ಬಸ್ಸೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಆರು ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಾಪಟ್ಲಾ ಜಿಲ್ಲೆಯ ಚಿನ್ನಗಂಜಾಂನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಬಸ್ಸೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ಘಟನೆ ಚಿಲ್ಕಲೂರಿಪೇಟೆಯಲ್ಲಿ ಬುಧವಾರ ನಡೆದಿದೆ. ಡಿಕ್ಕಿಯ ನಂತರ ಎರಡು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರಿಗೆ ರವಾನಿಸಲಾಗಿದೆ.
ಗಾಯಾಳುಗಳಿಗೆ ಚಿಲಕಲೂರಿಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಗುಂಟೂರಿಗೆ ಶಿಫಾರಸು ಮಾಡಲಾಗಿದೆ.
ಮೃತರನ್ನು ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ನಿವಾಸಿಗಳಾದ ಅಂಜಿ (35), ಉಪ್ಪಗುಂದೂರು ಕಾಶಿ (65), ಉಪ್ಪುಗುಂದೂರು ಲಕ್ಷ್ಮಿ (55), ಮತ್ತು ಮುಪ್ಪರಾಜು ಖ್ಯಾತಿ ಸಾಯಿಶ್ರೀ (8) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಚಲಿಸುತ್ತಿದ್ದ ಐರಾವತ ಸೆಮಿ ಸ್ಲೀಪರ್ ಬಸ್ನಲ್ಲಿ ಕಾಣಿಸಿಕೊಂಡ ಬೆಂಕಿ, ಪ್ರಯಾಣಿಕರು ಪಾರು
ಬಸ್ಸಿನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು
ಮತ ಚಲಾಯಿಸಿದ ಬಳಿಕ ಬಸ್ನಲ್ಲಿ ಒಟ್ಟು 42 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ಲಾರಿ ಚಾಲಕ ಮತ್ತು ಇತರೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಲಕಲೂರಿಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ:
#WATCH | Andhra Pradesh: Six people died after a bus travelling from Chinnaganjam of Bapatla district to Hyderabad collided with a tipper lorry at Varipalem Donka of Chilkaluripet and bus and lorry caught fire. The injured were shifted to Guntur for further treatment:… pic.twitter.com/z3iDQ9jMG2
— ANI (@ANI) May 15, 2024
ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಮಂಡಲದಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ಬಾಪಟ್ಲಾ ಜಿಲ್ಲೆಯ ಚಿನ್ನಗಂಜಾಂನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:52 am, Wed, 15 May 24