ಕಾಂಗ್ರೆಸ್​ನವರು ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರೆ ಮಾತ್ರ ಸಮಾಧಾನ. ಇಲ್ಲದಿದ್ದರೆ ಎಲ್ಲವನ್ನೂ ಟೀಕೆ ಮಾಡುತ್ತಾರೆ. ಶತಕೋಟಿ ಡೋಸ್ ಲಸಿಕೆ ವಿತರಣೆಗೂ ಟೀಕೆ ಮಾಡ್ತಾರೆ. ಇವರು ಟೀಕೆ ಮಾಡದೆ ಯಾವುದನ್ನೂ ಬಿಡಲ್ಲ ಎಂದು ಸಿಎಂ ಹೇಳಿದ್ದಾರೆ

ಕಾಂಗ್ರೆಸ್​ನವರು ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಹಾವೇರಿ: ನರೇಂದ್ರ ಮೋದಿ ಸರ್ಕಾರದ ಯೋಜನೆ ಎಲ್ಲ ಮನೆಗಳಿಗೆ ತಲುಪಿದೆ. ಯೋಜನೆ ಪಡೆಯದ ಒಂದು ಮನೆ ತೋರಿಸಿ ನೋಡೋಣ ಎಂದು ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿಯಲ್ಲಿ ಯಡಿಯೂರಪ್ಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ. ಶತಕೋಟಿ ಡೋಸ್ ಲಸಿಕೆ ನೀಡಿಕೆಗೆ ವಿಶ್ವವೇ ಹೊಗಳ್ತಿದೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಾರೆ. ಹೀಗೆ ಟೀಕೆ ಮಾಡಿದರೆ ಜನರು ಒಪ್ಪುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಕಾಂಗ್ರೆಸ್‌ನವರು ಹಣಬಲ, ಜಾತಿಬಲದಿಂದ ಚುನಾವಣೆ ಗೆಲ್ಲುವುದು ಆರಂಭ ಮಾಡಿದರು. ನರೇಂದ್ರ ಮೋದಿ ಬಂದ ಬಳಿಕ ಕಾಂಗ್ರೆಸ್ ಧೂಳೀಪಟವಾಗಿದೆ. ಕಾಂಗ್ರೆಸ್‌ನವರು ಈಗ ನಾಯಕನನ್ನು ಹುಡುಕಾಡುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾದ 1 ಗಂಟೆಯೊಳಗೆ ಕಾಂಗ್ರೆಸ್​ನವರು ಜಾಗ ಖಾಲಿ ಮಾಡ್ತಾರೆ ಎಂದು ಚುನಾವಣಾ ಪ್ರಚಾರದಲ್ಲಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನವರು ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಗೆದ್ರೆ ಜನಬೆಂಬಲ, ನಾವು ಗೆದ್ರೆ ಹಣಬಲವಾ? ನಮಗೆ ಜನಬೆಂಬಲ ಇಲ್ವಾ ಎಂದು ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆ ಕೇಳಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ. ಹಾನಗಲ್ ಕ್ಷೇತ್ರದ ಮತದಾರರೇ ಉತ್ತರ ನೀಡುತ್ತಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸ್ತಾರೆ ಎಂದು ಬಮ್ಮನಹಳ್ಳಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಎಲ್ಲರೂ ಕಿಟ್ ಕೊಟ್ಟಿದ್ದಾರೆ. ಸಣ್ಣಪುಟ್ಟ ಸಂಘ ಸಂಸ್ಥೆಗಳೂ ಕಿಟ್‌ಗಳನ್ನು ಕೊಟ್ಟಿವೆ. ಕಾಂಗ್ರೆಸ್‌ನವರು ಒಬ್ಬರೇ ಕಿಟ್‌ಗಳನ್ನು ವಿತರಣೆ ಮಾಡಿಲ್ಲ. ಅದನ್ನೇ ಈಗ ಕಾಂಗ್ರೆಸ್​ನವರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಲೇವಡಿ ಮಾಡಿದ್ದಾರೆ. ಇಂತಹವರು ಮುಂದಿನ ದಿನಗಳಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರೆ ಮಾತ್ರ ಸಮಾಧಾನ. ಇಲ್ಲದಿದ್ದರೆ ಎಲ್ಲವನ್ನೂ ಟೀಕೆ ಮಾಡುತ್ತಾರೆ. ಶತಕೋಟಿ ಡೋಸ್ ಲಸಿಕೆ ವಿತರಣೆಗೂ ಟೀಕೆ ಮಾಡ್ತಾರೆ. ಇವರು ಟೀಕೆ ಮಾಡದೆ ಯಾವುದನ್ನೂ ಬಿಡಲ್ಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಇದನ್ನೂ ಓದಿ: ಯಾವುದಾದರೂ ವ್ಯಾಪಕ ರೋಗಕ್ಕೆ ಲಸಿಕಾಕರಣವೇ ಮದ್ದು ಅನ್ನೋದು 100 ವರ್ಷಗಳ ಹಿಂದೆ ಸಾಬೀತಾಗಿದೆ -ಸಿಎಂ ಬಸವರಾಜ ಬೊಮ್ಮಾಯಿ

Click on your DTH Provider to Add TV9 Kannada