ಎಂದಾಗಿದ್ದು ದೇಶಿ ನಿರ್ಮಿತ ಪಿಸ್ತೂಲ್​ ಹೊಂದಿದ್ದರು.  ಫಿರೋಜಾಬಾದ್ ಶಾಲೆಯೊಂದರ ಶಿಕ್ಷಕಿ. ಮಂಗಳವಾರ ಯಾವುದೋ ಕೆಲಸದ ನಿಮಿತ್ತ ಮೈನ್​ಪುರಿಗೆ ಆಗಮಿಸಿದ್ದರು. ಇವರು ಕೊತ್ವಾಲಿ ಏರಿಯಾದಲ್ಲಿ ಪಿಸ್ತೂಲ್​  ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಯಿತು. ಆ ಮಹಿಳೆಯನ್ನು ಹಿಂಬಾಲಿಸಿ, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇನ್ನು ಶಿಕ್ಷಕಿ ತಾನು ಧರಿಸಿದ ನೀಲಿ ಬಣ್ಣದ ಜೀನ್ಸ್​ ಪ್ಯಾಂಟ್​ನ ಜೇಬಲ್ಲಿ ಪಿಸ್ತೂಲ್​ ಇಟ್ಟುಕೊಂಡು ಓಡಾಡುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗಿವೆ. ಪೊಲೀಸರು ತಮ್ಮ ಬಳಿ ಬರುತ್ತಿದ್ದಂತೆ ಸುಮ್ಮನೆ ನಿಂತಿದ್ದಾರೆ. ಬಳಿಕ ಮಹಿಳಾ ಕಾನ್​​ಸ್ಟೆಬಲ್​ ಶಿಕ್ಷಕಿಯ ಜೇಬಿಗೆ ಕೈ ಹಾಕಿ, ಅದನ್ನು ತೆಗೆದಿದ್ದಾರೆ.  ಕೂಡಲೇ ಕರಿಷ್ಮಾರನ್ನು ಪೊಲೀಸರು ಬಂಧಿಸಿದ್ದಾರೆ.  ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ನಾವು ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ.  ಈ ಪಿಸ್ತೂಲ್​ ಯಾಕೆ ಹೊಂದಿದ್ದರು? ಅದನ್ನು ಹಿಡಿದುಕೊಂಡು ಎಲ್ಲಿಗೆ ಹೊರಟಿದ್ದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎಂದು ಮೈನ್​ಪುರಿ ಎಸ್​ಪಿ ಅಜಯ್​ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಸರ್ಕಾರವೇ ಕೊಲೆ ಮಾಡಿದೆ: ಗುತ್ತಿಗೆದಾರರ ಸಂಘ ಆಕ್ರೋಶ, ಮುಷ್ಕರಕ್ಕೆ ನಿರ್ಧಾರ