ಆತನಿಗಿನ್ನೂ 22 ವರ್ಷ, ಸೌದಿ ಅರೇಬಿಯಾದಲ್ಲಿ ವಾರ್ಷಿಕ 58 ಲಕ್ಷ ರೂ ಸಂಬಳದ ದೊಡ್ಡ ಕೆಲಸ ಸಿಕ್ಕಿತ್ತು, ಆದರೆ ಹೃದಯಾಘಾತದಿಂದ ಹಠಾತ್ ಸಾವು!

ತೆಲಂಗಾಣ ರಾಜ್ಯ ವೈದ್ಯಕೀಯ ಸೇವೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕೆ. ಚಂದ್ರಶೇಖರ್ ರೆಡ್ಡಿ ಅವರ ಹಿರಿಯ ಪುತ್ರ ಕಟ್ಟಾ ಅಭಿಜಿತ್ ರೆಡ್ಡಿ ಹೃದಯಾಘಾತದಿಂದ ಚಿಕ್ಕ ವಯಸ್ಸಿಗೇ ಮೃತಪಟ್ಟಿದ್ದಾರೆ. ಅಭಿಜಿತ್ ರೆಡ್ಡಿಗೆ ಇನ್ನೂ 22 ವರ್ಷ ಕೂಡ ಆಗಿಲ್ಲ.

ಆತನಿಗಿನ್ನೂ 22 ವರ್ಷ, ಸೌದಿ ಅರೇಬಿಯಾದಲ್ಲಿ ವಾರ್ಷಿಕ 58 ಲಕ್ಷ ರೂ ಸಂಬಳದ ದೊಡ್ಡ ಕೆಲಸ ಸಿಕ್ಕಿತ್ತು, ಆದರೆ ಹೃದಯಾಘಾತದಿಂದ ಹಠಾತ್ ಸಾವು!
ಆತನಿಗಿನ್ನೂ 22 ವರ್ಷ, ಸೌದಿ ಅರೇಬಿಯಾದಲ್ಲಿ ವಾರ್ಷಿಕ 58 ಲಕ್ಷ ರೂ ಸಂಬಳದ ದೊಡ್ಡ ಕೆಲಸ ಸಿಕ್ಕಿತ್ತು, ಆದರೆ ಹೃದಯಾಘಾತದಿಂದ ಹಠಾತ್ ಸಾವು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 27, 2022 | 2:16 PM

ತೆಲಂಗಾಣ ರಾಜ್ಯ ವೈದ್ಯಕೀಯ ಸೇವೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಟಿಎಸ್‌ಎಂಎಸ್‌ಐಡಿಸಿ -TSMSIDC) ವ್ಯವಸ್ಥಾಪಕ ನಿರ್ದೇಶಕ ಕೆ. ಚಂದ್ರಶೇಖರ್ ರೆಡ್ಡಿ ಅವರ ಹಿರಿಯ ಪುತ್ರ ಕಟ್ಟಾ ಅಭಿಜಿತ್ ರೆಡ್ಡಿ ಹೃದಯಾಘಾತದಿಂದ ಚಿಕ್ಕ ವಯಸ್ಸಿಗೇ ಮೃತಪಟ್ಟಿದ್ದಾರೆ. ಅಭಿಜಿತ್ ರೆಡ್ಡಿಗೆ ಇನ್ನೂ 22 ವರ್ಷ ಕೂಡ ಆಗಿಲ್ಲ.

ತೆಲಂಗಾಣ ರಾಜ್ಯ ವೈದ್ಯಕೀಯ ಸೇವೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ (TSMSIDC) ಎಂಡಿ ಕೆ ಚಂದ್ರಶೇಖರ್ ರೆಡ್ಡಿ ಅವರ ಹಿರಿಯ ಪುತ್ರ ಕಟ್ಟಾ ಅಭಿಜಿತ್ ರೆಡ್ಡಿ (22) ಹೃದಯಾಘಾತದಿಂದ ಅಸುನೀಗಿದ್ದಾರೆ. 22 ವರ್ಷವೂ ಇಲ್ಲದ ಅಭಿಜಿತ್ ರೆಡ್ಡಿ ಮೊನ್ನೆ ರಾತ್ರಿ (ಸೆಪ್ಟೆಂಬರ್ 25) ಟಿವಿಯಲ್ಲಿ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯವನ್ನು ನೋಡುತ್ತಾ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿಯ ನಂತರ 2 ಗಂಟೆಯ ಸಮಯದಲ್ಲಿ ಹೃದಯ ನೋವಿನಿಂದ ಅವರು ಇದ್ದಕ್ಕಿದ್ದಂತೆ ಚೀರಾಡಿದ್ದಾರೆ. ತಕ್ಷಣ ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅಭಿಜಿತ್ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಅಭಿಜಿತ್ ವಾರಂಗಲ್ ನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಬಿ. ಟೆಕ್ ಓದುತ್ತಿದ್ದ.

ಸೌದಿ ಅರೇಬಿಯಾದ ತೈಲ ಕಂಪನಿ ‘ಸೌದಿ ಅರಾಮ್ಕೊ’ದಲ್ಲಿ ವರ್ಷಕ್ಕೆ 70 ಸಾವಿರ ಡಾಲರ್ (ಸುಮಾರು 58 ಲಕ್ಷ ರೂ.) ವಾರ್ಷಿಕ ಸಂಬಳದ ಕೆಲಸ ಸಿಕ್ಕಿತು. ಮುಂದಿನ ತಿಂಗಳು ಕೆಲಸಕ್ಕೆ ಸೇರುವ ಮುನ್ನ ಹೃದಯಾಘಾತದಿಂದ ಹಠಾತ್ತನೆ ನಿಧನರಾದರು. ಬೆಳೆದ ಮಗ ಕಣ್ಣೆದುರೇ ಕುಸಿದು ಬೀಳುತ್ತಿದ್ದಂತೆ ಚಂದ್ರಶೇಖರ್ ರೆಡ್ಡಿ ದಂಪತಿ ಕಣ್ಣೀರಿಟ್ಟರು. ಚಂದ್ರಶೇಖರ್ ರೆಡ್ಡಿ ಅವರ ಹುಟ್ಟೂರು ನಾಗರ್ ಕರ್ನೂಲ್ ಜಿಲ್ಲೆಯ ಉಪ್ಪುತಾಳ. ಅಭಿಜಿತ್ ಅವರ ಅಕಾಲಿಕ ಮರಣಕ್ಕೆ ತೆಲಂಗಾಣ ರಾಜ್ಯ ಆರೋಗ್ಯ ಸಚಿವ ಹರೀಶ್ ರಾವ್, ಶಾಸಕರಾದ ಡಾ. ಸಿ. ಲಕ್ಷ್ಮರೆಡ್ಡಿ ಮತ್ತು ಈಟಲ ರಾಜೇಂದರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಎಂಎಲ್‌ಸಿ ಪಲ್ಲಾ ರಾಜೇಶ್ವರ್ ರೆಡ್ಡಿ, ಟಿಎಸ್‌ಎಂಎಸ್‌ಎಸ್‌ಐಡಿಸಿ ಅಧ್ಯಕ್ಷ ಎರ್ರೊಳ್ಳ ಶ್ರೀನಿವಾಸ್ ಮತ್ತು ಇತರ ಅಧಿಕಾರಿಗಳು ಚಂದ್ರಶೇಖರ್ ರೆಡ್ಡಿ ಮನೆಗೆ ಭೇಟಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಬಹಳಷ್ಟು ಯುವಜನತೆ ಸಾವಿಗೀಡಾಗುತ್ತಿದ್ದಾರೆ. ಈ ರೀತಿಯ ಸಾವಿಗೆ ಮುಖ್ಯ ಕಾರಣವೆಂದರೆ ಹೃದಯ ಸ್ನಾಯುವಿನ ದುರ್ಬಲತೆ. ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿಯೂ ಸಹ, ಹೃದಯ ಮತ್ತು ಕಾಲುಗಳ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವುಗಳು ಸಂಭವಿಸುತ್ತಿವೆ. ಫಿಟ್ನೆಸ್ ಮಾತ್ರೆಗಳನ್ನು ಬಳಸುವವರಿಗೂ ಈ ರೀತಿಯ ಅಪಾಯ ಹೆಚ್ಚು. ವಿಶೇಷವಾಗಿ ದೈಹಿಕ ವ್ಯಾಯಾಮದ ಕೊರತೆ ಇರುವವರಲ್ಲಿ ಹಠಾತ್ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಅಭಿಜಿತ ರೆಡ್ಡಿ ಅವರ ಸಾವು ಕೂಡ ಹೀಗೆಯೇ ನಡೆದಿದೆ ಎಂದು ಹಿರಿಯ ಹೃದ್ರೋಗ ತಜ್ಞ ಡಾ. ರಮೇಶ ಗುಡಪಾಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.