AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ರಾಮಮಂದಿರಕ್ಕೆ ಒಂದೇ ದಿನ 2.5 ಲಕ್ಷ ಭಕ್ತರು ಭೇಟಿ, ಹರಿದುಬಂತು 3.17 ಕೋಟಿ ರೂ. ದೇಣಿಗೆ

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ, ರಾಮಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮವೂ ಸಾಂಗವಾಗಿ ನೆರವೇರಿದೆ. ಇದೀಗ ಬಾಲ ರಾಮನನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಅಯೋಧ್ಯೆಗೆ ಬರುತ್ತಿದೆ. ರಾಮಮಂದಿರ ತೆರೆದ ಎರಡನೇ ದಿನವೂ ಸುಮಾರು 2.5 ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಜನವರಿ 24 ರಂದು ಒಂದೇ ದಿನ ಭಕ್ತರಿಂದ 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಆಡಳಿತವು ಅಂತಿಮವಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬಹುಪಯೋಗಿ ಯಾತ್ರಿ ಸೌಲಭ್ಯ ಕೇಂದ್ರವನ್ನು ಪ್ರಾರಂಭಿಸಿತು. ಎರಡನೇ ದಿನವಾದ ಬುಧವಾರ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ಒಂದೇ ದಿನ 2.5 ಲಕ್ಷ ಭಕ್ತರು ಭೇಟಿ, ಹರಿದುಬಂತು 3.17 ಕೋಟಿ ರೂ. ದೇಣಿಗೆ
ಭಕ್ತರುImage Credit source: Hindustan Times
ನಯನಾ ರಾಜೀವ್
|

Updated on: Jan 25, 2024 | 11:32 AM

Share

ಅಯೋಧ್ಯೆ(Ayodhya)ಯಲ್ಲಿ ಭವ್ಯವಾದ ರಾಮ ಮಂದಿರ(Ram Mandir) ನಿರ್ಮಾಣವಾಗಿದೆ, ರಾಮಲಲ್ಲಾನ ಪ್ರತಿಷ್ಠಾಪನೆಯ ಕಾರ್ಯಕ್ರಮವೂ ಸಾಂಗವಾಗಿ ನೆರವೇರಿದೆ. ಇದೀಗ ಬಾಲ ರಾಮನನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಅಯೋಧ್ಯೆಗೆ ಬರುತ್ತಿದೆ. ರಾಮಮಂದಿರ ತೆರೆದ ಎರಡನೇ ದಿನವೂ ಸುಮಾರು 2.5 ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಜನವರಿ 24 ರಂದು ಒಂದೇ ದಿನ ಭಕ್ತರಿಂದ 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಆಡಳಿತವು ಅಂತಿಮವಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬಹುಪಯೋಗಿ ಯಾತ್ರಿ ಸೌಲಭ್ಯ ಕೇಂದ್ರವನ್ನು ಪ್ರಾರಂಭಿಸಿತು. ಎರಡನೇ ದಿನವಾದ ಬುಧವಾರ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.

ಜನವರಿ 22ರಂದು ರಾಮಲಲ್ಲಾನ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು. ಅದಾದ ಬಳಿಕ ಮಂಗಳವಾರದಿಂದ ಭಕ್ತರಿಗೆ ರಾಮಲಲ್ಲಾನ ದರ್ಶನ ಅವಕಾಶವನ್ನು ಕಲ್ಪಿಸಲಾಯಿತು. ಲಕ್ಷಾಂತರ ಜನ ಸೇರಿದ್ದರಿಂದ ಭಕ್ತರು ದರ್ಶನ ಪಡೆಯಲು ಹರಸಾಹಸ ಪಡಬೇಕಾಯಿತು.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಮಾತನಾಡಿ, ಒಂದೇ ದಿನದಲ್ಲಿ ಭಕ್ತರು ರಾಮನಿಗೆ 3 ಕೋಟಿ 17 ಲಕ್ಷ ರೂ. ನೀಡಿದ್ದಾರೆ. ಈ ಮೊತ್ತವು ಭಾರತ ಮತ್ತು ವಿದೇಶದ ಭಕ್ತರು ಟ್ರಸ್ಟ್ ಖಾತೆಗೆ ಮಾಡಿದ ಆನ್‌ಲೈನ್ ದೇಣಿಗೆಗಳನ್ನು ಸಹ ಒಳಗೊಂಡಿದೆ. ಮಂಗಳವಾರ ರಾಮಲಲ್ಲಾನ ದರ್ಶನಕ್ಕೆಂದು ಭೇಟಿ ನೀಡಿದವರ ಸಂಖ್ಯೆ ಐದು ಲಕ್ಷಕ್ಕೆ ತಲುಪಿದೆ ಎಂದು ಅಂದಾಜಿಸಲಾಗಿದೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಅಯೋಧ್ಯೆ ರಾಮಮಂದಿರ, ಹೆಚ್ಚಲಿದೆ ಆದಾಯ

ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ ದೇವಸ್ಥಾನದ ಆವರಣದಲ್ಲಿ 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಭಕ್ತಾದಿಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಯಮಗಳನ್ನು ಬದಲಾಯಿಸಿದೆ ಮತ್ತು ದರ್ಶನದ ಅವಧಿಯನ್ನು ರಾತ್ರಿ 7 ರಿಂದ ರಾತ್ರಿ 10 ಕ್ಕೆ ಹೆಚ್ಚಿಸಿದೆ.

ಮುಂಚಿನ 7 ರಿಂದ 11.30 ಮತ್ತು ಮಧ್ಯಾಹ್ನ 2 ರಿಂದ 7 ರವರೆಗೆ ಇದ್ದ ಸಮಯಕ್ಕೆ ವಿರುದ್ಧವಾಗಿ ಭಕ್ತರು ಈಗ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದೆ.

ನಗರಕ್ಕೆ ಪ್ರವೇಶಿಸುವ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಬಸ್ತಿ, ಗೊಂಡಾ, ಅಂಬೇಡ್ಕರ್ ನಗರ, ಬಾರಾಬಂಕಿ, ಸುಲ್ತಾನ್‌ಪುರ ಮತ್ತು ಅಮೇಠಿಯಿಂದ ಅಯೋಧ್ಯೆಯ ಗಡಿಯಿಂದ 15 ಕಿಮೀ ಮುಂದೆ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC) ಬಸ್‌ಗಳು ಮತ್ತು ಅಯೋಧ್ಯೆಗೆ ಬರುವ ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಅಯೋಧ್ಯೆಗೆ ಹೆಚ್ಚುವರಿ ರಸ್ತೆ ಮಾರ್ಗದ ಬಸ್‌ಗಳನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜನಸಂದಣಿಯಿಲ್ಲದೆ ದೇವಸ್ಥಾನದೊಳಗೆ ಸುವ್ಯವಸ್ಥಿತವಾಗಿ ಹರಿದುಬರಲು ಜನರು ರಾಮಪಥ, ಧರ್ಮಪಥ ಮತ್ತು ಜನ್ಮಭೂಮಿ ಮಾರ್ಗದ ಉದ್ದಕ್ಕೂ ಸರತಿ ಸಾಲಿನಲ್ಲಿ ನಿಲ್ಲಬೇಕು ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ