ಕೆಸಿಆರ್‌ಗೆ ಸವಾಲು; ದೇವಸ್ಥಾನದಲ್ಲಿ ಒದ್ದೆ ಬಟ್ಟೆಯಲ್ಲಿ ಪ್ರತಿಜ್ಞೆ ಮಾಡಿದ ತೆಲಂಗಾಣ ಬಿಜೆಪಿ ಮುಖ್ಯಸ್ಥ
ತಮ್ಮ ಶಾಸಕರನ್ನು ಖರೀದಿಸುವ ಯತ್ನ ನಡೆದಿದೆ ಎಂಬ ಆರೋಪ ಸಾಬೀತುಪಡಿಸಲು ಒದ್ದೆ ಬಟ್ಟೆಯಲ್ಲೇ ದೇವರ ಮುಂದೆ ಪ್ರತಿಜ್ಞೆ ಮಾಡಿ ಎಂದು ಬಿಜೆಪಿ ನಾಯಕ ಕೆಸಿಆರ್‌ಗೆ ಸವಾಲು ಹಾಕಿದ್ದಾರೆ.
ಹೈದರಾಬಾದ್: ರಾಜ್ಯದ ತೆಲಂಗಾಣ ರಾಷ್ಟ್ರ ಸಮಿತಿ (TRS) ಸರ್ಕಾರವನ್ನು ಉರುಳಿಸಲು ರಾಜ್ಯ ಬಿಜೆಪಿ ಮುಖ್ಯಸ್ಥನಾಗಿ ಶಾಸಕರಿಗೆ ಲಂಚ ನೀಡುವ ಯಾವುದೇ ಪ್ರಯತ್ನದಲ್ಲಿ ತಾನು ಭಾಗಿಯಾಗಿಲ್ಲ ಎಂದು ತೆಲಂಗಾಣದ ಬಿಜೆಪಿ ಮುಖಂಡರೊಬ್ಬರು ಒದ್ದೆ ಬಟ್ಟೆಯಲ್ಲಿ ದೇವಸ್ಥಾನದಲ್ಲಿ ಪ್ರತಿಜ್ಞೆ ಮಾಡಿದ್ದಾರೆ. ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ (Bandi Sanjay) ತಮ್ಮ ಮೈಮೇಲೆ ನೀರು ಸುರಿದುಕೊಂಡು ದೇವಸ್ಥಾನದ ಅರ್ಚಕರ ಮುಂದೆ ಹೇಳಿಕೆ ನೀಡಿದ್ದಲ್ಲದೆ, ಇದೇ ರೀತಿ ಮಾಡಿ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (KCR) ಅವರಿಗಾಗಿ ಕಾದು ಕುಳಿತಿದ್ದರು. ಮುಖ್ಯಮಂತ್ರಿ ಕೆಸಿಆರ್ ಅವರು ನವೀಕರಿಸಿ ಹೊಸ ದೇವಾಲಯವಾಗಿ ನಿರ್ಮಿಸಿ ಹೆಮ್ಮೆಯ ವಿಷಯವಾಗಿ ಪ್ರದರ್ಶಿಸಿದ್ದ ಯಾದಾದ್ರಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಈ ಪ್ರತಿಜ್ಞೆ ನಡೆದಿದೆ. ಈ ದೇವಸ್ಥಾನವು ಮುನುಗೋಡಿಗೆ ಅತ್ಯಂತ ಸಮೀಪದಲ್ಲಿದ್ದು, ಗುರುವಾರ ಪ್ರಮುಖ ಉಪಚುನಾವಣೆಗಳು ನಡೆಯಲಿವೆ. ತಮ್ಮ ಶಾಸಕರನ್ನು ಖರೀದಿಸುವ ಯತ್ನ ನಡೆದಿದೆ ಎಂಬ ಆರೋಪ ಸಾಬೀತುಪಡಿಸಲು ಒದ್ದೆ ಬಟ್ಟೆಯಲ್ಲೇ ದೇವರ ಮುಂದೆ ಪ್ರತಿಜ್ಞೆ ಮಾಡಿ ಎಂದು ಬಿಜೆಪಿ ನಾಯಕ ಕೆಸಿಆರ್‌ಗೆ ಸವಾಲು ಹಾಕಿದ್ದಾರೆ.
ರೋಹಿತ್ ರೆಡ್ಡಿ ಎಂಬುವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ನಾಲ್ವರು ಟಿಆರ್‌ಎಸ್ ಶಾಸಕರಿಗೆ ಲಂಚ ನೀಡುವ ಕೃತ್ಯದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ಬುಧವಾರ ಹೇಳಿದ್ದಾರೆ. ಪೊಲೀಸರು ದಾಖಲಿಸಿರುವ ಪ್ರಕರಣದ ದೂರುದಾರ ರೋಹಿತ್ ರೆಡ್ಡಿ ಅವರು ಬಿಜೆಪಿಗೆ ಬರಲು ತನಗೆ ₹ 100 ಕೋಟಿ ವರೆಗೆ ಆಫರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
In the holy abode of Yadadri Lakshmi Narasimha Swamy swore that BJP is not involved in the alleged poaching of 4TRS MLAs.#TruthAlwaysTriumphs pic.twitter.com/b3VYUfnJBb
— Bandi Sanjay Kumar (@bandisanjay_bjp) October 28, 2022
7
ಲಂಚ ನೀಡಿದ ಆರೋಪ ಹೊತ್ತಿರುವ ಮೂವರು ಆರೋಪಿಗಳನ್ನು ಗುರುವಾರ ತಡರಾತ್ರಿ ನ್ಯಾಯಾಧೀಶರು ಬಿಡುಗಡೆಗೊಳಿಸಿದ್ದು, ಆರೋಪಿಗಳನ್ನು ವಿಚಾರಣೆಗೊಳಪಡಿಸುವ ಮುನ್ನ ಸೆಕ್ಷನ್ 41ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಬೇಕು ಎಂದು ಹೇಳಿದ್ದಾರೆ. ಇದೀಗ ಸೈಬರಾಬಾದ್ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆ ಬಿಜೆಪಿಯ ಪ್ರಮುಖ ನಾಯಕರನ್ನು ಉಲ್ಲೇಖಿಸಿ ಆರೋಪಿಗಳು ಮತ್ತು ಶಾಸಕರ ನಡುವಿನ ಆಡಿಯೋ ಸಂಭಾಷಣೆಗಳು ಬಹಿರಂಗಗೊಂಡಿವೆ.
ಯಾದಾದ್ರಿ ದೇವಸ್ಥಾನದಲ್ಲಿ ಕೆಸಿಆರ್ ತಮ್ಮ “ಒದ್ದೆ ಬಟ್ಟೆಯ ಪ್ರತಿಜ್ಞೆ” ತೆಗೆದುಕೊಳ್ಳದಿದ್ದಕ್ಕಾಗಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದ ಬಂಡಿ ಸಂಜಯ್, ಶಾಸಕರ ಖರೀದಿ ಆರೋಪಗಳನ್ನು ಮುಖ್ಯಮಂತ್ರಿ “ಸ್ಕ್ರಿಪ್ಟ್, ನಿರ್ದೇಶನ ಮತ್ತು ನಿರ್ಮಾಣ” ಮಾಡಿದ್ದಾರೆ.”ಸೋರಿಕೆಯಾದ” ಆಡಿಯೋ ಟೇಪ್‌ಗಳನ್ನು ತಿರುಚಲಾಗಿದೆ ಎಂದು ಅವರು ಹೇಳಿದರು.