ನವರಾತ್ರಿಗೆ ಶುಭ ಕೋರಿ, ಜನತೆಯಲ್ಲಿ ಹೊಸ ಶಕ್ತಿ, ಆತ್ಮವಿಶ್ವಾಸ ಹೆಚ್ಚಲಿ ಎಂದು ಹಾರೈಸಿದ ಪ್ರಧಾನಿ ಮೋದಿ
PM Modi Navratri Wishes: ಪ್ರಧಾನಿ ನರೇಂದ್ರ ಮೋದಿ(Narendra Modi) ರಾಷ್ಟ್ರದ ಜನತೆಗೆ ನವರಾತ್ರಿ(Navratri)ಯ ಶುಭಾಶಯ ತಿಳಿಸಿದ್ದಾರೆ. ನಾಗರಿಕರಲ್ಲಿ ಹೊಸ ಶಕ್ತಿ, ಆತ್ಮವಿಶ್ವಾಸ ಹೆಚ್ಚಲಿ ಎಂದು ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ನವರಾತ್ರಿಯ ಶುಭಾಶಯಗಳು, ಭಕ್ತಿ, ಧೈರ್ಯ, ಸಂಯಮ ಮತ್ತು ದೃಢಸಂಕಲ್ಪದಿಂದ ತುಂಬಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಹೊಸ ಶಕ್ತಿ ಮತ್ತು ಹೊಸ ನಂಬಿಕೆಯನ್ನು ತರಲಿ, ಜೈ ಮಾತಾ ದಿ ಎಂದು ಬರೆದಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ(Narendra Modi) ರಾಷ್ಟ್ರದ ಜನತೆಗೆ ನವರಾತ್ರಿ(Navratri)ಯ ಶುಭಾಶಯ ತಿಳಿಸಿದ್ದಾರೆ. ನಾಗರಿಕರಲ್ಲಿ ಹೊಸ ಶಕ್ತಿ, ಆತ್ಮವಿಶ್ವಾಸ ಹೆಚ್ಚಲಿ ಎಂದು ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ನವರಾತ್ರಿಯ ಶುಭಾಶಯಗಳು, ಭಕ್ತಿ, ಧೈರ್ಯ, ಸಂಯಮ ಮತ್ತು ದೃಢಸಂಕಲ್ಪದಿಂದ ತುಂಬಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಹೊಸ ಶಕ್ತಿ ಮತ್ತು ಹೊಸ ನಂಬಿಕೆಯನ್ನು ತರಲಿ, ಜೈ ಮಾತಾ ದಿ ಎಂದು ಬರೆದಿದ್ದಾರೆ.
ಜಿಎಸ್‌ಟಿ ಸುಧಾರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ನವರಾತ್ರಿಯ ಈ ಶುಭ ಸಂದರ್ಭ ಬಹಳ ವಿಶೇಷವಾಗಿದೆ. ಜಿಎಸ್‌ಟಿ ಉಳಿತಾಯ ಹಬ್ಬದ ಜೊತೆಗೆ, ಈ ಸಮಯದಲ್ಲಿ ಸ್ವದೇಶಿ ಮಂತ್ರವು ಹೊಸ ಶಕ್ತಿಯನ್ನು ಪಡೆಯುತ್ತದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸಲು ನಾವೆಲ್ಲರೂ ಒಂದಾಗೋಣ ಎಂದು ಬರೆದಿದ್ದಾರೆ.
ತಾಯಿ ಶೈಲಪುತ್ರಿಯ ವಿಶೇಷ ಪೂಜೆಯ ದಿನ. ತಾಯಿಯ ಪ್ರೀತಿ ಮತ್ತು ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನವು ಅದೃಷ್ಟ ಮತ್ತು ಆರೋಗ್ಯದಿಂದ ತುಂಬಿರಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: Navratri 2025: ನವರಾತ್ರಿಯ 9 ದಿನ ಈ ನವ ವರ್ಣದ ಬಟ್ಟೆಗಳನ್ನು ಧರಿಸಿದರೆ ಶುಭವಂತೆ
ಜಿಎಸ್ಟಿ ಉಳಿತಾಯ ಉತ್ಸವದ ಜೊತೆಗೆ, ಈ ಸಮಯದಲ್ಲಿ ಸ್ವದೇಶಿ ಮಂತ್ರವು ಹೊಸ ಶಕ್ತಿಯನ್ನು ಪಡೆಯಲಿದೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಧಿಸಲು ಸಾಮೂಹಿಕ ಪ್ರಯತ್ನಗಳಲ್ಲಿ ಎಲ್ಲರೂ ಕೈ ಜೋಡಿಸೋಣ.
ಪ್ರಧಾನಿ ಮೋದಿ ಪೋಸ್ಟ್
Navratri is about pure devotion. So many people have encapsulated this devotion through music. Sharing one such soulful rendition by Pandit Jasraj ji.
If you have sung a Bhajan or have a favourite one, please share it with me. I will be posting some of them in the coming days!…
— Narendra Modi (@narendramodi) September 22, 2025
ಪಂಡಿತ್ ಜಸ್ರಾಜ್ ಅವರ ಭಜನೆಯನ್ನು ಕೂಡ ಹಂಚಿಕೊಂಡಿದ್ದಾರೆ, ನಂತರ ಪ್ರಧಾನಿ ನವರಾತ್ರಿಗೆ ಸಂಬಂಧಿಸಿದ ಮತ್ತೊಂದು ಪೋಸ್ಟ್ ಅನ್ನು ಪೋಸ್ಟ್ ಮಾಡಿ ಸಾರ್ವಜನಿಕರಿಗೆ ಸಂದೇಶವನ್ನು ನೀಡಿದರು. ನವರಾತ್ರಿ ಭಕ್ತಿಯ ಹಬ್ಬ, ಅನೇಕ ಜನರು ಸಂಗೀತದ ಮೂಲಕ ಈ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಪಂಡಿತ್ ಜಸ್ರಾಜ್ ಸಂಯೋಜಿಸಿದ ಅಂತಹ ಒಂದು ಭಾವಪೂರ್ಣ ಭಜನೆಯನ್ನು ನಾನು ಹಂಚಿಕೊಳ್ಳುತ್ತಿದ್ದೇನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:18 am, Mon, 22 September 25




