ಚಂಢೀಗಡ: ಆಗಸ್ಟ್ 28 ಲಾಠಿ ಚಾರ್ಜ್‌ಗೆ ಆದೇಶಿಸಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ (Ayush Sinha) ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದು, ಪ್ರತಿಭಟನೆಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ತಿಂಗಳು ಹರ್ಯಾಣದಲ್ಲಿ ರೈತರು ಪ್ರತಿಭಟನೆ ನಡೆಸಿದಾಗ ರೈತರ ತಲೆಗಳನ್ನು ಒಡೆಯಿರಿ ಎಂದು ಆಯುಷ್ ಸಿನ್ಹಾ ಪೊಲೀಸರಿಗೆ ಆದೇಶಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ (Anil Vij) ಕರ್ನಾಲ್‌ನಲ್ಲಿ ನಡೆದ ಇಡೀ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಕರ್ನಾಲ್‌ನಲ್ಲಿರುವ ಮಿನಿ-ಸೆಕ್ರೆಟರಿಯೇಟ್ ಹೊರಗೆ ಧರಣಿ ಆರಂಭಿಸಿದ ರೈತರಿಗೆ ವಿಜ್ ಎಚ್ಚರಿಕೆ ನೀಡಿದರು ತನಿಖೆಯಿಂದ ತಪ್ಪಿತಸ್ಥರೆಂದು ಕಂಡುಬಂದಲ್ಲಿ ರೈತರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ವಿಜ್ ಹೇಳಿದರು. “ನಾವು ಇಡೀ ಕರ್ನಾಲ್ ಪ್ರಸಂಗವನ್ನು ತನಿಖೆ ಮಾಡುತ್ತೇವೆ. ಆಯುಷ್ ಸಿನ್ಹಾ ಮಾತ್ರವಲ್ಲ, ತನಿಖೆಯಿಲ್ಲದೆ ನಾವು ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ರೈತ ನಾಯಕರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕಳೆದ ತಿಂಗಳು ನಡೆದ ಲಾಠಿ ಚಾರ್ಜ್ ಅನ್ನು ವಿರೋಧಿಸಿ ರಾಜ್ಯ ಮತ್ತು ರೈತರ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ನಡುವೆ ವಿಜ್ ಅವರ ಈ ಹೇಳಿಕೆ ಬಂದಿದೆ. ಲಾಠಿ ಪ್ರಹಾರದಲ್ಲಿ ಸುಶೀಲ್ ಕಾಜ್ಲಾ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು ನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಲಾಠಿ ಪ್ರಹಾರದಿಂದ ರೈತ ಸಾವಿಗೀಡಾಗಿಲ್ಲ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ವಾದಿಸುತ್ತಿದ್ದಾರೆ.
ಆಗಸ್ಟ್ 28 ರ ಘಟನೆಗಳ ಸಂದರ್ಭದಲ್ಲಿ “ರೈತರ ತಲೆಗಳನ್ನು ಒಡೆಯಿರಿ” ಎಂದು ಪೊಲೀಸರಿಗೆ ಹೇಳುವ ವಿಡಿಯೊದಲ್ಲಿ ಸಿಕ್ಕಿಬಿದ್ದ ಮಾಜಿ ಕರ್ನಾಲ್ ಎಸ್‌ಡಿಎಂ ಆಯುಷ್ ಸಿನ್ಹಾ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.
ಸಿನ್ಹಾ ಅವರ ಮಾತುಗಳನ್ನು ಹರ್ಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಸಮರ್ಥಿಸಿಕೊಂಡಿದ್ದಾರೆ, ಅಧಿಕಾರಿಯ ಮಾತುಗಳು ಸರಿಯಾಗಿಲ್ಲ ಆದರೆ ಪರಿಸ್ಥಿತಿ “ಕಟ್ಟುನಿಟ್ಟಾಗಿರಬೇಕು” ಎಂದು ಹೇಳಿದರು.
ಕೋಪಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಅವರನ್ನು ಅಮಾನತುಗೊಳಿಸುವಂತೆ ಮತ್ತು “ಕೊಲೆಗಾರ ಅಧಿಕಾರಿಯನ್ನು ಹರ್ಯಾಣ ಸರ್ಕಾರ ರಕ್ಷಿಸಿ ಬಡ್ತಿ ನೀಡುತ್ತಿದೆ” ಎಂದು ಹೇಳಿದ್ದು ಎಂದು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ. ಸಿನ್ಹಾ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಲಾಗಿದೆ, ಆದರೆ ರೈತರು “ಆತನನ್ನು ವರ್ಗಾಯಿಸುವುದು ಶಿಕ್ಷೆಯಲ್ಲ” ಎಂದು ಹೇಳಿದ್ದಾರೆ.
ಬುಧವಾರ ಪ್ರತಿಭಟನಾ ನಿರತ ರೈತರು ಕರ್ನಾಲ್‌ನಲ್ಲಿ ಶಾಶ್ವತ ಪ್ರತಿಭಟನಾ ಸ್ಥಳವನ್ನು ಉಳಿಸಿಕೊಳ್ಳಬೇಕಾಗಬಹುದು ಎಂದು ಹೇಳಿದರು. ಏಕೆಂದರೆ ರಾಜ್ಯದೊಂದಿಗೆ ನಡೆದಮಾತುಕತೆಗಳು ಸತತ ಎರಡನೇ ದಿನವೂ ಅನಿಶ್ಚಿತವಾಗಿದ್ದವು. “ನಾವು ಇಲ್ಲಿ ಸಿಂಗು ಮತ್ತು ಟಿಕ್ರಿ (ದೆಹಲಿಯ) ಗಡಿಯಲ್ಲಿ ಶಾಶ್ವತ ಪ್ರತಿಭಟನೆ ನಡೆಸಬಹುದು” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು. ಕೇಂದ್ರದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗಳ ಮೇಲೆ ಕೇಂದ್ರೀಕರಿಸಿದ ಆ ಸ್ಥಳಗಳಲ್ಲಿ ಪ್ರತಿಭಟನೆಗಳು ಇದರಿಂದ ವಿಚಲಿತವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮೊದಲ ಸುತ್ತಿನ ಮಾತುಕತೆ ಮುಗಿದ ನಂತರ ಕರ್ನಾಲ್ ಸೆಕ್ರೆಟರಿಯೇಟ್‌ಗೆ ರೈತರು ಮಾರ್ಚ್ ನಡೆಸಿದ್ದಾರೆ.
ಪೋಲಿಸರು ಜಲಫಿರಂಗಿಗ ಮೂಲಕ ರೈತರನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರನ್ನು ತಡೆಯಲಾಗಲಿಲ್ಲ. ಪ್ರತಿಭಟನೆಯ ವಿಡಿಯೊಗಳಲ್ಲಿ ಧ್ವಜಾರೋಹಣ ಮತ್ತು ಘೋಷಣೆ ಕೂಗುವಿಕೆ, ರೈತರು ಬ್ಯಾರಿಕೇಡ್‌ಗಳನ್ನು ಹಾರುವುದನ್ನು ಕಾಣಬಹುದು.
“ಕರ್ನಾಲ್‌ನಲ್ಲಿರುವ ಮಿನಿ-ಸೆಕ್ರೆಟರಿಯೇಟ್‌ನ ಘೇರಾವ್ ಅಥವಾ ಸುತ್ತಮುತ್ತಲಿನ ಪ್ರದೇಶವು ಈಗಷ್ಟೇ ಆರಂಭವಾಗಿದೆ. ಇದು ಶಾಂತಿಯುತವಾಗಿರುತ್ತದೆ” ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಸುದ್ದಿಗಾರರರಿಗೆ ತಿಳಿಸಿದ್ದಾರೆ.
“ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಎಲ್ಲಿಯೂ ಹೋಗುವುದಿಲ್ಲ” ಎಂದು ಭಾರತೀಯ ಕಿಸಾನ್ ಯೂನಿಯನ್ (ಚಾದುನಿ) ಹರಿಯಾಣ ಘಟಕದ ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾದುನಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Farmers Protest ಕರ್ನಾಲ್ ಮಾಜಿ ಎಸ್‌ಡಿಎಮ್ ವಿರುದ್ಧ ಕ್ರಮದ ಕುರಿತು ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಸಿದ ರೈತರು
(Action will be taken against Farmers if the probe finds them guilty says Haryana Home Minister Anil Vij)