ತಿರುಮಲದಲ್ಲಿ ಕೊಂಬೆಗೆ ಸಿಲುಕಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವು ಕೊನೆಗೂ ಬಚಾವ್​

|

Updated on: Aug 31, 2020 | 7:00 PM

ಹೈದರಾಬಾದ್​: ಕೊಂಬೆಗೆ ಸಿಲುಕಿಕೊಂಡಿದ್ದ 10 ಅಡಿ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿಯ ತಿರುಮಲದಲ್ಲಿ ನಡೆದಿದೆ. ಮರದ ಕೊಂಬೆಗೆ ಕೆಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಹೆಬ್ಬಾವು ಮೊದಲು ಭಕ್ತರ ಕಣ್ಣಿಗೆ ಬಿತ್ತು. ಕೂಡಲೇ ದೇವಸ್ಥಾನದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ ಸ್ಥಳೀಯರು ಹೆಬ್ಬಾವಿನ ವಿಡಿಯೋ ಮಾಡಲು ಮುಂದಾದರು. ಸ್ಥಳಕ್ಕೆ ಆಗಮಿಸಿದ ದೇವಸ್ಥಾನದ ಸಿಬ್ಬಂದಿ ಉರಗ ತಜ್ಞರ ನೆರವಿನಿಂದ ಕ್ರೇನ್​ ಬಳಸಿ ಹೆಬ್ಬಾವನ್ನು ರಕ್ಷಿಸಿದರು.

ತಿರುಮಲದಲ್ಲಿ ಕೊಂಬೆಗೆ ಸಿಲುಕಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವು ಕೊನೆಗೂ ಬಚಾವ್​
Follow us on

ಹೈದರಾಬಾದ್​: ಕೊಂಬೆಗೆ ಸಿಲುಕಿಕೊಂಡಿದ್ದ 10 ಅಡಿ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿಯ ತಿರುಮಲದಲ್ಲಿ ನಡೆದಿದೆ.

ಮರದ ಕೊಂಬೆಗೆ ಕೆಲವು ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಹೆಬ್ಬಾವು ಮೊದಲು ಭಕ್ತರ ಕಣ್ಣಿಗೆ ಬಿತ್ತು. ಕೂಡಲೇ ದೇವಸ್ಥಾನದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ ಸ್ಥಳೀಯರು ಹೆಬ್ಬಾವಿನ ವಿಡಿಯೋ ಮಾಡಲು ಮುಂದಾದರು.

ಸ್ಥಳಕ್ಕೆ ಆಗಮಿಸಿದ ದೇವಸ್ಥಾನದ ಸಿಬ್ಬಂದಿ ಉರಗ ತಜ್ಞರ ನೆರವಿನಿಂದ ಕ್ರೇನ್​ ಬಳಸಿ ಹೆಬ್ಬಾವನ್ನು ರಕ್ಷಿಸಿದರು.