ನಾನು ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ: ವಿವಾದಕ್ಕೆ ತೆರೆ ಎಳೆದ ಪ್ರಧಾನಿ ಮೋದಿ

ನಾನು ಹಿಂದೂ-ಮುಸ್ಲಿಂ ಎಂದು ಭೇದ ಭಾವ ಮಾಡಿದರೆ ಅಂದಿನಿಂದ ನನಗೆ ಸಾರ್ವಜನಿಕ ಕ್ಷೇತ್ರದಲ್ಲಿ ನಿಲ್ಲಲು ಅವಕಾಶವಿರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ನಾನು ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ: ವಿವಾದಕ್ಕೆ ತೆರೆ ಎಳೆದ ಪ್ರಧಾನಿ ಮೋದಿ
ನರೇಂದ್ರ ಮೋದಿImage Credit source: NDTV
Follow us
ನಯನಾ ರಾಜೀವ್
|

Updated on: May 15, 2024 | 11:06 AM

ನಾನು ಹಿಂದೂ(Hindu) ಅಥವಾ ಮುಸ್ಲಿಂ(Muslim) ಬಗ್ಗೆ ಮಾತನಾಡಿಲ್ಲ ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದ ಮಾತ್ರಕ್ಕೆ ಅದು ಮುಸ್ಲಿಮರೇ ಎಂದು ನೀವು ಅರ್ಥೈಸಿಕೊಳ್ಳುವುದೇಕೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಶ್ನೆ ಮಾಡಿದ್ದಾರೆ. ನಾನು ವೋಟ್​ ಬ್ಯಾಂಕ್​ ರಾಜಕಾರಣ ಮಾಡಲು ಇಲ್ಲಿ ಬಂದಿಲ್ಲ, ಸಬ್​ ಕಾ ಸಾಥ್ ಸಬ್​ ಕಾ ವಿಕಾಸ್ ಎಂದು ಎಲ್ಲಾ ಧರ್ಮದವರನ್ನು ಒಟ್ಟಿಗೆ ಕೊಂಡೊಯ್ಯುವುದೇ ನನ್ನ ಗುರಿ ಎಂದರು.

ಹೆಚ್ಚು ಮಕ್ಕಳಿರುವಲ್ಲಿ ಬಡತನವಿದೆ, ನಿಮ್ಮ ಮಕ್ಕಳನ್ನು ಬೇರೆಯವರು ನೋಡಿಕೊಳ್ಳುವ ಪರಿಸ್ಥಿತಿ ಬರಬಾರದು ಎಂದರು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಗಲಭೆಯ ನಂತರ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ತಮ್ಮ ವಿರೋಧಿಗಳು ಮುಸ್ಲಿಮರಿಗೆ ನನ್ನ ಮೇಲಿದ್ದ ಗೌರವವನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ.

ಆಗ ಈದ್​ ದಿನಗಳಲ್ಲಿ ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ, ಮುಸ್ಲಿಂ ಕುಟುಂಬದಲ್ಲಿ ಮಾಡಿದ್ದ ಅಡುಗೆಯನ್ನೇ ಊಟ ಮಾಡುತ್ತಿದ್ದೆವು. ಇಂದಿಗೂ ಅನೇಕ ಮುಸ್ಲಿಂ ಸ್ನೇಹಿತರಿದ್ದಾರೆ ಎಂದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮಗೆ ಮತ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ ದೇಶದ ಜನತೆ ಮತ ಹಾಕುತ್ತಾರೆ ಎಂದು ಮೋದಿ ಉತ್ತರಿಸಿದರು.

ಮತ್ತಷ್ಟು ಓದಿ: PM Modi: ಕಾರೂ ಇಲ್ಲ, ಮನೆಯೂ ಇಲ್ಲ; ಪ್ರಧಾನಿ ನರೇಂದ್ರ ಮೋದಿ ಒಟ್ಟು ಆಸ್ತಿ 3 ಕೋಟಿ ರೂ.

ನಾನು ಹಿಂದೂ-ಮುಸ್ಲಿಂ ಎಂದು ಭೇದ ಭಾವ ಮಾಡಿದರೆ ಅಂದಿನಿಂದ ನನಗೆ ಸಾರ್ವಜನಿಕ ಕ್ಷೇತ್ರದಲ್ಲಿ ನಿಲ್ಲಲು ಅವಕಾಶವಿರುವುದಿಲ್ಲ ಎಂದು ಹೇಳಿದರು.

ಮೋದಿ ಮೊದಲು ಹೇಳಿದ್ದೇನು? ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಆಸ್ತಿಯಲ್ಲಿ ಹೆಚ್ಚಿನ ಹಕ್ಕುಗಳನ್ನು ಪಡೆಯಬೇಕೆಂದು ಕಾಂಗ್ರೆಸ್ ಬಯಸುತ್ತದೆ ಎಂದು ಹೇಳಿದ್ದರು. ಇದೇ ವೇಳೆ ದೇಶದ ಸಂಪತ್ತನ್ನು ದೇಶದ ನುಸುಳುಕೋರರಿಗೆ ಹಂಚಲು ಕಾಂಗ್ರೆಸ್ ಬಯಸುತ್ತಿದೆ ಎಂದಿದ್ದರು.

ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮರುಹಂಚಿಕೆ ಮಾಡುವ ಕಾಂಗ್ರೆಸ್‌ನ ಉದ್ದೇಶದ ಬಗ್ಗೆ ವರದಿಗಳನ್ನು ಉಲ್ಲೇಖಿಸಿದ ಪ್ರಧಾನಿ, ಪಕ್ಷವು ಸಮೀಕ್ಷೆಯನ್ನು ನಡೆಸುತ್ತದೆ ಮತ್ತು ಅವರು ಮಹಿಳೆಯರ ಬಳಿ ಇರುವ ಮಂಗಳಸೂತ್ರವನ್ನು ಸಹ ಬಿಡುವುದಿಲ್ಲ ಮತ್ತು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು