ಮುಂಬೈನಲ್ಲಿ ನಾಳೆ ಗಣೇಶ ವಿಸರ್ಜನೆ: 400 ಕೆಜಿ ಆರ್​​ಡಿಎಕ್ಸ್​, 34 ವಾಹನಗಳಲ್ಲಿದೆ ಬಾಂಬ್, ಬಂತು ಎಚ್ಚರಿಕೆ ಸಂದೇಶ

Mumbai Bomb Threat: ಮುಂಬೈನಲ್ಲಿ 34 ವಾಹನಗಳಲ್ಲಿ ಮಾನವ ಬಾಂಬ್​​ಗಳನ್ನು ಇರಿಸಲಾಗಿದೆ ಎಂದು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ಬಂದಿದೆ. ಲಷ್ಕರ್-ಎ-ಜಿಹಾದಿ ಎಂಬ ಸಂಘಟನೆಯಿಂದ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಬೈಯನ್ನು ಬೆಚ್ಚಿಬೀಳಿಸುವ ಸಂದೇಶವೊಂದು ಪೊಲೀಸರಿಗೆ ಬಂದಿದೆ. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ 34 ವಾಹನಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಎಚ್ಚರಿಕೆ ಸಂದೇಶ ಬಂದಿದೆ.

ಮುಂಬೈನಲ್ಲಿ ನಾಳೆ ಗಣೇಶ ವಿಸರ್ಜನೆ: 400 ಕೆಜಿ ಆರ್​​ಡಿಎಕ್ಸ್​, 34 ವಾಹನಗಳಲ್ಲಿದೆ ಬಾಂಬ್, ಬಂತು ಎಚ್ಚರಿಕೆ ಸಂದೇಶ
ಪೊಲೀಸ್
Image Credit source: India TV

Updated on: Sep 05, 2025 | 12:50 PM

ಮುಂಬೈ, ಸೆಪ್ಟೆಂಬರ್ 05: ನಾಳೆ ಅನಂತ ಚತುರ್ದಶಿ ಹಾಗೂ ಗಣೇಶನ ವಿಸರ್ಜನೆ ಮಾಡುವ ದಿನ. ಮುಂಬೈನಲ್ಲಿ 34 ವಾಹನಗಳಲ್ಲಿ ಮಾನವ ಬಾಂಬ್​​ಗಳನ್ನು ಇರಿಸಲಾಗಿದೆ ಎಂದು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ಬಂದಿದ್ದು, ಪೊಲೀಸರಿಗೆ ತಲೆ ಬಿಸಿ ಶುರುವಾಗಿದೆ.  ಲಷ್ಕರ್-ಎ-ಜಿಹಾದಿ ಎಂಬ ಸಂಘಟನೆಯಿಂದ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಬೈಯನ್ನು ಬೆಚ್ಚಿಬೀಳಿಸುವ ಸಂದೇಶವೊಂದು ಪೊಲೀಸರಿಗೆ ಬಂದಿದೆ.  ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ 34 ವಾಹನಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಎಚ್ಚರಿಕೆ ಸಂದೇಶ ಬಂದಿದೆ.

ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಸ್ಫೋಟಗಳಿಗೆ 400 ಕೆಜಿ ಆರ್‌ಡಿಎಕ್ಸ್ ಬಳಸಲಾಗುವುದು ಎಂದು ಹೇಳಿದೆ. ಮುಂಬೈ ಪೊಲೀಸರು ಜಾಗರೂಕರಾಗಿದ್ದಾರೆ ಮತ್ತು ಇಡೀ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆಯ ಪ್ರತಿಯೊಂದು ಸಾಧ್ಯತೆ ಮತ್ತು ಮೂಲವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ:  ಮಹಾರಾಷ್ಟ್ರ: ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ, ಓರ್ವ ಶಂಕಿತನ ಬಂಧನ

ನಾಳೆ ಮುಂಬೈನಲ್ಲಿ ಗಣೇಶ ವಿಸರ್ಜನೆ ಸಮಾರಂಭ. ಅನಂತ ಚತುರ್ದಶಿ ಇರುವುದರಿಂದ, ಲಕ್ಷಾಂತರ ಜನ ಬೀದಿಗಿಳಿಯುತ್ತಾರೆ.ಆದಾಗ್ಯೂ, ಅದಕ್ಕೂ ಮೊದಲು, ಉದ್ವಿಗ್ನತೆಯನ್ನು ಹೆಚ್ಚಿಸುವ ಸುದ್ದಿ ಕೇಳಿಬಂದಿದೆ.ಅನಂತ ಚತುರ್ದಶಿಯ ದಿನದಂದು, ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 12:49 pm, Fri, 5 September 25