Telangana: ಯೂಟ್ಯೂಬ್ ವಿಡಿಯೋವನ್ನು ಅನುಕರಣೆ ಮಾಡಲು ಹೋಗಿ ಜೀವ ಕಳೆದುಕೊಂಡ ಬಾಲಕ
ಯೂಟ್ಯೂಬ್ ವಿಡಿಯೋವನ್ನು ಅನುಕರಣೆ ಮಾಡಲು ಹೋಗಿ 11 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಯೂಟ್ಯೂಬ್(YouTube) ವಿಡಿಯೋವನ್ನು ಅನುಕರಣೆ ಮಾಡಲು ಹೋಗಿ 11 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಸಿರಿಸಿಲ್ಲಾದಲ್ಲಿ 6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಯೂಟ್ಯೂಬ್‌ನಲ್ಲಿ ತಮಾಷೆಯ ವಿಡಿಯೋಗಳನ್ನು ಸಾಮಾನ್ಯವಾಗಿ ವೀಕ್ಷಿಸುತ್ತಿದ್ದ.
ಶನಿವಾರ ರಾತ್ರಿ ಊಟ ಮುಗಿಸಿ ತನ್ನ ಕೋಣೆಗೆ ಹೋದವನೆ ಬಾಗಿಲು ಚಿಲಕ ಹಾಕಿಕೊಂಡು ಮೊಬೈಲ್ ನೋಡಲು ಶುರು ಮಾಡಿದ್ದ, ಉದಯ್ ಪೋಷಕರು ಎಷ್ಟೇ ಕರೆದರೂ ಉತ್ತರ ನೀಡಲಿಲ್ಲ, ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ, ನಂತರ ಅವರು ಬಾಗಿಲು ಒಡೆದು ನೋಡಿದಾಗ ಆತ ನೇಣುಬಿಗಿದ ಸ್ಥಿತಿಯಲ್ಲಿ ಮೊಳೆಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.
ಮತ್ತಷ್ಟು ಓದಿ: ಪದವಿ ಮುಗಿಸಿದ್ದರೂ ಉದ್ಯೋಗವಿಲ್ಲ, ಮದ್ವೆಯಾಗಲು ಹೆಣ್ಣು ಸಿಕ್ಕಿಲ್ಲ; ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ
ಬಾಲಕನನ್ನು ಮಂಡಲ್ ಸೆಂಟರ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರ್ಸಿಲ್ಲಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ