
ಹೈದರಾಬಾದ್, ಸೆಪ್ಟೆಂಬರ್ 22: ಖಾಸಗಿ ಶಾಲೆಯ 29 ವರ್ಷದ ಶಿಕ್ಷಕಿ(Teacher) ಇಬ್ಬರು ಪುರುಷ ಸಹೋದ್ಯೋಗಿಗಳಿಂದ ಕಿರುಕುಳಕ್ಕೊಳಗಾಗಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಮೃತ ವಿಜ್ಞಾನ ಶಿಕ್ಷಕಿ ಅಸ್ಸಾಂ ಮೂಲದವರು. ಈ ಘಟನೆ ಸೆಪ್ಟೆಂಬರ್ 19 ರಂದು ನಡೆದಿದ್ದು, ಮಹಿಳೆಯ ಪತಿ ಆದಿಬಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ಶಾಲೆಯ ಇಬ್ಬರು ಶಿಕ್ಷಕರು ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದರು.
ಆಕೆಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದರು ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೆಲಸಕ್ಕೆಂದು ಅಸ್ಸಾಂಗೆ ಹೋಗಿದ್ದ ಮಹಿಳೆಯ ಪತಿಗೆ ಪೊಲೀಸರು ಪತ್ನಿಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.ಸೆಪ್ಟೆಂಬರ್ 20 ರಂದು ಸಲ್ಲಿಸಿದ ದೂರಿನಲ್ಲಿ, ಎಂಟು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ತನ್ನ ಮತ್ತು ತನ್ನ ಪತ್ನಿ ಅಸ್ಸಾಂನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡಿರುವುದಾಗಿ ಆಕೆಯ ಪತಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಳೆದ ಆರು ತಿಂಗಳಿನಿಂದ ಇಬ್ಬರೂ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಹೇಳುತ್ತಲೇ ಇದ್ದಳು, ಆದರೆ ತಾನು ಅಷ್ಟಾಗಿ ಗಮನಕೊಟ್ಟಿರಲಿಲ್ಲ. ಆದರೆ, ಸೆಪ್ಟೆಂಬರ್ 15 ರಂದು ಅಸ್ಸಾಂಗೆ ತೆರಳಿದ ನಂತರ ಕಿರುಕುಳ ತೀವ್ರಗೊಂಡಿತ್ತು, ಅಂತಿಮವಾಗಿ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ
ದೂರಿನ ಮೇರೆಗೆ ಪೊಲೀಸರು ಇಬ್ಬರು ಶಿಕ್ಷಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದಕ್ಕೂ ಮೊದಲು, 17 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಉದ್ಯೋಗ ಮತ್ತು ವಿದೇಶ ಪ್ರವಾಸದ ಭರವಸೆ ನೀಡಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರು ಮೂಲದ 55 ವರ್ಷದ ಯೋಗ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ