ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವಾಗ ಕುಸಿದುಬಿದ್ದು, 19 ವರ್ಷದ ಯುವಕನೋರ್ವ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಯುವಕ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯವನೆಂದು ತಿಳಿದುಬಂದಿದೆ. ತನ್ನ ಸಂಬಂಧಿಕರ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೈದರಾಬಾದ್ನಿಂದ 200 ಕಿ.ಮೀ ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಯುವಕ ಡಿಜೆಯಲ್ಲಿ ಹಾಡಿ ಕುಣಿಯುತ್ತಿದ್ದ. ಈ ಘಟನೆಯಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರಲ್ಲಿ ಶೋಕ ಮಡುಗಟ್ಟಿತ್ತು. ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ.
A Young Man Died on the Spot of a Heart Attack While Dancing at a Wedding Reception in Barat in kubeer mandal of Nirmal District,
Telangana. pic.twitter.com/bq5acaQdNz— Mohammed Zeeshan Ali Zahed (@zeeshan_zahed) February 26, 2023
ಯುವಕನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷೆಯ ನಂತರ ಅವನು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತಷ್ಟು ಓದಿ: Heart Attack: ನಿಮಗೆ ಹೃದಯಾಘಾತದ ಅಪಾಯ ಎದುರಾಗಬಾರದು ಎಂದಿದ್ದರೆ ಈ ಒಂದು ವಿಚಾರವನ್ನು ಸದಾ ನೆನಪಿನಲ್ಲಿಡಿ
ಯುವಕ ಭಾರಿ ಹೃದಯಸ್ತಂಭನಕ್ಕೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ನಾಲ್ಕು ದಿನದಲ್ಲಿ ತೆಲಂಗಾಣದಲ್ಲಿ ಇಂತಹ ಎರಡನೇ ಘಟನೆ ಇದಾಗಿದೆ. ಫೆಬ್ರವರಿ 22 ರಂದು ಹೈದರಾಬಾದ್ನ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಕುಸಿದುಬಿದ್ದು 24 ವರ್ಷದ ಕಾನ್ಸ್ಟೇಬಲ್ ಮೃತಪಟ್ಟಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ