ಶಾಲೆ ಆರಂಭಕ್ಕೂ ಮುನ್ನ ಹಾಗೂ ನಂತರ ಮಕ್ಕಳನ್ನು ಹೇಗೆ ಸಜ್ಜುಗೊಳಿಸಬೇಕು? ತಜ್ಞರ ಸಲಹೆ ಇಲ್ಲಿದೆ

6 ರಿಂದ 10 ನೇ ವಯಸ್ಸಿನ ಮಕ್ಕಳಲ್ಲೇ ಅತಿಹೆಚ್ವು ಮಾನಸಿಕ ಸಮಸ್ಯೆ ಕಾಣಿಸಿಕೊಳ್ತಿದೆ. ಈ ಸಮಯದಲ್ಲಿ ಶಿಕ್ಷಣ ಇಲಾಖೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕು. ಕೆಲವೊಂದಿಷ್ಟು ನಿರ್ದಿಷ್ಟ ಕ್ರಮ ಕೈಗೋಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಶಾಲೆ ಆರಂಭಕ್ಕೂ ಮುನ್ನ ಹಾಗೂ ನಂತರ ಮಕ್ಕಳನ್ನು ಹೇಗೆ ಸಜ್ಜುಗೊಳಿಸಬೇಕು? ತಜ್ಞರ ಸಲಹೆ ಇಲ್ಲಿದೆ
ಸಾಂಕೇತಿಕ ಚಿತ್ರ

ಬೆಂಗಳೂರು: ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿ ಆರಂಭ ಆಗಲಿರುವ ಹಿನ್ನೆಲೆ ಮಕ್ಕಳನ್ನು ಶಾಲೆಗೆ ಕರೆತರುವ ಮುನ್ನ ಮಾನಸಿಕವಾಗಿ ಸಜ್ಜುಗೊಳಿಸಬೇಕು. ಇಲ್ಲದಿದ್ದರೆ ದೊಡ್ಡ ಅನಾಹುತಗಳೇ ಸಂಭವಿಸಬಹುದು ಎಂದು ಶಿಕ್ಷಣ ಇಲಾಖೆಗೆ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಹೋಗಿಲ್ಲ. ಮನೆಯಲ್ಲೇ ಇದ್ದು ಅವರ ಮಾನಸಿಕ ಸ್ಥಿತಿ ಏರುಪೇರಾಗಿದೆ. ಇತ್ತೀಚೆಗೆ ಮಕ್ಕಳ ಮಾನಸಿಕ ಸಮಸ್ಯೆ ಪ್ರಕರಣ ಹೆಚ್ಚಾಗ್ತಿದೆ. ಈ ಸಮಯದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕು. ಅವರ ಬಗ್ಗೆ ಕೆಲವೊಂದಿಷ್ಟು ಕ್ರಮ ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮಾನಸಿಕ ಸಮಸ್ಯೆ ಪ್ರಕರಣ ಹೆಚ್ಚಾಗುತ್ತಿದೆ. ಆತ್ಮಹತ್ಯೆಗೆ ಯತ್ನಿಸುವುದು, ಕೀಳರಿಮೆ ಹೊಂದಿರುವುದು, ಆಕ್ರಮಣಕಾರಿ ಮನೋಭಾವ ಹೊಂದಿರುವುದು, ಸ್ವತಹ ಗಾಯಮಾಡಿಕೊಳ್ಳುವುದು ಹೀಗೆ ಮಕ್ಕಳಲ್ಲಿ ಅನೇಕ ಮಾನಸಿಕ ಸಮಸ್ಯೆ ಕಾಡುತ್ತಿದೆ. ಮಕ್ಕಳು ಮನೆಯಲ್ಲೇ ಇದ್ದು ಊಟ ನಿದ್ದೆ ವಿಪರೀತಗೊಂಡು ಕೆಲ ಮಕ್ಕಳ ತೂಕ ಹೆಚ್ಚಿದೆ. ಹೀಗಾಗಿ ತಮ್ಮ ದೇಹದಲ್ಲಾದ ಬದಲಾವಣೆ ಬಗ್ಗೆಯೂ ಮಕ್ಕಳಲ್ಲಿ ಕೀಳರಿಮೆ ಬಂದಿದೆ. 6 ರಿಂದ 10 ನೇ ವಯಸ್ಸಿನ ಮಕ್ಕಳಲ್ಲೇ ಅತಿಹೆಚ್ವು ಮಾನಸಿಕ ಸಮಸ್ಯೆ ಕಾಣಿಸಿಕೊಳ್ತಿದೆ. ಈ ಸಮಯದಲ್ಲಿ ಶಿಕ್ಷಣ ಇಲಾಖೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕು. ಕೆಲವೊಂದಿಷ್ಟು ನಿರ್ದಿಷ್ಟ ಕ್ರಮ ಕೈಗೋಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಶಾಲೆ ಆರಂಭಕ್ಕೂ ಮುನ್ನ ಹಾಗೂ ಶಾಲೆ ಆರಂಭದ ನಂತರ ವಹಿಸಬೇಕಾದ ಕ್ರಮಗಳೇನು?
ಶಾಲೆ ಆರಂಭಕ್ಕೂ ಮುನ್ನ ಮಕ್ಕಳನ್ನ ಮಾನಸಿಕವಾಗಿ ಸಿದ್ಧಗೊಳಿಸಬೇಕು
ಮಕ್ಕಳಿಗೆ ಆಪ್ತ ಸಮಾಲೋಚನೆ ಅಗತ್ಯ
ಮಕ್ಕಳು ಶಾಲೆಗೆ ಬಂದ ತಕ್ಷಣ ಪಾಠ ಆರಂಭಿಸಬೇಡಿ
ಮೊದಲ ಕೆಲವು ದಿನ ಸಿಲಬಸ್ ಬಗ್ಗೆ ಹೆಚ್ಚು ಒತ್ತುಕೊಡಬೇಡಿ
ಮಕ್ಕಳಿಗೆ ಆಟೋಟ, ಅವರ ಸ್ನೇಹಿತರ ಜೊತೆ ಬೆರೆಯಲು ಬಿಡಿ
ಮಕ್ಕಳ ಬಿಹೇವಿಯರ್ ಬಗ್ಗೆ ಮಾನಿಟರ್ ಮಾಡಬೇಕು
ಶಿಕ್ಷಕರು ಮಕ್ಕಳೊಂದಿಗೆ ಅತ್ಯಂತ ಆಪ್ತವಾಗಿ ನಡೆದಕೊಳ್ಳಬೇಕು
ಹೀಗೆ ಶಾಲೆ ಆರಂಭಕ್ಕೂ ಮುನ್ನ ಮತ್ತು ನಂತರ ಮಕ್ಕಳನ್ನ ಮಾನಸಿಕವಾಗಿ ಸಿದ್ಧಗೊಳಿಸಿ

ಹೀಗೆ ಶಿಕ್ಷಣ ಇಲಾಖೆಗೆ ಹಲವು ಶಿಕ್ಷಣ ತಜ್ಞರು ಹಾಗೂ ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ. ಏಕಾಏಕಿ ಪಾಠ ಆರಂಭಿಸಿದರೆ ಅಪಾಯ ಸಂಭವ ಇದೆ ಎಂದು ಹೇಳಲಾಗಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳು ಇದುವರೆಗೆ ಶಾಲೆ ಮುಖ ನೋಡಿಲ್ಲ. ಒಂದೂವರೆ ವರ್ಷದಿಂದ ಕೊವಿಡ್ ನೋಡಿ ನೋಡಿ ಮಕ್ಕಳಲ್ಲಿ ಭಯ ಇದೆ. ಕೊವಿಡ್ ಬಂದಾಗಿನಿಂದ ಶಾಲೆ ಮುಚ್ಚಿರೋದ್ರಿಂದ ಕೆಲ ಮಕ್ಕಳು ಶಾಲೆಗೆ ಹೋದ್ರೆ ಕೊವಿಡ್ ಬರುತ್ತೆ ಅನ್ನೋ ಮಾನಸಿಕ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಕೆಲ ಎಚ್ಚರಿಕೆ ವಹಿಸಿ ಶಾಲೆ ಆರಂಭಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: PM Modi Speech: ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆಗೆ 100 ಕೋಟಿ ಲಸಿಕೆ ನೀಡಿಕೆ ಉತ್ತರ ನೀಡಿದೆ; ಪ್ರಧಾನಿ ಮೋದಿ

ಇದನ್ನೂ ಓದಿ: Coronavirus cases in India: ಭಾರತದಲ್ಲಿ 15,786 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

Click on your DTH Provider to Add TV9 Kannada