ತಾನು ಮಾಡಿದ ಪ್ರತಿಜ್ಞೆಯಂತೆ 31 ತಿಂಗಳ ನಂತರ ಆಂಧ್ರ ಸಿಎಂ ಆಗಿಯೇ ವಿಧಾನಸಭೆಗೆ ಬಂದ ಚಂದ್ರಬಾಬು ನಾಯ್ಡು

|

Updated on: Jun 21, 2024 | 2:01 PM

175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ 135 ಸ್ಥಾನಗಳನ್ನು ಗೆದ್ದರೆ, ಅವರ ಮಿತ್ರಪಕ್ಷಗಳಾದ ಜನಸೇನಾ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳನ್ನು ಗೆದ್ದಿವೆ. ನಾಯ್ಡು ಅವರು ಇಂದು (ಶುಕ್ರವಾರ) ಮುಖ್ಯಮಂತ್ರಿಯಾಗಿ ಕಾಲಿಡುತ್ತಿದ್ದಂತೆ ಅವರಿಗೆ ಆತ್ಮೀಯ ಸ್ವಾಗತ ನೀಡಲು ಇಡೀ ಸದನ ಎದ್ದು ನಿಂತಿದೆ.ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇದು ನಾಲ್ಕನೇ ಅವಧಿಯಾಗಿದೆ.

ತಾನು ಮಾಡಿದ ಪ್ರತಿಜ್ಞೆಯಂತೆ 31 ತಿಂಗಳ ನಂತರ ಆಂಧ್ರ ಸಿಎಂ ಆಗಿಯೇ ವಿಧಾನಸಭೆಗೆ ಬಂದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Follow us on

ಅಮರಾವತಿ ಜೂನ್ 21: ಆಂಧ್ರ ಪ್ರದೇಶ (Andhra Pradesh )ವಿಧಾನಸಭೆಯ ಮೊದಲ ಅಧಿವೇಶನ ಇಂದು(ಶುಕ್ರವಾರ) ಆರಂಭವಾಗಿದೆ. ತೆಲುಗು ದೇಶಂ ಪಕ್ಷದ (Telugu Desam Party) ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಅವರು ‘ತನ್ನ ಕುಟುಂಬಕ್ಕೆ ಅವಮಾನವಾಗಿದೆ’ ಎಂದು ಸದನದಿಂದ ಹೊರಬಂದ 31 ತಿಂಗಳ ನಂತರ ಇಂದು ಆಂಧ್ರ ಪ್ರದೇಶ ವಿಧಾನಸಭೆಗೆ ಮರಳಿದ್ದಾರೆ. ನಾಯ್ಡು ಅವರು ನವೆಂಬರ್ 2021 ರಲ್ಲಿ ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಹಿಂತಿರುಗುವುದಾಗಿ ಪ್ರತಿಜ್ಞೆ ಮಾಡಿದ್ದರು, ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಪ್ರಚಂಡ ಗೆಲುವು ದಾಖಲಿಸಿ ಅವರು ಪ್ರತಿಜ್ಞೆಯನ್ನು ಪಾಲಿಸಿದ್ದಾರೆ.

175 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಡಿಪಿ 135 ಸ್ಥಾನಗಳನ್ನು ಗೆದ್ದರೆ, ಅವರ ಮಿತ್ರಪಕ್ಷಗಳಾದ ಜನಸೇನಾ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳನ್ನು ಗೆದ್ದಿವೆ. ನಾಯ್ಡು ಅವರು ಇಂದು (ಶುಕ್ರವಾರ) ಮುಖ್ಯಮಂತ್ರಿಯಾಗಿ ಕಾಲಿಡುತ್ತಿದ್ದಂತೆ ಅವರಿಗೆ ಆತ್ಮೀಯ ಸ್ವಾಗತ ನೀಡಲು ಇಡೀ ಸದನ ಎದ್ದು ನಿಂತಿದೆ.ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇದು ನಾಲ್ಕನೇ ಅವಧಿಯಾಗಿದೆ.

ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಯ್ಡು


ಅವರು ನವೆಂಬರ್ 19, 2021 ರಂದು, ಆಗಿನ ಆಡಳಿತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೀಯ ಹೇಳಿಕೆಗಳಿಂದ ನೊಂದು ನಾಯ್ಡು ಸದನ ತೊರೆದಿದ್ದರು. ಮಹಿಳಾ ಸಬಲೀಕರಣದ ಕುರಿತು ನಡೆದ ಚರ್ಚೆಯಲ್ಲಿ ಕೈಮುಗಿದು ಕಣ್ಣೀರು ಹಾಕಿ ನಾಯ್ಡು ಸದನದಿಂದ ಹೊರ ನಡೆದಿದ್ದರು.

ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಎಂದು ಹೇಳಿದ ನಾಯ್ಡು, ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಸಭಾಂಗಣವನ್ನು ಉಲ್ಲೇಖಿಸಿ ಈ ಸಭೆಯು ‘ಕೌರವ ಸಭೆ’ಯಾಗಿದೆ ಎಂದು ಹೇಳಿದರು.

2019 ರ ರಾಜ್ಯ ಚುನಾವಣೆಯಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಚುನಾವಣೆಯಲ್ಲಿ 175 ರಲ್ಲಿ 151 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಜಯ ಸಾಧಿಸಿದರು. ಕಡಪ, ಕರ್ನೂಲ್, ನೆಲ್ಲೂರು ಮತ್ತು ವಿಜಯನಗರಂ ಸೇರಿದಂತೆ ಪ್ರಮುಖ ಜಿಲ್ಲೆಗಳನ್ನು ವೈಎಸ್‌ಆರ್‌ಸಿಪಿ ಗೆದ್ದಿದೆ. ಈ ಮಧ್ಯೆ, ಟಿಡಿಪಿ ಕೇವಲ 23 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Water Satyagraha: ದೆಹಲಿ ನೀರಿನ ಬಿಕ್ಕಟ್ಟು: ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

2019 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ತೊರೆದು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಜೊತೆ ಮೈತ್ರಿಮಾಡಿಕೊಂಡ ನಾಯ್ಡು ಅವರ ಪಕ್ಷ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆರಡರಲ್ಲೂ ಟಿಡಿಪಿ ಸೋಲನುಭವಿಸಿತು, ಇದರ ಪರಿಣಾಮವಾಗಿ ನಾಯ್ಡು ಅವರನ್ನು ರಾಜಕೀಯವಾಗಿ ದೂರವಿಡಲಾಯಿತು.

2024ರಲ್ಲಿ ಸೋತರೆ ನಾಯ್ಡು ಅವರ 50 ವರ್ಷಗಳ ರಾಜಕೀಯ ಜೀವನಕ್ಕೆ ಅಲ್ಲಿ ಮುಗಿಯಬಹುದು ಎಂದು ಊಹಿಸಲಾಗಿತ್ತು. ಆದರೆ ನಾಯ್ಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಆಂಧ್ರಪ್ರದೇಶದ ಸಿಎಂ ಆಗಿ ಮರಳಿದರು.  ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಅವರು ದೊಡ್ಡ ಗೆಲುವುಗಳನ್ನು ಗಳಿಸಿದರು, ಮುಖ್ಯಮಂತ್ರಿ ಗದ್ದುಗೆಗೇರಿದ ಅವರು ಕೇಂದ್ರದಲ್ಲಿ ದಾಖಲೆಯ ಮೂರನೇ ಅವಧಿಯನ್ನು ಗೆದ್ದ NDA ಮೈತ್ರಿಕೂಟದಲ್ಲಿ ಪ್ರಮುಖ ಮುಖವಾಗಿ ಹೊರಹೊಮ್ಮಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ