AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ: ಸಹೋದ್ಯೋಗಿಗಳಿಂದ ಕಿರುಕುಳ, ಶಿಕ್ಷಕಿ ಆತ್ಮಹತ್ಯೆ

ಸಹೋದ್ಯೋಗಿಗಳ ಕಿರುಕುಳ ತಾಳಲಾರದೆ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಆಕೆಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದರು ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೆಲಸಕ್ಕೆಂದು ಅಸ್ಸಾಂಗೆ ಹೋಗಿದ್ದ ಮಹಿಳೆಯ ಪತಿಗೆ ಪೊಲೀಸರು ಪತ್ನಿಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.ಸೆಪ್ಟೆಂಬರ್ 20 ರಂದು ಸಲ್ಲಿಸಿದ ದೂರಿನಲ್ಲಿ, ಎಂಟು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ತನ್ನ ಮತ್ತು ತನ್ನ ಪತ್ನಿ ಅಸ್ಸಾಂನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡಿರುವುದಾಗಿ ಆಕೆಯ ಪತಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ತೆಲಂಗಾಣ: ಸಹೋದ್ಯೋಗಿಗಳಿಂದ ಕಿರುಕುಳ, ಶಿಕ್ಷಕಿ ಆತ್ಮಹತ್ಯೆ
ಕ್ರೈಂ
ನಯನಾ ರಾಜೀವ್
|

Updated on: Sep 22, 2025 | 10:24 AM

Share

ಹೈದರಾಬಾದ್, ಸೆಪ್ಟೆಂಬರ್ 22: ಖಾಸಗಿ ಶಾಲೆಯ 29 ವರ್ಷದ ಶಿಕ್ಷಕಿ(Teacher) ಇಬ್ಬರು ಪುರುಷ ಸಹೋದ್ಯೋಗಿಗಳಿಂದ ಕಿರುಕುಳಕ್ಕೊಳಗಾಗಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮೃತ ವಿಜ್ಞಾನ ಶಿಕ್ಷಕಿ ಅಸ್ಸಾಂ ಮೂಲದವರು. ಈ ಘಟನೆ ಸೆಪ್ಟೆಂಬರ್ 19 ರಂದು ನಡೆದಿದ್ದು, ಮಹಿಳೆಯ ಪತಿ ಆದಿಬಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ಶಾಲೆಯ ಇಬ್ಬರು ಶಿಕ್ಷಕರು ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದರು.

ಆಕೆಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದರು ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೆಲಸಕ್ಕೆಂದು ಅಸ್ಸಾಂಗೆ ಹೋಗಿದ್ದ ಮಹಿಳೆಯ ಪತಿಗೆ ಪೊಲೀಸರು ಪತ್ನಿಯ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.ಸೆಪ್ಟೆಂಬರ್ 20 ರಂದು ಸಲ್ಲಿಸಿದ ದೂರಿನಲ್ಲಿ, ಎಂಟು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ತನ್ನ ಮತ್ತು ತನ್ನ ಪತ್ನಿ ಅಸ್ಸಾಂನಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡಿರುವುದಾಗಿ ಆಕೆಯ ಪತಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕಳೆದ ಆರು ತಿಂಗಳಿನಿಂದ ಇಬ್ಬರೂ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಹೇಳುತ್ತಲೇ ಇದ್ದಳು, ಆದರೆ ತಾನು ಅಷ್ಟಾಗಿ ಗಮನಕೊಟ್ಟಿರಲಿಲ್ಲ. ಆದರೆ, ಸೆಪ್ಟೆಂಬರ್ 15 ರಂದು ಅಸ್ಸಾಂಗೆ ತೆರಳಿದ ನಂತರ ಕಿರುಕುಳ ತೀವ್ರಗೊಂಡಿತ್ತು, ಅಂತಿಮವಾಗಿ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕಂಠ ಪೂರ್ತಿ ಕುಡಿದು ಬಂದು ಶಾಲೆಯಲ್ಲಿ ಮಲಗಿದ ಮುಖ್ಯ ಶಿಕ್ಷಕ: ವಿಡಿಯೋ ನೋಡಿ

ದೂರಿನ ಮೇರೆಗೆ ಪೊಲೀಸರು ಇಬ್ಬರು ಶಿಕ್ಷಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದಕ್ಕೂ ಮೊದಲು, 17 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಉದ್ಯೋಗ ಮತ್ತು ವಿದೇಶ ಪ್ರವಾಸದ ಭರವಸೆ ನೀಡಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರು ಮೂಲದ 55 ವರ್ಷದ ಯೋಗ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್