ತೆಲಂಗಾಣ: ಬೋರ್​ವೆಲ್​ನಿಂದ ಬಂದ ಗುಲಾಬಿ ನೀರು ನೋಡಿ ಅಚ್ಚರಿಪಟ್ಟ ಜನ

ಬೋರ್​ವೆಲ್​ನಿಂದ ಬರುತ್ತಿರುವ ಗುಲಾಬಿ ಬಣ್ಣದ ನೀರು ನೋಡಿ ತೆಲಂಗಾಣದ ಚೆನ್ನೂರು ಪಟ್ಟಣದ ಜನತೆ ಬೆಚ್ಚಿಬಿದ್ದಿದೆ. ನೋಡಲು ಜ್ಯೂಸ್​ನಂತಿದ್ದರೂ, ಇನ್ಮುಂದೆ ಏನು ಕುಡಿಯುವುದಪ್ಪಾ ಎನ್ನುವ ಚಿಂತೆಯಲ್ಲಿ ಕುಟುಂಬ ಸದಸ್ಯರಿದ್ದಾರೆ. ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಬೋರ್​ವೆಲ್​ನಿಂದ ಗುಲಾಬಿ ನೀರು ಬರುತ್ತಿರುವುದನ್ನು ಕಂಡು ಗಾಬರಿಗೊಂಡು ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದ್ದಾರೆ. ಗುಲಾಬಿ ನೀರು ನೋಡಲು ಸ್ಥಳೀಯರು ಕಟ್ಟಾ ಶ್ರೀನಿವಾಸ್ ಅವರ ಮನೆಗೆ ಸರತಿ ಸಾಲಿನಲ್ಲಿ ನಿಂತಿದ್ದರು.

ತೆಲಂಗಾಣ: ಬೋರ್​ವೆಲ್​ನಿಂದ ಬಂದ ಗುಲಾಬಿ ನೀರು ನೋಡಿ ಅಚ್ಚರಿಪಟ್ಟ ಜನ
ಗುಲಾಬಿ ನೀರು
Follow us
ನಯನಾ ರಾಜೀವ್
|

Updated on: Dec 12, 2023 | 3:41 PM

ತೆಲಂಗಾಣದ ಚೆನ್ನೂರು ಪಟ್ಟಣದ ಕೊತ್ತಗುಡ್ಡೆ ಕಾಲೋನಿಯಲ್ಲಿನ ಮನೆಯೊಂದರಲ್ಲಿ ಬೋರ್​ವೆಲ್​ನಿಂದ ಗುಲಾಬಿ ಬಣ್ಣದ ನೀರು ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಶ್ರೀನಿವಾಸ್ ಎಂಬುವವರು ಆರ್​ಎಂಪಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ನೀರು ಹಿಡಿಯಲು ಹೋದಾಗ ಗುಲಾಬಿ ಬಣ್ಣದ ನೀರು ಬಂದಿದ್ದನ್ನು ಕಂಡು ಅಚ್ಚರಿಯಾಗಿತ್ತು. ತಕ್ಷಣವೇ ನೀರನ್ನು ಬಕೆಟ್​ನಲ್ಲಿ ತುಂಬಿಕೊಂಡರು. ಎಷ್ಟು ಬಾರಿ ನೀರು ಬಿಟ್ಟರೂ ತಿಳಿಯಾದ ನೀರು ಬರಲೇಇಲ್ಲ.

ನೀರಿನ ಬಣ್ಣ ಬಹಳ ಹೊತ್ತಾದರೂ ಬದಲಾಗದ ಕಾರಣ ಅಕ್ಕಪಕ್ಕದ ಮನೆಯಲ್ಲಿ ನೀರನ್ನು ಪರೀಕ್ಷಿಸಿದಾಗ ಸಾಮಾನ್ಯವಾಗಿತ್ತು.ಗುಲಾಬಿ ನೀರು ನೋಡಲು ಸ್ಥಳೀಯರು ಕಟ್ಟಾ ಶ್ರೀನಿವಾಸ್ ಅವರ ಮನೆಗೆ ಸರತಿ ಸಾಲಿನಲ್ಲಿ ನಿಂತಿದ್ದರು.

ನೀರು ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣವೇನು, ನೀರು ವಿಷಪೂರಿತವಾಗಿದೆಯೇ ಅಥವಾ ನೀರಿನಲ್ಲಿ ಏನಾದರೂ ಮಿಶ್ರಣಗೊಂಡಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಶ್ರೀನಿವಾಸ್ ಅವರ ಬೋರ್‌ನಿಂದ ಗುಲಾಬಿ ಬಣ್ಣದ ನೀರು ಬರುತ್ತಿದ್ದಂತೆ ಮನೆ ಪಕ್ಕದ ಕಾಲೋನಿ ನಿವಾಸಿಗಳು ತಮ್ಮ ಬೋರ್‌ನಲ್ಲಿ ಅದೇ ನೀರು ಬರುತ್ತಿದೆಯೇ ಎಂದು ಪರೀಕ್ಷಿಸುತ್ತಿರುವುದು ಕಂಡು ಬಂತು. ಆದರೆ ಆ ಒಂದು ಮನೆಯ ಬೋರ್‌ನಿಂದ ಗುಲಾಬಿ ಬಣ್ಣದ ನೀರು ಬರುತ್ತಿರುವುದರಿಂದ ನೀರು ವಿಷಪೂರಿತವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕೂಡಲೇ ಅಧಿಕಾರಿಗಳು ಈ ನೀರನ್ನು ಪರೀಕ್ಷಿಸಿ ಕಾರಣಗಳನ್ನು ಪತ್ತೆ ಹಚ್ಚಬೇಕು ಎಂಬುದು ಚೆನ್ನೂರು ಪಟ್ಟಣದ ನಿವಾಸಿಗಳ ಆಗ್ರಹವಾಗಿದೆ. ಆದರೆ, ಈ ಹಿಂದೆ ಜಗತ್ತಿನಾದ್ಯಂತ ಮೂರು ಕಡೆ ಇಂತಹ ಘಟನೆಗಳು ನಡೆದಿವೆ. ಗುಜರಾತಿನ ಬನಾಸ್ ಕಾಂತ ಜಿಲ್ಲೆಯ ಸುಗಾಮ್ ಗ್ರಾಮದ ಬಳಿಯ ಕೊಳದ ನೀರಿನ ಬಣ್ಣ ಇದ್ದಕ್ಕಿದ್ದಂತೆ ಕಪ್ಪಾಗಿತ್ತು.

ಸ್ಥಳೀಯರು ಅದನ್ನು ದೇವರ ಲೀಲೆಯಂತೆ ಸ್ವೀಕರಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ತಜ್ಞರು ಇದನ್ನು ರಾಸಾಯನಿಕ ಎಂದು ಪರಿಗಣಿಸಿ ನೀರು ಮುಟ್ಟದಂತೆ ಎಚ್ಚರಿಕೆ ನೀಡಿದ್ದರು. ಮಹಾರಾಷ್ಟ್ರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಬುಲ್ಡಾನಾ ಜಿಲ್ಲೆಯ ಲೋನಾರ್ ಕೊಳದಲ್ಲಿ ನೀರು ಗುಲಾಬಿ ಬಣ್ಣಕ್ಕೆ ತಿರುಗಿತ್ತು.

ಮತ್ತಷ್ಟು ಓದಿ: ಅನೇಕ ಕಡೆ ಸಮುದ್ರ ಕೆಂಪು ಬಣ್ಣಕ್ಕೆ ತಿರುಗುತ್ತಿದೆ! ಭಯದಲ್ಲಿ ಸ್ಥಳೀಯರು, ಪ್ರವಾಸಿಗರು – ದಿಗ್ಭ್ರಮೆಗೊಂಡ ಪ್ರಾದೇಶಿಕ ಅಧಿಕಾರಿಗಳು, ಎಲ್ಲೆಲ್ಲಿ?

ನಾಗ್ಪುರದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಕೊಳದ ಬಗ್ಗೆ ತನಿಖೆ ನಡೆಸಿ, ಇದು ಒಂದು ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗಿದೆ ಎನ್ನುವ ನಿರ್ಧಾರಕ್ಕೆ ಬಂದರು.

ಅಮೆರಿಕದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ. ಅಮೆರಿಕದ ಹವಾಯಿಯ ಕೊಳದಲ್ಲಿ ನೀರು ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿತು. ‘ಫಿಶ್ ಆ್ಯಂಡ್ ವೈಲ್ಡ್ ಲೈಫ್ ಸರ್ವಿಸ್’, ಕೆರೆಯಲ್ಲಿನ ಹೆಚ್ಚಿನ ಲವಣಾಂಶದ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾದಿಂದ ನೀರು ಗುಲಾಬಿ ಬಣ್ಣಕ್ಕೆ ತಿರುಗಿರಬಹುದು ಎಂದು ಭಾವಿಸಿದೆ. ಜೂನ್ ತಿಂಗಳಿನಿಂದ ಬರಗಾಲದಿಂದ ಕೆರೆಯಲ್ಲಿ ನೀರು ಆವಿಯಾಗುತ್ತಿರುವುದರಿಂದ ಲವಣಾಂಶ ಹೆಚ್ಚಿದೆ ಎಂದು ಹೇಳಿದ್ದರು.

ನೀರು ವಿಷಪೂರಿತವಾಗಿಲ್ಲ, ಬಣ್ಣ ಬದಲಾವಣೆಗೆ ಸ್ಪಷ್ಟನೆ ನೀಡಲು ಮಾದರಿಗಳನ್ನು ಸಂಗ್ರಹಿಸಿ ಹವಾಯಿ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಇದೇ ವೇಳೆ ಕೆರೆಯಲ್ಲಿನ ನೀರು ಗುಲಾಬಿ ಬಣ್ಣಕ್ಕೆ ತಿರುಗಿದಾಗ ಅಚ್ಚರಿಗೊಂಡ ವ್ಯಕ್ತಿಯೊಬ್ಬರು ಡ್ರೋನ್ ಸಹಾಯದಿಂದ ಕೆರೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಈ ಘಟನೆ ಅಂದು ಸಂಚಲನ ಮೂಡಿಸಿದೆ.

ಕೃಷಿ ಉದ್ದೇಶಕ್ಕಾಗಿ ಬೋರ್ ವೆಲ್ ಕೊರೆಯಲಾಗುತ್ತದೆ. ಅಲ್ಲದೆ, ಮನೆಯ ಅಗತ್ಯಗಳಿಗಾಗಿಯೂ ಮನೆಗಳಲ್ಲಿ ಕೊಳವೆಬಾವಿ ವ್ಯವಸ್ಥೆ ಮಾಡಲಾಗುತ್ತಿದೆ. ಕೊಳವೆಬಾವಿಗಳ ನೀರು ಶುದ್ಧವಾಗಿರುತ್ತದೆ ಎಂಬುದು ನಂಬಿಕೆ. ನೀರು ಬಣ್ಣರಹಿತವಾಗಿದ್ದರೂ, ಅದರ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ಶುದ್ಧ ನೀರು ನೀಲಿ ಬಣ್ಣವನ್ನು ಹೊಂದಿರುತ್ತದೆ.

ಇದೇ ವೇಳೆ ಕೊಳವೆ ಬಾವಿಯಿಂದ ಗುಲಾಬಿ ನೀರು ಹೊರ ಬರುತ್ತಿದೆ. ಅಲ್ಲಿಯವರೆಗೂ ಶುದ್ಧ  ನೀರು ಒದಗಿಸುತ್ತಿದ್ದ ಕೊಳವೆಬಾವಿಯಿಂದ ಏಕಾಏಕಿ ಗುಲಾಬಿ ಬಣ್ಣದ ನೀರು ಬಂದಿದ್ದರಿಂದ ಸ್ಥಳದಲ್ಲಿ ತೀವ್ರ ಕೋಲಾಹಲ ಉಂಟಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ