ಹೈದರಾಬಾದ್: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್ 19 ಲಸಿಕೆ(Covid 19 Vaccine) ಸಿಗಬೇಕು. ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಹಾಗೇ, ದೇಶಕ್ಕೆ ಒಂದು ಕೋಟಿ ಡೋಸ್ ಲಸಿಕೆ ನೀಡುವ ಬಹುದೊಡ್ಡ ಗುರಿಯನ್ನೂ ಹೊಂದಿದೆ. ಆದರೆ ಕೊವಿಡ್ 19 ಲಸಿಕೆ ಅಭಿಯಾನ ಅಷ್ಟು ಸುಲಭದ್ದಾಗಿಲ್ಲ. ಭಾರತದ ಕೆಲವು ಮೂಲೆಗಳಲ್ಲಿ, ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಕೊರೊನಾ ಲಸಿಕೆ ಕೊಡುವುದು ಆರೋಗ್ಯ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಗಡಿಭಾಗದ, ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತದ ಸಿಬ್ಬಂದಿ ಅಲ್ಲಿಗೇ ನಡೆದುಕೊಂಡು ಹೋಗಿ ಲಸಿಕೆ ಕೊಟ್ಟ ಉದಾಹರಣೆಗಳೂ ಬೇಕಾದಷ್ಟಿವೆ. ಹಾಗೇ, ಕೆಲವು ದೂರದ ಪ್ರದೇಶಗಳಲ್ಲಿ ಇರುವ ಆರೋಗ್ಯ ಕೇಂದ್ರಕ್ಕೇ ಲಸಿಕೆಗಳನ್ನು ಹೊತ್ತ ವಾಹನಗಳು ಹೋಗಲು ಸಾಧ್ಯವಾಗುತ್ತಿಲ್ಲ.
ಈ ಸಮಸ್ಯೆಗೆ ಪರಿಹಾರವೆಂಬಂತೆ ತೆಲಂಗಾಣ ಸರ್ಕಾರ ಒಂದು ಹೊಸ ಹೆಜ್ಜೆ ಇಟ್ಟಿದೆ. ಅದು ಮೆಡಿಸಿನ್ ಫ್ರಂ ಸ್ಕೈ (Medicine from the Sky) ಎಂಬ ವಿನೂತನ ಯೋಜನೆ. ಅಂದರೆ ದುರ್ಗಮ ಪ್ರದೇಶಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಡ್ರೋನ್ ಮುಖಾಂತರ ಕೊವಿಡ್ 19 ಲಸಿಕೆಗಳನ್ನು ಸಾಗಿಸುವುದು. ಇದರ ಪ್ರಾಯೋಗಿಕ ಹಾರಾಟ ಶನಿವಾರ (ಸೆಪ್ಟೆಂಬರ್ 11)ದಿಂದ ಪ್ರಾರಂಭವಾಗಲಿದೆ. ಪ್ರಾಯೋಗಿಕ ಸಾಗಣೆಯಲ್ಲಿ ಕೊವಿಡ್ 19 ಲಸಿಕೆಯನ್ನು ಬಳಸಿಕೊಳ್ಳಲಾಗುವುದಿಲ್ಲ. ಯೋಜನೆಯ ಪ್ರಯೋಗ ಮುಗಿದ ಬಳಿಕ ಡ್ರೋನ್ ಮೂಲಕ, ಆಸ್ಪತ್ರೆಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೊವಿಡ್ 19 ಲಸಿಕೆಯನ್ನು ಸಾಗಿಸುವ ಕಾರ್ಯ ಶುರುವಾಗಲಿದೆ.
ಅಂದಹಾಗೆ ಡ್ರೋನ್ ಕಾರ್ಯಾಚರಣೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಂತಿಮ ಹಂತದ ಅನುಮೋದನೆಯನ್ನೂ ನೀಡಿದೆ. ಈ ಯೋಜನೆ ಬಗ್ಗೆ ಟ್ವೀಟ್ ಮಾಡಿರುವ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತುಂಬ ಶ್ಲಾಘಿಸಿದ್ದಾರೆ. ಡ್ರೋನ್ ಹಾರಾಟಕ್ಕೆ ಸಂಬಂಧಪಟ್ಟಂತೆ 2021ರಲ್ಲಿ ನಿಯಮಗಳನ್ನು ಉದಾರೀಕರಿಸಲಾಗಿದ್ದು, ಇದರಿಂದ ಹೊಸಹೊಸ ಕ್ರಮಗಳಿಗೆ ಬಾಗಿಲು ತೆರೆದಂತಾಗಿದೆ ಎಂದು ಹೇಳಿದ್ದಾರೆ.
The liberalised #DroneRules2021 have already opened the floodgates of innovation! Visiting Vikarabad, Telangana to launch the pathbreaking “Medicine from the Sky Project” where drones will be used to transport vaccines to remote areas. #DroneRevolutionBegins
1/2— Jyotiraditya M. Scindia (@JM_Scindia) September 8, 2021
2/2 With applications across multiple sectors, the technology is set to transform India in no time! #DroneRevolutionBegins
— Jyotiraditya M. Scindia (@JM_Scindia) September 8, 2021
ಇದನ್ನೂ ಓದಿ:ಸಹಕಾರ ಸಂಘದಲ್ಲಿ ಅವ್ಯವಹಾರ: 4 ಕೋಟಿಗೂ ಹೆಚ್ಚು ವಂಚನೆ ಆರೋಪ