ಕೋಟಿಗಟ್ಟಲೆ ಹಣಕಾಸು ವಂಚನೆ ಮಾಡಿದ ಆರೋಪಿ ಅಧಿಕಾರಿಯೊಬ್ಬ 28 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ. ಕೊನೆಗೆ ಪಾಪದ ಕೊಡ ತುಂಬುತ್ತಿದ್ದಂತೆ ತೆಲಂಗಾಣ ಸಿಐಡಿ ಪೊಲೀಸರು (Telangana CID) ಆತನನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ತೆಲಂಗಾಣ ಪೊಲೀಸರು ಬಹಿರಂಗಪಡಿಸಿದ ವಿವರಗಳ ಪ್ರಕಾರ.. ತೆಲಂಗಾಣ ರಾಜ್ಯದ ಮಹೆಬೂಬ್‌ನಗರ ಜಿಲ್ಲೆಯಲ್ಲಿ ಈ ಘಟನೆ 28 ವರ್ಷಗಳ ಹಿಂದೆ ನಡೆದಿತ್ತು. ಕೋಟಿಗಟ್ಟಲೆ ಹಣಕಾಸು ವಂಚನೆ ಮಾಡಿದ (Financial Fraud) ಆರೋಪಿ ಅಧಿಕಾರಿ ಪೊಲೀಸರ ಕೈಗೆ ಸಿಕ್ಕಿಬೀಳದೆ ಪರಾರಿಯಾಗಿದ್ದ. ಕೊನೆಗೆ ಪಾಪದ ಕೊಡ ತುಂಬುತ್ತಿದ್ದಂತೆ ತೆಲಂಗಾಣ ಸಿಐಡಿ ಪೊಲೀಸರು ಆತನನ್ನು ಬಂಧಿಸಿ (Arrest) ಕಂಬಿ ಹಿಂದೆ ಕಳುಹಿಸಿದ್ದಾರೆ.
ಕೋಥೂರ್ ಮಂಡಲದಲ್ಲಿ 1995 ರಲ್ಲಿ ವ್ಯಾನೈಸಿಂಗ್ ಕಂಪನಿ ಹೆಸರಿನಲ್ಲಿ ಸ್ಟೀಲ್ ಕಂಪನಿಯನ್ನು ಸ್ಥಾಪಿಸಲಾಗಿತ್ತು. ಕಂಪನಿಯ ಆಡಳಿತ ಮಂಡಳಿಯು ಕಂಪನಿಯಲ್ಲಿನ ಷೇರುಗಳ ಹೆಸರಿನಲ್ಲಿ ಸ್ಥಳೀಯರಿಂದ ಒಟ್ಟು 4.3 ಕೋಟಿ ರೂ. ಸಂಗ್ರಹಿಸಿತ್ತು. ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂದೋರ್‌ನ ದಾದರ್ ಶಾಖೆಯ ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ (State Bank of Indore Manager) ವಿಎಸ್ ಕ್ಷೀರಸಾಗರ್ (ಈಗಿನ ವಯಸ್ಸು 78 ವರ್ಷ) ಒಟ್ಟು ಸಂಗ್ರಹಿಸಿದ ಹಣದಲ್ಲಿ ಸುಮಾರು 4 ಕೋಟಿ ರೂ.ಯನ್ನು ಕಂಪನಿ ದಿವಾಳಿಯಾದಾಗ ಸ್ವತಃ ತಾವೇ ಕಬಳಿಸಿದ್ದರು. ಅದರಿಂದ ಅನೇಕ ಅಮಾಯಕರು ತಮ್ಮ ಹಣವನ್ನು ಕಳೆದುಕೊಂಡರು.
ವಿಎಸ್ ಕ್ಷೀರಸಾಗರ್ ವಿರುದ್ಧ 1995ರಲ್ಲಿ ಮಹಬೂಬ್‌ನಗರ ಜಿಲ್ಲೆಯ ಕೋತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆತ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದ. ಸಿಐಡಿ ಅಧಿಕಾರಿಗಳು ತನಿಖೆಯ ಸಮಯದಲ್ಲಿ ಆರೋಪಿಯ ವಿರುದ್ಧ ಜಾಮೀನುರಹಿತ ವಾರಂಟ್ ಅನ್ನೂ ಸಹ ಪಡೆದಿದ್ದರು. ಆದರೆ ಇದೀಗ ಸುಮಾರು 28 ವರ್ಷಗಳ ನಂತರ ಇಂದೋರ್ ಪಟ್ಟಣದಲ್ಲಿ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ ಎಂದು ಸಿಐಡಿ ಹೆಚ್ಚುವರಿ ಡಿಜಿ ಮಹೇಶ್ ಭಾಗವತ್ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಸದ್ಯ ಪ್ರಕರಣವನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳನ್ನು ಡಿಜಿ ಮಹೇಶ್ ಭಾಗವತ್ ಅಭಿನಂದಿಸಿದ್ದಾರೆ.
Published On - 12:48 pm, Thu, 13 April 23