ಗ್ರೇಟರ್ ನೋಯ್ಡಾ: ಕೈಕೊಟ್ಟ ಸೊಸೈಟಿ ಲಿಫ್ಟ್, 7 ಮಕ್ಕಳು ಸೇರಿ 10 ಮಂದಿ 30 ನಿಮಿಷಗಳ ಕಾಲ ಸಿಲುಕಿದ್ರು
ಗ್ರೇಟರ್ ನೋಯ್ಡಾದ ಬಹುಮಹಡಿ ಹೌಸಿಂಗ್ ಸೊಸೈಟಿಯಲ್ಲಿನ ಲಿಫ್ಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿ 30 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. 7 ಮಕ್ಕಳು ಸೇರಿದಂತೆ 10 ಮಂದಿ ಲಿಫ್ಟ್ ಒಳಗೆ ಸಿಲುಕಿದ್ದರು. ಗ್ರೇಟರ್ ನೋಯ್ಡಾದ ಲಾ ರೆಸಿಡೆನ್ಸಿ ಸೊಸೈಟಿಯಲ್ಲಿ, ಮೇಲೇರುವಾಗ ಲಿಫ್ಟ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು ಮತ್ತು ಲೈಟ್‌ಗಳು ಆಫ್ ಆಗಿದ್ದವು, ಸುಮಾರು ಅರ್ಧ ಗಂಟೆಗಳ ಕಾಲ 10 ಜನರು ಸಿಕ್ಕಿಬಿದ್ದರು.

ಒಳಗಿನಿಂದ ಗಂಟೆ ಬಾರಿಸಿದರೂ ಯಾವುದೇ ನೆರವು ಬರಲಿಲ್ಲ. ಸುಮಾರು 30 ನಿಮಿಷಗಳ ನಂತರ, ಸಹಾಯಕ್ಕಾಗಿ ಜೋರಾಗಿ ಕೂಗಿದ ಬಳಿಕ ಕೆಲವು ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದರು. ನಿರ್ವಹಣಾ ತಂಡವನ್ನು ಕರೆಸಿದರು ಮತ್ತು ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ವಸತಿ ಸಮುಚ್ಚಯದ ತಾಂತ್ರಿಕ ಮೇಲ್ವಿಚಾರಕರು ಜನರೇಟರ್ ಬ್ಯಾಕಪ್ ಕೊರತೆಯಿಂದಾಗಿ ಹೀಗಾಗಿದೆ ಎಂದು ಹೇಳಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ, ನೋಯ್ಡಾದ ವಸತಿ ಸಮುಚ್ಚಯದಲ್ಲಿ ಲಿಫ್ಟ್‌ನ ಕೇಬಲ್ ತುಂಡಾಗಿದ್ದರಿಂದ 73 ವರ್ಷದ ಮಹಿಳೆ ಗುರುವಾರ ಹೃದಯ ಸ್ತಂಭನದಿಂದ ಸಾವನ್ನಪ್ಪಿದರು.
ಮತ್ತಷ್ಟು ಓದಿ: Viral Video: ಲಿಫ್ಟ್ ಕುಸಿದು ರೋಗಿ ತಲೆಕೆಳಗಾಗಿ ಬಿದ್ದ ದೃಶ್ಯ ವೈರಲ್
ಹೌಸಿಂಗ್ ಸೊಸೈಟಿಗೆ ಮಾಸಿಕ ನಿರ್ವಹಣಾ ವೆಚ್ಚಕ್ಕಾಗಿ ಬಾಡಿಗೆದಾರರು, ನಿವಾಸಿಗಳು ಮತ್ತು ಅಪಾರ್ಟ್ಮೆಂಟ್ ಮಾಲೀಕರ ಮೇಲೆ ಹೊರೆ ಹೇರಿದರು, ಸಮರ್ಪಕ ನಿರ್ವಹಣೆಯಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ