ಬಲರಾಮ್ಪುರ: ಛತ್ತೀಸಗಡದ ಬಲರಾಮ್ಪುರ ಜಿಲ್ಲೆಯ ಶಿಕ್ಷಕರು ಬೆಟ್ಟಗುಡ್ಡಗಳ ಹಾದಿಯಲ್ಲಿ ಪ್ರತಿದಿನ 8 ಕಿಮೀ ನಡೆದು ಮಕ್ಕಳಿಗಾಗಿ ಬಿಸಿಯೂಟದ ದಿನಸಿ ಹೊತ್ತು ತರುತ್ತಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಬಾರದು ಎನ್ನುವುದು ಅವರ ಕಾಳಜಿ. ಗುಡ್ಡದ ಮೇಲಿರುವ ಶಾಲೆಗೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಶಿಕ್ಷಕರು ಹಲವು ಬಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಶಿಕ್ಷಕ ಸುಶೀಲ್ ಯಾದವ್, ‘ಈ ರಸ್ತೆಯಲ್ಲಿ ಸಾಗಿಬರುವುದು ತುಂಬಾ ಕಷ್ಟ. ಮಳೆ ಬಿದ್ದರಂತೂ ಈ ರಸ್ತೆಯಲ್ಲಿ ನಡೆಯಲೂ ಆಗುವುದಿಲ್ಲ. ಮೇಲಾಗಿ ಕಾಡುಪ್ರಾಣಿಗಳ ಹಾವಳಿಯೂ ಇದೆ. ಆದರೂ ಮಕ್ಕಳು ಪ್ರತಿದಿನ ಮಧ್ಯಾಹ್ನದ ಊಟ ತಪ್ಪಿಸಿಕೊಳ್ಳಬಾರದು ಎಂದು ನಾವಿಷ್ಟು ಕಷ್ಟ ಪಡುತ್ತಿದ್ದೇವೆ’ ಎಂದು ಹೇಳಿದರು.
‘ಖಂಡಿಯಾ ದಾಮರ್ ಗ್ರಾಮ ಪಂಚಾಯಿತಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ನಡೆದೇ ಬರುವ ಶಿಕ್ಷಕರ ಬದ್ಧತೆಗೆ ಕೈಮುಗಿಯಬೇಕು ಎನ್ನಿಸುತ್ತದೆ’ ಎಂದು ಸ್ಥಳೀಯರಾದ ಲಖನ್ ಹೇಳಿದರು. ‘ಈ ವಿಷಯದ ಬಗ್ಗೆ ನನಗೆ ತಿಳಿದಿದೆ. ನಮ್ಮ ಶಿಕ್ಷಕರಾದ ಸುಶೀಲ್ ಯಾದವ್ ಮತ್ತು ಪಂಕಜ್ ಸಾರ್ವಜನಿಕ ಪಡಿತರ ಅಂಗಡಿಯಿಂದ ದಿನಸಿ ಹೊತ್ತು ಪ್ರತಿದಿನ 8 ಕಿಮೀ ಬೆಟ್ಟಗುಡ್ಡದ ಹಾದಿಯಲ್ಲಿ ನಡೆದು ಹೋಗುತ್ತಿದ್ದಾರೆ. ಅವರ ಬದ್ಧತೆ ಮತ್ತು ಕರ್ತವ್ಯನಿಷ್ಠೆಯ ಬಗ್ಗೆ ನಮಗೆ ಗೌರವವಿದೆ’ ಎಂದು ಬಲರಾಮ್ಪುರ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಎಕ್ಕಾ ಹೇಳಿದ್ದಾರೆ.
Chhattisgarh: Teachers in a remote village of Balrampur dist carry Mid-Day Meal ration on their shoulders for 8 km crossing mountain, streams
“We want to ensure that village school students get mid-day meals. We request govt to build a road to the village,” says school teacher pic.twitter.com/cyavFj6XT4
— ANI (@ANI) October 24, 2021
ಇದನ್ನೂ ಓದಿ: 1ರಿಂದ 5ನೇ ತರಗತಿ ಆರಂಭ: ಮಕ್ಕಳಿರುವ ಮನೆಗಳಲ್ಲಿ ಧಾವಂತ, ಶಾಲೆಗೆ ಹೊರಡಲು ಸಿದ್ಧತೆ
ಇದನ್ನೂ ಓದಿ: ಶಾಲೆ ಆರಂಭಕ್ಕೂ ಮುನ್ನ ಹಾಗೂ ನಂತರ ಮಕ್ಕಳನ್ನು ಹೇಗೆ ಸಜ್ಜುಗೊಳಿಸಬೇಕು? ತಜ್ಞರ ಸಲಹೆ ಇಲ್ಲಿದೆ