ತೆಲಂಗಾಣ ಹೈಕೋರ್ಟ್(High Court) ನಿರ್ಮಾಣಕ್ಕೆ ಕೃಷಿ ವಿಶ್ವವಿದ್ಯಾಲಯದ ಜಮೀನು ಮಂಜೂರು ಮಾಡುವುದನ್ನು ವಿರೋಧಿಸಿ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿನಿಯ ಕೂದಲನ್ನು ಹಿಡಿದು ಎಳೆದೊಯ್ದ ಅಮಾನುಷ ಘಟನೆ ನಡೆದಿದೆ.
ಸ್ಕೂಟರ್ನಲ್ಲಿದ್ದ ಇಬ್ಬರು ಮಹಿಳಾ ಪೊಲೀಸರು ವಿದ್ಯಾರ್ಥಿನಿಯ ಜುಟ್ಟು ಹಿಡಿದು ಧರಧರನೆ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳಾ ಪೊಲೀಸರು ಬಾಲಕಿಯನ್ನು ಹಿಂಬಾಲಿಸುತ್ತಿರುವುದು ಮತ್ತು ಸ್ಕೂಟರ್‌ನಲ್ಲಿ ಹಿಂದೆ ಕುಳಿತಿದ್ದ ಮಹಿಳೆ ಆಕೆಯ ಕೂದಲನ್ನು ಎಳೆದುಕೊಂಡು ಹೋಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಇದರಿಂದಾಗಿ ಬಾಲಕಿ ಕೆಳಗೆ ಬಿದ್ದು ನೋವಿನಿಂದ ಅಳಲು ಪ್ರಾರಂಭಿಸಿದಳು. ಪ್ರೊಫೆಸರ್ ಜೈಶಂಕರ್ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹೈಕೋರ್ಟ್ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿರುವುದನ್ನು ವಿರೋಧಿಸಿ ಎಬಿವಿಪಿ ನಡೆಸಿದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: ಹಳೆಯ ವೈಷಮ್ಯ, ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ, ಕಿಲೋಮೀಟರ್ಗಟ್ಟಲೆ ದೇಹ ಎಳೆದೊಯ್ದ ಪಾಪಿಗಳು
ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಇಡೀ ದೇಶವೇ ಇಂದು ನಮ್ಮ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡುತ್ತಿರುವಾಗ ತೆಲಂಗಾಣದಲ್ಲಿ ಎಬಿವಿಪಿ ಮಹಿಳಾ ಕಾರ್ಯಕರ್ತೆಯೊಬ್ಬರ ಮೇಲೆ ಪೊಲೀಸರು ಈ ರೀತಿ ಅನುಚಿತವಾಗಿ ವರ್ತಿಸಿದ್ದಾರೆ.
The recent incident involving Telangana police is deeply concerning and absolutely unacceptable. Dragging a peaceful student protester and unleashing abrasive behaviour on the protestor raises serious questions about the need for such aggressive tactics by the police.
This… pic.twitter.com/p3DH812ZBS
— Kavitha Kalvakuntla (@RaoKavitha) January 24, 2024
ಆಕೆಯ ತಪ್ಪೇನು? ಶಿಕ್ಷಣ ಸಂಸ್ಥೆಯೊಂದರ ಜಾಗವನ್ನು ನ್ಯಾಯಾಲಯಕ್ಕಾಗಿ ಮಂಜೂರು ಮಾಡಿದ್ದರಿಂದ ತೆಲಂಗಾಣ ಸರ್ಕಾರದ ವಿರುದ್ಧ ಆಕೆ ಪ್ರತಿಭಟನೆ ನಡೆಸುತ್ತಿದ್ದಳು. ತೆಲಂಗಾಣ ಬಿಜೆಪಿ ನಾಯಕರು ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆ ಈ ವಿಡಿಯೋವನ್ನು ನಿರಂತರವಾಗಿ ಟ್ವೀಟ್ ಮಾಡುತ್ತಿದೆ.
ಪ್ರತಿಪಕ್ಷಗಳಾದ ಬಿಆರ್‌ಎಸ್ ಮತ್ತು ಬಿಜೆಪಿ ಘಟನೆಯನ್ನು ಖಂಡಿಸಿದ್ದು, ಭಾಗಿಯಾದ ಪೊಲೀಸರ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿವೆ. ಘಟನೆಯ ಕುರಿತು ಸೈಬರಾಬಾದ್ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.
ಬಿಆರ್‌ಎಸ್ ಮುಖಂಡರಾದ ಕೆ. ಕವಿತಾ ಘಟನೆಯನ್ನು ಖಂಡಿಸಿದ್ದು, ಮಾನವ ಹಕ್ಕುಗಳ ಆಯೋಗವು ಸಂಬಂಧಪಟ್ಟವರ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇಂತಹ ದುರಹಂಕಾರದ ವರ್ತನೆಗೆ ತೆಲಂಗಾಣ ಪೊಲೀಸರು ಬೇಷರತ್ ಕ್ಷಮೆ ಯಾಚಿಸಬೇಕು. ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಹೈಕೋರ್ಟ್‌ನ ನೂತನ ಕಟ್ಟಡ ನಿರ್ಮಾಣಕ್ಕಾಗಿ ರಾಜೇಂದ್ರನಗರದಲ್ಲಿ ವಿಶ್ವವಿದ್ಯಾಲಯಕ್ಕೆ 100 ಎಕರೆ ಭೂಮಿ ಮಂಜೂರು ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:28 am, Thu, 25 January 24